ಅಂತಹುವನ್ನು ನಾನು ನೋಡಲ್ಲ ಅದಕ್ಕಾಗಿಯೇ ನಾನು ಪ್ರಶಾಂತವಾಗಿದ್ದೇನೆ ಎಂದ ಆಲಿಯಾ, ವೈರಲ್ ಆದ ಕಾಮೆಂಟ್ಸ್…..!

ಬಾಲಿವುಡ್ ಸಿನಿರಂಗದ ಕ್ಯೂಟ್ ಬ್ಯೂಟಿ ಎಂತಲೇ ಕ್ರೇಜ್ ಪಡೆದುಕೊಂಡಿರುವ ಸ್ಟಾರ್‍ ನಟಿ ಆಲಿಯಾ ಮದುವೆಯಾಗಿ ತಾಯಿಯಾದರೂ ಸಹ ಯಂಗ್ ನಟಿಯರನ್ನೂ ಸಹ ಮೀರಿಸುವಂತಹ ದೇಹದ ಮೈಮಾಟ ಹೊಂದಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಅಂಡ್ ಬೋಲ್ಡ್…

ಬಾಲಿವುಡ್ ಸಿನಿರಂಗದ ಕ್ಯೂಟ್ ಬ್ಯೂಟಿ ಎಂತಲೇ ಕ್ರೇಜ್ ಪಡೆದುಕೊಂಡಿರುವ ಸ್ಟಾರ್‍ ನಟಿ ಆಲಿಯಾ ಮದುವೆಯಾಗಿ ತಾಯಿಯಾದರೂ ಸಹ ಯಂಗ್ ನಟಿಯರನ್ನೂ ಸಹ ಮೀರಿಸುವಂತಹ ದೇಹದ ಮೈಮಾಟ ಹೊಂದಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಅಂಡ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಮತಷ್ಟು ಸದ್ದು ಮಾಡುತ್ತಿರುತ್ತಾರೆ. ಇದೀಗ ಆಕೆ ಕೆಲವೊಂದು ಕಾಮೆಂಟ್ಸ್ ಮಾಡಿದ್ದು, ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಬಾಲಿವುಡ್ ನಲ್ಲಿ ಕ್ಯೂಟ್ ಅಂಡ್ ಹಾಟ್ ಬ್ಯೂಟಿ ಎಂದೇ ಖ್ಯಾತಿ ಪಡೆದುಕೊಂಡ ಆಲಿಯಾ ಕಳೆದ ವರ್ಷ ಏಪ್ರಿಲ್ 14 ರಂದು ರಣಬೀರ್‍ ಕಪೂರ್‍ ಜೊತೆಗೆ ಅದ್ದೂರಿಯಾಗಿ ಮದುವೆಯಾದರು. ಮುಂಬೈನಲ್ಲಿ ಇವರ ವಿವಾಹ ಮಹೋತ್ಸವ ಅದ್ದೂರಿಯಾಗಿ ನಡೆದಿತ್ತು. ನಟಿ ಆಲಿಯಾ ಭಟ್ ಕಳೆದ ನವೆಂಬರ್‍ 6 ರಂದು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ಕೊಟ್ಟರು. ಈ ಕಾರಣದಿಂದ ಆಕೆ ಸಿನೆಮಾಗಳಿಂದ ಬ್ರೇಕ್ ಪಡೆದುಕೊಂಡಿದ್ದರು. ಇದೀಗ ಮತ್ತೆ ಸಿನಿರಂಗದಲ್ಲಿ ಆಕ್ಟೀವ್ ಆಗಿರುತ್ತಾರೆ. RRR ಸಿನೆಮಾದ ಮೂಲಕ ಮತಷ್ಟು ಫೇಂ ಪಡೆದುಕೊಂಡ ಆಲಿಯಾ ಬಳಿಕ ಸೌತ್ ನಲ್ಲಿ ಯಾವುದೇ ಸಿನೆಮಾ ಮಾಡುತ್ತಿಲ್ಲ. ಸದ್ಯ ಬಾಲಿವುಡ್ ಸಿನೆಮಾಗಳ ಮೇಲೆ ಪುಲ್ ಪೋಕಸ್ ಇಟ್ಟಿದ್ದಾರೆ. ಇದೀಗ ಆಲಿಯಾ ಕೆಲವೊಂದು ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದು, ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ನಟಿ ಆಲಿಯಾ ಭಟ್ ಇತ್ತೀಚಿಗಷ್ಟೆ ರಾಷ್ಟ್ರೀಯ ಅವಾರ್ಡ್ ಪಡೆದುಕೊಂಡ ವಿಚಾರ ತಿಳಿದೇ ಇದೆ. ಮದುವೆ ಸೀರೆಯಲ್ಲಿ ಆಲಿಯಾ ಭಟ್ ಅವಾರ್ಡ್ ಪಡೆದುಕೊಂಡಿದ್ದರು. ಈ ಕುರಿತಂತೆ ಆಲಿಯಾ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಈ ಸೀರೆ ನನಗೆ ಪಂಚಪ್ರಾಣ, ಯಾವುದೇ ದೊಡ್ಡ ಈವೆಂಟ್ ನಡೆದರೇ ಮೊದಲು ನನಗೆ ಈ ಸೀರೆಯೇ ನೆನಪಾಗುತ್ತದೆ. ಆಭರಣಗಳ ಮೇಲೆ ಸಹ ಇಂಟ್ರಸ್ಟ್ ಇರೊಲ್ಲ. ಆ ಸೀರೆ ಆಕೆಗೆ ಎಷ್ಟು ಪ್ರಮುಖ ಎಂದು ಹೇಳಿದ್ದಾರೆ. ನಟಿಯರ ಡ್ರೆಸ್ಸಿಂಗ್ ಸೆನ್ಸ್ ಬಗ್ಗೆ ಸಹ ಆಲಿಯಾ ಮಾತನಾಡಿದ್ದಾರೆ. ನಟಿಯರು ಈವೆಂಟ್ ಗಳಲ್ಲಿ ವಿಭಿನ್ನವಾದ ಡ್ರೆಸ್ ಗಳಲ್ಲಿ ಕಾಣಿಸಲು ಇಷ್ಟಪಡುತ್ತಾರೆ. ಆದರೆ ನನಗೆ ಮಾತ್ರ ಈ ಸೀರೆಯಲ್ಲಿ ಕಾಣಿಸಿಕೊಳ್ಳಬೇಕು ಅನ್ನಿಸುತ್ತದೆ ನನಗೆ ಅದೇ ತೃಪ್ತಿಯಾಗಿರುತ್ತದೆ ಎಂದು ಆಲಿಯಾ ಹೇಳಿದ್ದಾರೆ.

ಇನ್ನು ಇದೇ ವೇಳೆ ಸೋಷಿಯಲ್ ಮಿಡಿಯಾದಲ್ಲಿ ಎದುರಾಗುವಂತಹ ಟ್ರೋಲ್ ಗಳ ಬಗ್ಗೆ ಸಹ ಆಲಿಯಾ ಮಾತನಾಡಿದ್ದಾರೆ. ತನ್ನ ಮೇಲಿನ ಟ್ರೋಲ್ ಗಳ ಬಗ್ಗೆ ರಿಯಾಕ್ಟ್ ಆಗುತ್ತಾ, ಸೆಲೆಬ್ರೆಟಿಗಳ ಬಗ್ಗೆ ಅಂತಹ ಟ್ರೋಲ್ ಗಳು ಸರ್ವೇ ಸಾಮಾನ್ಯ, ನಾವು ಪ್ರಶಾಂತವಾಗಿ ಇರಬೇಕು ಅಂದರೇ ಫ್ಯಾಮಿಲಿ ಪರವಾಗಿ ಪ್ರಶಾಂತವಾಗಿರಬೇಕಾದರೇ ಮುಖ್ಯವಾಗಿ ನಾವು ಸೋಷಿಯಲ್ ಮಿಡಿಯಾದಿಂದ ದೂರ ಇರಬೇಕು. ಸೋಷಿಯಲ್ ಮಿಡಿಯಾದಲ್ಲಿನ ಕಾಮೆಂಟ್ ಗಳು ಓದಿದರೇ ನಮ್ಮ ಮನಃಶಾಂತಿ ನಾಶವಾಗುತ್ತದೆ. ನಾನು ಅವೆಲ್ಲವನ್ನೂ ಕಿವಿಗೆ ಹಾಕಿಕೊಳ್ಳುವುದಿಲ್ಲ ಆ ಕಾರಣದಿಂದಲೇ ನಾನು ಪ್ರಶಾಂತವಾಗಿದ್ದೇನೆ ಎಂದು ಹೇಳಿದ್ದಾರೆ.