ಮತ್ತೊಂದು ವಿವಾದ ಸೃಷ್ಟಿಸಿದ ರಾಹುಲ್ ಗಾಂಧಿ, ಜೈ ಶ್ರೀರಾಮ್ ಅಂತ ಜಪಿಸುತ್ತಾ ಹಸಿವಿನಿಂದ ಸಾಯಬೇಕು ಎಂದ ರಾಗಾ…..!

Follow Us :

ಸದ್ಯ ಭಾರತದಲ್ಲಿ ಲೋಕಸಭಾ ಚುನಾವಣೆಯದ್ದೆ ಸದ್ದು. ತಮ್ಮ ಪಕ್ಷಗಳು ಅಧಿಕಾರಕ್ಕೆ ತರಬೇಕೆಂಬ ಕಾತುರದಿಂದ ಅವರದ್ದೇ ಆದ ಶೈಲಿಯಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಕಾಂಗ್ರೇಸ್ ಪಕ್ಷದ ಪರವಾಗಿ ಯುವ ನಾಯಕ ರಾಹುಲ್ ಗಾಂಧಿ ದೇಶದಾದ್ಯಂತ ಸಂಚರಿಸುತ್ತಾ ಪ್ರಚಾರ ನಡೆಸುತ್ತಿದ್ದಾರೆ. ಅವರ ಪ್ರಚಾರದ ಭಾಷಣಗಳಲ್ಲಿ ಅನೇಕ ವಿವಾದಿತ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಇದೀಗ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ.

ಕಾಂಗ್ರೇಸ್ ಪಕ್ಷ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ನಡೆಸುತ್ತಿದೆ. ಮಧ್ಯಪ್ರದೇಶದ ಸಾರಂಗ್ ಪುರದಿಂದ ಪುನರ್‍ ಆರಂಭಗೊಂಡ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಮಾತನಾಡುತ್ತಾ ಪ್ರಧಾನಿ ಮೋದಿಯವರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಈ ಯಾತ್ರೆಯ ಸಮಯದಲ್ಲಿ ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಹಾಗೂ ಜೈ ಶ್ರೀರಾಮ್ ಎಂದು ಘೊಷಣೆಗಳನ್ನು ಕೂಗುವ ಮೂಲಕ ಸ್ವಾಗತಿಸಿದ್ದಾರೆ. ಇದೇ ಸಮಯದಲ್ಲಿ ರಾಹುಲ್ ಗಾಂಧಿಗೆ ಆಲೂಗಡ್ಡೆಯನ್ನು ನೀಡಿ, ಅದರ ಬದಲಾಗಿ ಚಿನ್ನ ನೀಡುವಂತೆ ಕೇಳಿದ ಘಟನೆ ಸಹ ನಡೆದಿದೆ. ಇದೇ ವೇಳೆ ರಾಹುಲ್ ಗಾಂಧಿ ಮಾತನಾಡುತ್ತಾ ಯುವ ನಿರುದ್ಯೋಗಿಗಳು ಸೋಷಿಯಲ್ ಮಿಡಿಯಾದಲ್ಲಿ ದಿನ ವಿಡೀ ರೀಲ್ಸ್ ನೋಡುತ್ತಿರುತ್ತಾರೆ. ನೀವು ದಿನವಿಡಿ ಪೋನ್ ಗಳನ್ನು ನೋಡಿ, ಜೈ ಶ್ರೀ ರಾಮ್ ಎಂದು ಜಪಿಸಿ, ಜೊತೆಗೆ ಹಸಿವಿನಿಂದ ಸಾಯಬೇಕು ಎಂದು ಪ್ರಧಾನಿಯ ಬಯಕೆಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇನ್ನೂ ಈ ರಾಹುಲ್ ಗಾಂಧಿ ನೀಡಿದ ಈ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ಸಂಬಂಧ ರಾಹುಲ್ ಗಾಂಧಿಯವರ ಹೇಳಿಕೆಯ ವಿಡಿಯೋ ಸಹ ವೈರಲ್ ಆಗುತ್ತಿದೆ. ಅನೇಕ ಬಿಜೆಪಿ ನಾಯಕರು ಈ ಕುರಿತು ಆಕ್ರೋಷ ಹೊರಹಾಕುತ್ತಿದ್ದಾರೆ. ರಾಮಮಂದಿರದ ಬಗ್ಗೆ ಕಾಂಗ್ರೇಸ್ ನಾಯಕರಿಗೆ ಅಸೂಯೆ. ಓಟ್ ಬ್ಯಾಂಕ್ ಗಾಗಿ ಅವರು ಅಪಪ್ರಚಾರ ನಡೆಸುತ್ತಿದ್ದಾರೆ. ಇನ್ನೂ ರಾಮಮಂದಿರದ ಉದ್ಘಾಟನೆಯ ಸಮಯದಲ್ಲಿ ಕಾಂಗ್ರೆಸ್ ದೂರವೇ ಉಳಿದಿತ್ತು. ಇದೀಗ ರಾಹುಲ್ ಗಾಂಧಿ ಜೈ ಶ್ರೀರಾಮ್ ಘೋಷಣೆಯ ಬಗ್ಗೆ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.