5 ವರ್ಷದ ಹೆತ್ತ ಮಗಳ ಮೇಲೆ ಅತ್ಯಾಚಾರವೆಸಗಿದ್ದ ತಂದೆಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್….!

Follow Us :

ಕಠಿಣ ಕಾನೂನುಗಳಿದ್ದರೂ ಸಹ ನಮ್ಮ ದೇಶದಲ್ಲಿ ಬಾಲಕಿಯರಿಂದ ಹಿಡಿದು ವಯೋವೃದ್ದರ ಮೇಲೂ ಸಹ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿದೆ. ಕೆಲವು ದಿನಗಳ ಹಿಂದೆ ಹೆತ್ತ ಮಗಳ ಮೇಲೆ ಅತ್ಯಾಚಾರವೆಸಗಿದ ಪಾಪಿ ತಂದೆಗೆ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆಯ ಜೊತೆಗೆ 6 ಲಕ್ಷ ಪರಿಹಾರ ಕೊಡುವಂತೆ ಆದೇಶ ಹೊರಡಿಸಿದೆ.

ಚಾಮರಾಜನಗರ ಜಿಲ್ಲೆಯ ವ್ಯಾಪ್ತಿಯ ಸೈಯದ್ ಮುಜಾಮಿಲ್ (45) ಎಂಬಾತ ತನ್ನ 5 ವರ್ಷದ ಮಗಳ ಮೇಲೆ ಅತ್ಯಾಚಾರ ವೆಸಗಿದ್ದ. ಮನೆಯಲ್ಲಿ ಹೆಂಡತಿ ಸೇರಿದಂತೆ ಯಾರು ಇಲ್ಲದ ಸಮಯದಲ್ಲಿ ಈ ಪಾಪಿ ಮಗಳ ಮೇಲೆ ಅತ್ಯಾಚಾರ ವೆಸಗಿದ್ದ. ಈ ಬಗ್ಗೆ ಸಂತ್ರಸ್ತೆ ಬಾಲಕಿ ತಾಯಿ ದೂರು ನೀಡಿದ್ದರು. ಬಳಿಕ ಪೊಲೀಸರು ಈ ಪಾಪಿಯನ್ನು ವಶಕ್ಕೆ ಪಡೆದು ಜೈಲಿಗೆ ಹಾಕಿದ್ದರು. ಬಳಿಕ ಪೊಲೀಸ್ ಇಲಾಖೆಯಿಂದ ಚಾರ್ಜ್ ಶೀಟ್ ಸಹ ಸಲ್ಲಿಸಿದ್ದು, ಮಕ್ಕಳ ಸ್ನೇಹಿ ಹಾಗೂ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಆತನಿಗೆ 20 ವರ್ಷ ಜೈಲು ಶಿಕ್ಷೆಯ ಜೊತೆಗೆ 6 ಲಕ್ಷ ಪರಿಹಾರ ನೀಡಬೇಕೆಂದು ಆದೇಶ ಹೊರಡಿಸಿದೆ ಎಂದು ತಿಳಿದುಬಂದಿದೆ.

ಸೈಯದ್ ಮುಜಾಮಿಲ್ ಮನೆಯಲ್ಲಿ ಹೆಂಡತಿ ಹಾಗೂ ಬೇರೆ ಯಾರೂ ಇಲ್ಲದ ಸಮಯ ನೋಡಿ ಮಗಳ ಮೇಲೆ ಅತ್ಯಾಚಾರವೆಸಗಿದ್ದ. ಸಂತ್ರಸ್ತೆ ಬಾಲಕಿಯ ತಾಯಿಯು ಈಗಾಗಲೇ ಎರಡು ಮದುವೆಯಾಗಿದ್ದರು. ಅವರಿಂದ ತಲಾಖ್ ಪಡೆದು ಸೈಯದ್ ಮುಜಾಮಿಲ್ ನನ್ನು ಮೂರನೇ ಮದುವೆಯಾಗಿದ್ದರು. ಮುಜಾಮಿಲ್ ಅತ್ಯಾಚಾರ ವೆಸಗಿದ ಮಗಳು ತನ್ನ ಸ್ವಂತ ಮಗಳು ಅಲ್ಲ ಎಂದು ವಿಕೃತಿಯನ್ನು ಮೆರೆದಿದ್ದಾನೆ. ಚಿಕ್ಕ ಮಗು ಎಂದು ಸಹ ಕರುಣೆ ತೋರದೇ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಇದೀಗ ಮುಜಾಮಿಲ್ ಗೆ ಶಿಕ್ಷೆ ನೀಡಲಾಗಿದೆ. ಇದಕ್ಕಿಂತ ದೊಡ್ಡದಾದ ಶಿಕ್ಷೆ ನೀಡಿದಾಗ ಇಂತಹ ಪಾಪಿಗಳನ್ನು ತಡೆಯಬಹುದು ಎಂದು ಅನೇಕರು ಅಭಿಪ್ರಾಯವಾಗಿದೆ.