ಬಾಲಕನನ್ನೂ ಬಿಡದ ಕಾಮುಕ, ಅಪ್ರಾಪ್ತ ಬಾಲಕನ ಮೇಲೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ, ದೂರು ದಾಖಲು….!

Follow Us :

ಅಪ್ರಾಪ್ತ ಬಾಲಕಿಯರು, ಮಹಿಳೆಯರು, ವೃದ್ದರ ಮೇಲೆ ಮಾತ್ರವಲ್ಲದೇ ಬಾಲಕರ ಮೇಲೂ ಸಹ ಅತ್ಯಾಚಾರ ಘಟನೆಗಳು ನಡೆಯುತ್ತಿರುತ್ತವೆ. ಇದೀಗ ಧಾರ್ಮಿಕ ಕೇಂದ್ರದಲ್ಲಿ ಪ್ರಾರ್ಥನೆ ಸಲ್ಲಿಸಲು ಹೋದ ಬಾಲಕನೊಂದಿಗೆ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಅಪ್ರಾಪ್ತ ಬಾಲಕನೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದ್ದು, ಸಂತ್ರಸ್ತ ಬಾಲಕ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದು, ದೂರಿನನ್ವಯ ಪ್ರಕರಣ ದಾಖಲಾಗಿದೆ. ತಲೆಮರೆಸಿಕೊಂಡ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಸಂತ್ರಸ್ತ ಬಾಲಕನಿಗೆ 9 ವರ್ಷ ವಯಸ್ಸಾಗಿದ್ದು, ಇತ್ತೀಚಿಗಷ್ಟೆ ಬಾಲಕನ ಮನೆಗೆ ಸೋದರ ಸಂಬಂಧಿಯ ಮನೆಗೆ ಹೋಗಿದ್ದರು. ಈ ಸಮಯದಲ್ಲಿ ಬಾಲಕ ಪ್ರಾರ್ಥನೆಗೆ ಹೋಗದೇ ಇರುವುದನ್ನು ಗಮನಿಸಿದ್ದಾರೆ. ಇದೇ ರೀತಿ ಮಾಡುತ್ತಿದ್ದ ಬಾಲಕನನ್ನು ಏಕೆ ಪ್ರಾರ್ಥನೆ ಮಾಡಲು ಹೋಗುತ್ತಿಲ್ಲ ಎಂದು ಕೇಳಿದ್ದಾರೆ. ಈ ವೇಳೆ ಬಾಲಕ ಧಾರ್ಮಿಕ ಕೇಂದ್ರದಲ್ಲಿ ನಡೆದ ಕೃತ್ಯದ ಬಗ್ಗೆ ಮಾಹಿತಿ ನೀಡಿದ್ದಾನೆ. ನ.10 ರಂದು ನಾನು ಹಾಗೂ ನನ್ನ ಸ್ನೇಹಿತ ಪ್ರಾರ್ಥನೆ ಮಾಡಲು ಹೋಗಿದ್ದೆವು. ಈ ವೇಳೆ ಪ್ರಾರ್ಥನೆ ಮುಗಿಸಿ ಎಲ್ಲರೂ ಹೊದರು. ಆದರೆ ಪ್ರಾರ್ಥನೆಗೆ ಕರೆ ನೀಡುತ್ತಿದ್ದ ವ್ಯಕ್ತಿ ಪ್ರಾರ್ಥನೆ ಮಾಡುವುದನ್ನು ಕಲಿಸುತ್ತೇನೆ ಎಂದು ನಮ್ಮಿಬ್ಬರನ್ನೂ ತನ್ನ ಕೊಠಡಿಗೆ ಕರೆದುಕೊಂಡ ಹೋದ. ಬಳಿಕ ಪ್ರಾರ್ಥನೆ ಸಲ್ಲಿಸುವ ಕುರಿತು ಸಹ ಕೊಂಚ ಮಾಹಿತಿ ನೀಡಿದ. ಬಳಿಕ ಅಲ್ಲಿಂದ ನನ್ನ ಸ್ನೇಹಿತನನ್ನು ಹೊರಗೆ ಹೋಗುವಂತೆ ತಿಳಿಸಿದ. ಈ ವೇಳೆ ನನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಭಯದಿಂದ ನಾನು ಈ ವಿಚಾರ ಯಾರಿಗೂ ಹೇಳಿರಲಿಲ್ಲ ಎಂದು ಸಂತ್ರಸ್ತ ಬಾಲಕ ವಿವರಿಸಿದ್ದಾನೆ.

ಮಹಾರಾಷ್ಟ್ರದ ಕೊಂಡ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನ.10 ರಂದು ಈ ನೀಚ ಕೃತ್ಯ ನಡೆದಿದೆ ಎನ್ನಲಾಗಿದೆ. ಮೊಹಮ್ಮದ್ ಯೂಸೂಫ್ ಬಾಲಕನೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಈ ಕುರಿತು ನ.15 ರಂದು ಸಂತ್ರಸ್ತ ಬಾಲಕನ ಪೋಷಕರು ಠಾಣೆಗೆ ದೂರು ನೀಡಿದ್ದಾರೆ. ಆರೋಪಿಯ ವಿರುದ್ದ ಮಕ್ಕಳ ರಕ್ಷಣೆ ಕಾಯ್ದೆಯಡಿ ವಿವಿಧ ಸೆಕ್ಷನ್ ಗಳಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.