ಕಾಲಿವುಡ್ ನ ಸ್ಟಾರ್ ನಟರಲ್ಲಿ ವಿಶಾಲ್ ಸಹ ಒಬ್ಬರಾಗಿದ್ದಾರೆ. ಆತ ಸಾಲು ಸಾಲು ಹಿಟ್ ಸಿನೆಮಾಗಳ ಮೂಲಕ ದೊಡ್ಡ ಅಭಿಮಾನಿಗ ಬಳಗವನ್ನು ಸಹ ದಕ್ಕಿಸಿಕೊಂಡಿದ್ದಾರೆ. ಇನ್ನೂ ಆತ ವಿವಾದಗಳಿಂದ ದೂರವಿರಲು ಪ್ರಯತ್ನ ಮಾಡುತ್ತಿರುತ್ತಾರೆ. ಆದರೆ ಆತನನ್ನು ವಿವಾದಗಳು ದೂರ ಆಗಲು ಬಿಡುವುದಿಲ್ಲ ಎನ್ನಬಹುದು. ಒಂದಲ್ಲ ಒಂದು ಕಾರಣದಿಂದ ವಿವಾದಗಳಲ್ಲಿ ಅವರ ಹೆಸರು ಕೇಳಿಬರುತ್ತಿರುತ್ತದೆ. ಈ ಹಿಂದೆ ಆತನ ಮೇಲೆ ಹೈಕೋರ್ಟ್‌ನಲ್ಲಿ ದಾಖಲಾಗಿದ್ದ ಕೇಸೊಂದು ಇದೀಗ ಖುಲಾಸೆಯಾಗಿದೆ ಎಂಬ ಮಾಹಿತಿ ಕೇಳಿಬರುತ್ತಿದೆ.
ಸುಮಾರು ದಿನಗಳ ಹಿಂದೆ ವಿಶಾಲ್ ಅನ್ನು ಚೆಳಿಯನ್ ಎಂಬಾತನ ಬಳಿ ತನ್ನ ನಿರ್ಮಾಣ ಸಂಸ್ಥೆ ಫಿಲಿಂ ಫ್ಯಾಕ್ಟರಿ ಗಾಗಿ 21 ಕೋಟಿ ಸಾಲ ಪಡೆದಿದ್ದನಂತೆ. ಈ ಸಾಲವನ್ನು ದೈತ್ಯ ಲೈಕಾ ನಿರ್ಮಾಣ ಸಂಸ್ಥೆ ಸದರಿ ಫೈನಾನ್ಸಿಯರ್ ಗೆ ನೀಡಿತ್ತು. ಇದಕ್ಕೆ ಪ್ರತಿಫಲವಾಗಿ ವಿಶಾಲ್ ಜೊತೆಗೆ ಲೈಕಾ ಸಂಸ್ಥೆ ಒಪ್ಪದವೊಂದನ್ನು ಮಾಡಿಕೊಂಡಿತ್ತು. ಅದರಂತೆ ವಿಶಾಲ್ ರವರ ಎಲ್ಲಾ ಸಿನೆಮಾಗಳ ವಿತರಣೆ ಹಕ್ಕನ್ನು ಲೈಕಾ ಸಂಸ್ಥೆಗೆ ಸ್ವಂತ ಎಂದು ಒಪ್ಪಂದ ಮಾಡಿಕೊಂಡಿದ್ದರಂತೆ. ಆದರೆ ವಿಶಾಲ್ ಈ ಒಪ್ಪಂದವನ್ನು ಮುರಿದು ತಮ್ಮ ಸಾಮಾನ್ಯುಡು ಎಂಬ ಸಿನೆಮಾವನ್ನು ಆತನೆ ರಿಲೀಸ್ ಮಾಡಿದ್ದರು. ಇದರಿಂದ ಲೈಕಾ ಸಂಸ್ಥೆ ಕೋರ್ಟ್‌ನಲ್ಲಿ ಕೇಸ್ ದಾಖಲಿಸಿತ್ತು. ವಿಶಾಲ್ 15 ಕೋಟಿ ಲೈಕಾ ಸಂಸ್ಥೆಗೆ ಫಿಕ್ಸ್ಡ್ ಡಿಪಾಜಿಟ್ ಕಟ್ಟಬೇಕು ಎಂದು ಆದೇಶ ಮಾಡಿತ್ತು.
ಆದರೆ ಈ ಕೇಸಿನ ಸಂಬಂಧ ವಿಶಾಲ್ ಆಧಾರಗಳೊಂದಿಗೆ ಕೋರ್ಟ್‌ನ ಮೊರೆಹೋದರಲು. ತಮ್ಮ ನಿರ್ಮಾಣ ಸಂಸ್ಥೆ ಇಲ್ಲಿಯವರೆಗೂ ಯಾವುದೇ ಸಿನೆಮಾ ನಿರ್ಮಾಣ ಮಾಡಲಿಲ್ಲ ಎಂದು ವಿಶಾಲ್ ವಕೀಲ ವಾದ ಮಂಡಿಸಿದ್ದರು. ಈ ವೇಳೆ ಲೈಕಾ ಸಂಸ್ಥೆ ಸಹ ಯಾವುದೇ ಆಧಾರಗಳನ್ನು ಹಾಜರು ಪಡಿಸಲಿಲ್ಲ. ಇದರಿಂದ ನ್ಯಾಯಾಲಯ ವಿಶಾಲ್ 15 ಕೋಟಿ ಡಿಪಾಸಿಟ್ ಕಟ್ಟಬೇಕು ಎಂಬ ಕೇಸನ್ನು ಖುಲಾಸೆ ಮಾಡಿದ್ದಾರೆ. ಆದರೆ ಲೈಕಾ ಸಂಸ್ಥೆಗೆ ಕಟ್ಟಬೇಕಾಗಿರುವ ಸಾಲದ ವಿವಾದಕ್ಕೆ ಸಂಬಂಧಿಸಿದಂತೆ ಇದೇ ತಿಂಗಳು 26 ರಂದು ವಿಚಾರಣೆ ನಡೆಯಲಿದೆ ಎಂದು ತಿಳಿದುಬಂದಿದೆ. ಸದ್ಯ ವಿಶಾಲ್ ಈ ಪ್ರಕರಣದಿಂದ ಕೊಂಚ ನಿರಾಳರಾಗಿದ್ದಾರೆ.
ಇನ್ನೂ ವಿಶಾಲ್ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಬ್ಯುಸಿಯಾಗಿದ್ದಾರೆ. ತಮಿಳು ಮೂಲದ ನಟನಾದರೂ ಸಹ ಆತನಿಗೆ ತೆಲುಗಿನಲ್ಲೂ ಸಹ ಅಪಾರ ಸಂಖ್ಯೆಯ ಅಭಿಮಾನಿ ಬಳಗವಿದೆ. ಸದ್ಯ ಆತ ಮಾರ್ಕ್ ಆಂಟೋನಿ ಹಾಗೂ ತುಪ್ಪರಿವಾಳನ್ ಎಂಬ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
