ಜಗತ್ತು ಒಪ್ಪಿದ ಮೋದಿಯ ಬಗ್ಗೆ ಮಾತಾಡೋಕೆ ಸಿದ್ದರಾಮಯ್ಯ ಯಾರು ಎಂದು ಗುಡುಗಿದ ದೇವೆಗೌಡ……!

Follow Us :

ಕೇಂದ್ರ ಸರ್ಕಾರ ಅನುದಾನ ಕೊಟ್ಟಿಲ್ಲ, ಬರ ಪರಿಹಾರ ಕೊಟ್ಟಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಸಿಎಂ ಸಿದ್ದರಾಮಯ್ಯ ಆಗಾಗ ಆರೋಪಗಳನ್ನು ಮಾಡುತ್ತಿರುತ್ತಾರೆ. ಈ ಬಗ್ಗೆ ಇದೀಗ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ರವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇಡೀ ಜಗತ್ತು ಒಪ್ಪಿದ ಮೋದಿಯ ಬಗ್ಗೆ ಮಾತಾಡೋಕೆ ಸಿದ್ದರಾಮಯ್ಯ ಯಾರು ಎಂದು ಗುಡುಗಿದ್ದಾರೆ.

ಈ ಕುರಿತು ನಡೆದ ಪತ್ರಿಕಾಗೋಷ್ಟಿಯಲ್ಲಿ ನಡೆಸಿದ ಹೆಚ್.ಡಿ.ದೇವೇಗೌಡರು ಕರ್ನಾಟಕ ಸಿಎಂ ಸಿದ್ದರಾಮಯ್ಯ ನವರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರದಿಂದ ನಮಗೆ ಹಣ ಬಂದಿಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ನಾನು ಸಿಎಂ ಆಗಿದ್ದ ಸಮಯದಲ್ಲಿ ರಾಜ್ಯದ ರೈತರ ಸಾಲಮನ್ನಾ ಮಾಡ್ತೀನಿ ಎಂದು ಅಂದಿದ್ದ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೆ. ಆದರೆ ಅದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿಲ್ಲ. ಆಗ ಸಿದ್ದರಾಮಯ್ಯ ಹಣಕಾಸು ಮಂತ್ರಿಯಾಗಿದ್ದರು. ನಿಮಗೆ ಪ್ರಾಮಾಣಿಕತೆಯಿದ್ದರೇ ಆಗ ಏನು ನಡೆದಿತ್ತು ಎಂಬುದನ್ನು ಹೇಳಿ. ಇದೀಗ ಮೋದಿಯವರ ಬಗ್ಗೆ ಏಕೆ ಮಾತಾಡ್ತೀರಾ ಎಂದು ಗುಡುಗಿದ್ದಾರೆ.

ಬೆಳಗಾದರೇ ಸಾಕು ಮೋದಿ ಹಣ ಕೊಟ್ಟಿಲ್ಲ ಎಂದು ಹೇಳುತ್ತಾರೆ. ಮೋದಿ ಏಕೆ ಹಣ ಕೊಡಬೇಕು, ಮನಮೋಹನ್ ಸಿಂಗ್ ಏನು ಕೊಟ್ಟಿದ್ದಾರೆ. ವಾಜಪೇಯಿ ಏನು ಕೊಟ್ಟಿದ್ದಾರೆ. ಸಿದ್ದರಾಮಯ್ಯನವರೇ ಸತ್ಯ ಹೇಳಿ, ದಿನವಿಡೀ ಮೋದಿ ಮೋದಿ ಎನ್ನುತ್ತೀರಿ, ಮೋದಿ ಈ ದೇಶದ ಸಮರ್ಥ ನಾಯಕ ಎಂದು ಇಡೀ ವಿಶ್ವವೇ ಒಪ್ಪಿದೆ. ಆತ ಸಮರ್ಥ ನಾಯಕ ಎಂಬುದನ್ನು ಇಲ್ಲ ಎನ್ನಲು ಇವರು ಯಾರು. WHO IS HE? ಮಾತಾಡೋಕು ಇತಿಮಿತಿ ಇರಬೇಕು ಎಂದು ಸಿಎಂ ಸಿದ್ದು ವಿರುದ್ದ ಆಕ್ರೋಷ ಹೊರಹಾಕಿದ್ದಾರೆ.