ನನ್ನ ಜೊತೆ ಡೇಟ್ ಮಾಡಲು ಯಾರೂ ಇಷ್ಟಪಡೊಲ್ಲ ಎಂದ ಬೋಲ್ಡ್ ಬ್ಯೂಟಿ ಉರ್ಫಿ, ವೈರಲ್ ಆದ ಕಾಮೆಂಟ್ಸ್…..!

ಬಾಲಿವುಡ್ ಸಿನಿರಂಗದಲ್ಲಿ ವಿಚಿತ್ರವಾದ ಬಟ್ಟೆಗಳನ್ನು ಧರಿಸಿ ಸುದ್ದಿಯಾಗುತ್ತಿರುವ ನಟಿಯರಲ್ಲಿ ಉರ್ಫಿ ಜಾವೇದ್ ಅಗ್ರ ಸ್ಥಾನದಲ್ಲಿರುತ್ತಾರೆ. ಸಾಮಾನ್ಯವಾಗಿ ಬಾಲಿವುಡ್ ನಲ್ಲಿ ಗ್ಲಾಮರ್‍ ಪ್ರದರ್ಶನ ಕೊಂಚ ಓವರ್‍ ಆಗಿಯೇ ಇರುತ್ತದೆ. ಆದರೆ ಉರ್ಫಿ ಎಲ್ಲರಿಗಿಂತಲೂ ಸಹ ಓವರ್‍…

ಬಾಲಿವುಡ್ ಸಿನಿರಂಗದಲ್ಲಿ ವಿಚಿತ್ರವಾದ ಬಟ್ಟೆಗಳನ್ನು ಧರಿಸಿ ಸುದ್ದಿಯಾಗುತ್ತಿರುವ ನಟಿಯರಲ್ಲಿ ಉರ್ಫಿ ಜಾವೇದ್ ಅಗ್ರ ಸ್ಥಾನದಲ್ಲಿರುತ್ತಾರೆ. ಸಾಮಾನ್ಯವಾಗಿ ಬಾಲಿವುಡ್ ನಲ್ಲಿ ಗ್ಲಾಮರ್‍ ಪ್ರದರ್ಶನ ಕೊಂಚ ಓವರ್‍ ಆಗಿಯೇ ಇರುತ್ತದೆ. ಆದರೆ ಉರ್ಫಿ ಎಲ್ಲರಿಗಿಂತಲೂ ಸಹ ಓವರ್‍ ಆಗಿಯೇ ಬೋಲ್ಡ್ ಪೊಟೋಸ್ ಶೇರ್‍ ಮಾಡುತ್ತಿರುತ್ತಾರೆ. ಇದೀಗ ಆಕೆ ಸಂದರ್ಶನವೊಂದರಲ್ಲಿ ಹುಡುಗರ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಹುಡುಗರಾಗಲಿ ಅಥವಾ ಹುಡುಗಿಯರಾಗಲಿ ನನ್ನ ಜೊತೆ ಡೇಟ್ ಮಾಡಲು ಇಷ್ಟಪಡುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಆಕೆಯ ಹೇಳಿಕೆಗಳು ಇದೀಗ ವೈರಲ್ ಆಗುತ್ತಿವೆ.

ಸಂದರ್ಶನವೊಂದರಲ್ಲಿ ಉರ್ಫಿ ಭಾಗಿಯಾಗಿದ್ದು, ಆಂಕರ್‍ ಆಕೆಗೆ ಈ ಕಾಲದ ಹುಡುಗರು ಹುಡುಗಿಯರನ್ನು ಅರ್ಥ ಮಾಡಿಕೊಳ್ಳಲು ವಿಫಲರಾಗುತ್ತಿದ್ದಾರೆಯೇ ಎಂಬ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಉರ್ಫಿ ಉತ್ತರ ನೀಡುತ್ತಾ, ಮುಂಬೈ ನಲ್ಲಿರುವ ಜನರಲ್ಲಿ ಕೆಲವರು ಹೆಣ್ಣು ಮಕ್ಕಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ನಾನು ಅನೇಕ ಕಡೆ ಹುಡುಗರನ್ನು ಭೇಟಿ ಮಾಡಿದ್ದೇನೆ ನಾನು ಹುಟ್ಟಿ ಬೆಳೆದ ಜಾಗಕ್ಕೂ ಈಗ ಇರುವ ಜಾಗಕ್ಕೂ ತುಂಬಾ ವ್ಯತ್ಯಾಸವಿದೆ. ಮುಂಬೈ ಹುಡುಗರು ತುಂಬಾ ಒಪೆನ್ ಮೈಂಡ್ ಇರುವಂತಹವರು. ಅವರು ಬೋಲ್ಡ್ ಆಗಿ ಸರ್ಪೋಟ್ ಮಾಡುತ್ತಾರೆ. ಆದರೆ ಹುಡುಗರ ಬಗ್ಗೆ ನನಗೆ ಹೆಚ್ಚು ಗೊತ್ತಿಲ್ಲ. ಅದಕ್ಕೆ ಕಾರಣ ನನ್ನ ಜೊತೆ ಯಾರೂ ಡೇಟ್ ಮಾಡಿಲ್ಲ. ನನ್ನೊಂದಿಗೆ ಎಲ್ಲರೂ ಸ್ನೇಹಿತರಂತೆ ಇರುತ್ತಾರೆ. ಸ್ನೇಹಿತರ ಜೊತೆ ಒಂದು ಮಾದರಿ, ಗರ್ಲ್ ಫ್ರೆಂಡ್ ಜೊತೆ ಒಂದು ಮಾದರಿ ವರ್ತನೆ ಮಾಡಿದರೇ ನನಗೆ ತಿಳಿಯುವುದಿಲ್ಲ. ನನ್ನ ಜೊತೆ ಸ್ನೇಹಿತರಾಗಿರುವ ಎಲ್ಲರೂ ಒಪೆನ್ ಮೈಂಡ್ ಹೊಂದಿದ್ದಾರೆ ಎಂದು ಉರ್ಫಿ ಹೇಳಿದ್ದಾರೆ.

ಅಷ್ಟೇಅಲ್ಲದೇ ನನಗೆ ಲವ್ ಡೇಟಿಂಗ್ ಮೇಲೆ ಇಂಟ್ರಸ್ಟ್ ಸಹ ಇಲ್ಲ. ಆಗಿದ್ದಾಗ ಹುಡುಗರು ಹೇಗೆ ಎಂದು ಅರ್ಥ ಮಾಡಿಕೊಳ್ಳಲು ನನಗೆ ಆಗುತ್ತೆ. ಇನ್ನೂ ಇಂಟರ್‍ ನೆಟ್ ನಲ್ಲಿ ನನ್ನನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಾರೆ. ಆದರೆ ನೇರವಾಗಿ ನನ್ನನ್ನು ಭೇಟಿ ಮಾಡಿ ಮಾತನಾಡುವಂತಹ ವ್ಯಕ್ತಿಗಳು ಉರ್ಫಿ ನೀನು ತುಂಬಾನೆ ವಿಭಿನ್ನ, ನಿನ್ನ ಉಡುಪುಗಳು ಹಾಗೂ ಟ್ರೋಲ್ ಗಳನ್ನು ನೋಡಿ ತೀರ್ಮಾನ ತೆಗೆದುಕೊಂಡು ತಪ್ಪು ಮಾಡಿದ್ದೀವಿ ಎಂದು ಸಹ ಹೇಳುತ್ತಾರೆ. ನಾನೂ ಎಲ್ಲೂ ಹಣ ವ್ಯರ್ಥ ಮಾಡಲ್ಲ, ಹುಡುಗ ಜೊತೆಗೆ ಹೋಗಿ ಹೆಸರು ಕೆಡಿಸಿಕೊಂಡಿಲ್ಲ. ನನ್ನ ಜೊತೆಗೆ ಹುಡುಗರು ಫ್ಲರ್ಟ್ ಸಹ ಮಾಡೊಲ್ಲ. ಅದಕ್ಕೆ ಕಾರಣ ನಾನು ವಿಡಿಯೋ ಮಾಡಿ ಪೋಸ್ಟ್ ಮಾಡುತ್ತೇನೆ ಎಂದು ಭಯ ಪಡಿತ್ತಾರೆ. ನನ್ನ ಜೊತೆ ಫ್ಲರ್ಟ್ ಮಾಡಲು ಇಷ್ಟ ಇದ್ದರೇ ಮಾಡಬಹುದು ನಾನು ಏನು ಅಂದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಇನ್ನೂ ಆಕೆಯ ಈ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.