ಮುಸ್ಲೀಂ ಮಹಿಳೆಯರು ಪುರುಷರಿರುವ ಬ್ಯೂಟಿ ಪಾರ್ಲರ್ ಗೆ ಹೋಗಬಾರದು ಎಂದು ಆದೇಶ ಹೊರಡಿಸಿದ ಮೌಲ್ವಿ…..!

Follow Us :

ಮಹಿಳೆಯರು ಸುಂದರವಾಗಿ ಕಾಣಿಸಬೇಕು ಎಂಬ ದೃಷ್ಟಿಯಿಂದ ಬ್ಯೂಟಿ ಪಾರ್ಲರ್‍ ಗಳಿಗೆ ಹೋಗುತ್ತಿರುತ್ತಾರೆ. ಆದರೆ ಮುಸ್ಲೀಂ ಮೌಲ್ವಿಯೊಬ್ಬರು ಹೊಸ ಆದೇಶ ಹೊರಡಿಸಿದ್ದಾರೆ. ಪುರುಷರಿರುವಂತಹ ಬ್ಯೂಟಿ ಪಾರ್ಲರ್‍ ಗಳಿಗೆ ಮುಸ್ಲೀಂ ಮಹಿಳೆಯರು ಹೋಗಬಾರದು ಎಂದು ಆದೇಶ ಹೊರಡಿಸಿ ಸುದ್ದಿಯಾಗಿದ್ದಾರೆ.

ಮಹಿಳೆಯರನ್ನು ಸೌಂದರ್ಯ ಪ್ರಿಯರು ಎಂದೇ ಹೇಳಲಾಗುತ್ತಿದೆ. ಸುಂದರವಾಗಿ ಕಾಣಿಸಿಕೊಳ್ಳಲು ಅನೇಕ ಸೌಂದರ್ಯ ವರ್ಧಕಗಳನ್ನು ಬಳಸುತ್ತಿರುತ್ತಾರೆ. ಚಿಕ್ಕವರು ದೊಡ್ಡವರು ಎಂಬ ಭೇದವಿಲ್ಲದೇ ಬ್ಯೂಟಿಪಾರ್ಲರ್‍ ಗಳಿಗೆ ಹೋಗುತ್ತಿರುತ್ತಾರೆ. ಆದರೆ ಉತ್ತರ ಪ್ರದೇಶದ ಮೌಲ್ವಿಯೊಬ್ಬರು ಹೊಸ ಆದೇಶ ಹೊರಡಿಸಿದ್ದಾರೆ. ಇನ್ನು ಮುಂದೆ ಮುಸ್ಲೀಂ ಮಹಿಳೆಯರು ಬ್ಯೂಟಿ ಪಾರ್ಲರ್‍ ಗಳಿಗೆ ಹೋಗಬಾರದು. ಅದರಲ್ಲೂ ಪುರುಷರು ಕೆಲಸ ಮಾಡುವಂತ ಪಾರ್ಲರ್‍ ಗಳಿಗೆ ಹೋಗಲೇ ಬಾರದು. ಪುರುಷರು ಇರುವಂತಹ ಬ್ಯೂಟಿ ಪಾರ್ಲರ್‍ ಗಳಿಗೆ ಮುಸ್ಲೀಂ ಮಹಿಳೆಯರು ಹೋಗುವುದು ಮುಸ್ಲಿಂ ಧರ್ಮದ ಪ್ರಕಾರ ನಿಷೇಧ ಹಾಗೂ ಕಾನೂನು ಬಾಹಿರ ಎಂದು ಉತ್ತರ ಪ್ರದೇಶದ ಮುಸ್ಲೀಂ ಮೌಲ್ವಿಯೊಬ್ಬರು ವಿಲಕ್ಷಣ ಆದೇಶ ಹೊರಡಿಸಿದ್ದಾರೆ.

ಈ ಆದೇಶವನ್ನು ಹೊರಡಿಸಿದವರು ಉತ್ತರ ಪ್ರದೇಶದ ಸಹರಾನ್ ಪುರ ಜಿಲ್ಲೆಯ ಮುಸ್ಲೀಂ ಧರ್ಮಗುರು ಮುಫ್ತಿ ಅಸದ್ ಖಾಸ್ಮಿ ಎಂಬುವವರು. ಮುಸ್ಲೀಂ ಧರ್ಮದ ಪ್ರಕಾರ ಪುರುಷರು ಕೆಲಸ ಮಾಡುವ ಬ್ಯೂಟಿ ಪಾರ್ಲರ್‍ ಗಳಿಗೆ ಮುಸ್ಲೀಂ ಮಹಿಳೆಯರು ಹೋಗುವುದು ಅಪರಾಧ ಜೊತೆಗೆ ಅದು ಕಾನೂನು ಬಾಹಿರ ಎಂದು ಹೇಳಿದ್ದಾರೆ. ಪುರುಷರು ಕೆಲಸ ಮಾಡುವ ಬ್ಯೂಟಿ ಪಾರ್ಲರ್‍ ಗಳಿಗೆ ಮುಸ್ಲೀಂ ಮಹಿಳೆಯರು ಭೇಟಿ ಮಾಡುವುದನ್ನು ತಡೆಯಿರಿ ಎಂದು ಮುಸ್ಲೀಂ ಪುರುಷರಿಗೆ ಮುಫ್ತಿ ಆದೇಶ ಮಾಡಿದ್ದಾರೆ. ಮಹಿಳೆಯರಿರುವ ಸಲೂನ್ ಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಿ ಎಂದು ಮಹಿಳೆಯರಿಗೆ ಸಲಹೆ ಸಹ ನೀಡಿದ್ದಾರೆ. ಈ ಹಿಂದೆ ಪ್ಯಾಲಿಸ್ತೇನ್ ಪರ ಸಹ ಮಾತನಾಡಿದ್ದರು ಈ ಮೌಲ್ವಿ.