Film News

ಮತ್ತೊಂದು ಸೆನ್ಷೇಷನಲ್ ಪೋಸ್ಟ್ ಹಂಚಿಕೊಂಡ ಚಿರು ಪುತ್ರಿ ಶ್ರೀಜಾ, ಮೈ ಡಿಯರ್ ಎಂದು ಪ್ರಾರಂಭಿಸಿದ ಪೋಸ್ಟ್…!

ತೆಲುಗು ಸಿನಿರಂಗದ ಸ್ಟಾರ್‍ ನಟ ಮೆಗಾಸ್ಟಾರ್‍ ಚಿರಂಜೀವಿಯವರ ಪುತ್ರಿ ಶ್ರೀಜಾ ತನ್ನ ಪತಿಯಿಂದ ದೂರವಿದ್ದಾರೆ. ಇಬ್ಬರೂ ಬೇರೆಯಾಗಿದ್ದಾರೆ ಎಂದು ಹೇಳಲಾಗುತ್ತಿದ್ದರೂ ಸಹ ಈ ಬಗ್ಗೆ ಅಧಿಕೃತವಾದ ಮಾಹಿತಿ ಮಾತ್ರ ಇನ್ನೂ ಹೊರಬಂದಿಲ್ಲ.  ಶ್ರೀಜಾ ಹಾಗೂ ಕಲ್ಯಾಣ್ ದೇವ್ ಕೆಲವು ತಿಂಗಳುಗಳಿಂದ ಬೇರೆಯಾಗಿದ್ದಾರೆ. ಕಲ್ಯಾಣ್ ದೇವ್ ರನ್ನು ಶ್ರೀಜಾ ಎರಡನೇ ಮದುವೆಯಾದರು. ಕಳೆದ 2016ರಲ್ಲಿ ಇವರಿಬ್ಬರ ಮದುವೆ ನಡೆದಿದ್ದು, ಅವರಿಬ್ಬರಿಗೆ ಒಂದು ಹೆಣ್ಣು ಮಗುವಾಗಿದೆ.

ಶ್ರೀಜಾ ಹಾಗೂ ಕಲ್ಯಾಣ್ ದೇವ್ ಸಂತೋಷದಿಂದ ಜೀವನ ಸಾಗಿಸುತ್ತಿದ್ದರು. ಆದರೆ ಅವರ ನಡುವೆ ಭಿನ್ನಾಭಿಪ್ರಾಯಗಳು ಏರ್ಪಟ್ಟು ಕಳೆದ 2021 ರಿಂದ ಬೇರೆಯಾಗಿದ್ದಾರೆ. ಶ್ರೀಜಾ ತನ್ನ ಸೋಷಿಯಲ್ ಮಿಡಿಯಾ ಖಾತೆಯಿಂದ ಕಲ್ಯಾಣ್ ದೇವ್ ಹೆಸರನ್ನು ತೆಗೆದುಹಾಕಿದ್ದಾರೆ. ಅಂದಿನಿಂದ ಇಬ್ಬರೂ ವಿಚ್ಚೇಧನಕ್ಕೆ ಮುಂದಾಗಿದ್ದಾರೆ ಎಂಬ ರೂಮರ್‍ ಗಳು ಹುಟ್ಟಿಕೊಂಡವು. ಬಳಿಕ ಶ್ರೀಜಾ ಸಹ ಕಲ್ಯಾಣ್ ದೇವ್ ರೊಂದಿಗೆ ಕಾಣಿಸಿಕೊಂಡಿರಲಿಲ್ಲ. ಇನ್ನೂ ಮಕ್ಕಳ ಹುಟ್ಟುಹಬ್ಬದ ಕಾರ್ಯಕ್ರಮಗಳಲ್ಲೂ ಸಹ ಕಲ್ಯಾಣ್ ದೇವ್ ಕಾಣಿಸಿಕೊಳ್ಳುತ್ತಿರಲಿಲ್ಲ. ಈ ಕಾರಣದಿಂದ ಅವರಿಬ್ಬರು ವಿಚ್ಚೇದನ ಪಡೆದುಕೊಂಡಿದ್ದಾರೆ ಎಂಬುದಾಗಿ ಸುದ್ದಿಗಳು ಹರಿದಾಡಿದವು. ಆದರೆ ಈ ಬಗ್ಗೆ ಎಲ್ಲೂ ಸಹ ಅಧಿಕೃತ ಮಾಹಿತಿ ಹೊರಬಂದಿಲ್ಲ. ಇನ್ನೂ ಶ್ರೀಜಾ ಹಾಗೂ ಕಲ್ಯಾಣ್ ದೇವ್ ಆಗಾಗ ಕೆಲವೊಂದು ಸೆನ್ಷೇಷನಲ್ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಹಾದಿಯಲ್ಲೇ ಶ್ರೀಜಾ ಹಂಚಿಕೊಂಡ ಪೋಸ್ಟ್ ಒಂದು ವೈರಲ್ ಆಗುತ್ತಿದೆ.

ಇನ್ನೂ ಶ್ರೀಜಾ ಶೀಘ್ರದಲ್ಲೇ ಮೂರನೇ ಮದುವೆಯಾಗಲಿದ್ದಾರೆ ಎಂಬ ರೂಮರ್‍ ಗಳೂ ಸಹ ಹೊಸದಾಗಿ ಶುರುವಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಶ್ರೀಜಾ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡ ಪೋಸ್ಟ್ ಒಂದು ಹರಿದಾಡುತ್ತಿದೆ. ನನ್ನ ಪ್ರಶಾಂತತೆ ನೀನು, ಕತ್ತಲಲ್ಲಿ ಬೆಳಕು ನೀನು, 14 ವರ್ಷ ವಯಸ್ಸಿನಲ್ಲಿ ನಿನ್ನ ಜೊತೆಗಿನ ಅನುಬಂಧ ಶುರುವಾಯ್ತು. ನಾನು ನಿದ್ದೆಯಿಂದ ಏಳುತ್ತೇನೆ ಎಂದರೇ ಅದು ನಿನಗಾಗಿಯೇ ಎಂಬ ಅರ್ಥ ಬರುವ ಹಾಗೆ ಆಕೆ ತನ್ನ ಇನ್ಸ್ಟಾ ಖಾತೆಯಲ್ಲಿ ಕಾಮೆಂಟ್ ಮಾಡಿದ್ದಾರೆ. ಶ್ರೀಜಾ ತನಗೆ ಇಷ್ಟವಾದ ವ್ಯಕ್ತಿಯೊಬ್ಬರನ್ನು ನೆನಪಿಸಿಕೊಂಡು ಈ ಕಾಮೆಂಟ್ ಮಾಡಿದ್ದಾರೆ ಎಂದುಕೊಂಡರೇ ಅದು ತಪ್ಪು, ಶ್ರೀಜಾ ಕಾಫಿಯನ್ನು ಉದ್ದೇಶಿಸಿ ಮಾಡಿದ ಪೋಸ್ಟ್ ಇದಾಗಿದೆ.

ಶ್ರೀಜಾ 14ನೇ ವಯಸ್ಸಿನಲ್ಲಿರುವಾಗ ಕಾಫಿ ಅಭ್ಯಾಸವಾಯ್ತಿತಂತೆ. ಅಲ್ಲಿಂದ ಆಕೆಯ ಕಷ್ಟ ನಷ್ಟಗಳಲ್ಲಿ ಕಾಫಿ ಜೊತೆಯಾಗಿತ್ತಂತೆ. ನಿದ್ದೆಯಿಂದ ಎದ್ದ ಕೂಡಲೇ ಕಾಫಿ ಮೊದಲ ಸಿಫ್ ಆಕೆಗೆ ತುಂಬಾ ಅದ್ಬುತವಾದ ಅನುಭೂತಿಯನ್ನು ನೀಡುತ್ತಿರುತ್ತದೆ ಎಂದು ಶ್ರೀಜಾ ಹೇಳಿದ್ದಾರೆ. ಇನ್ನೂ ಶ್ರೀಜಾ ಗೆ ಇಬ್ಬರು ಮಕ್ಕಳಿದ್ದು, ಇಬ್ಬರೂ ಮಕ್ಕಳು ಆಕೆಯೊಂದಿಗೆ ಬೆಳೆಯುತ್ತಿದ್ದಾರೆ. ಇನ್ನೂ ಕೆಲವು ದಿನಗಳ ಹಿಂದೆ ಕಲ್ಯಾಣ್ ದೇವ್ ಸಹ ಇಂಟ್ರಸ್ಟಿಂಗ್ ಪೋಸ್ಟ್ ಮಾಡಿದ್ದರು.

Most Popular

To Top