ಮತ್ತೊಮ್ಮೆ ಮೆಗಾ ಡಾಟರ್ ಶ್ರೀಜಾ ಮೂರನೇ ಮದುವೆ ರೂಮರ್, ಆ ವ್ಯಕ್ತಿಯೊಂದಿಗೆ ಮೂರನೇ ಮದುವೆಯಂತೆ…..!

ಟಾಲಿವುಡ್ ಸ್ಟಾರ್‍ ನಟ ಮೆಗಾಸ್ಟಾರ್‍ ಚಿರಂಜೀವಿಯವರ ಪುತ್ರಿ ಶ್ರೀಜಾ ತನ್ನ ಪತಿಯಿಂದ ದೂರವಿದ್ದಾರೆ. ಶ್ರೀಜಾ ಹಾಗೂ ಕಲ್ಯಾಣ್ ದೇವ್ ಕೆಲವು ತಿಂಗಳುಗಳಿಂದ ಬೇರೆಯಾಗಿದ್ದಾರೆ. ಕಲ್ಯಾಣ್ ದೇವ್ ರನ್ನು ಶ್ರೀಜಾ ಎರಡನೇ ಮದುವೆಯಾದರು. ಕಳೆದ 2016ರಲ್ಲಿ…

ಟಾಲಿವುಡ್ ಸ್ಟಾರ್‍ ನಟ ಮೆಗಾಸ್ಟಾರ್‍ ಚಿರಂಜೀವಿಯವರ ಪುತ್ರಿ ಶ್ರೀಜಾ ತನ್ನ ಪತಿಯಿಂದ ದೂರವಿದ್ದಾರೆ. ಶ್ರೀಜಾ ಹಾಗೂ ಕಲ್ಯಾಣ್ ದೇವ್ ಕೆಲವು ತಿಂಗಳುಗಳಿಂದ ಬೇರೆಯಾಗಿದ್ದಾರೆ. ಕಲ್ಯಾಣ್ ದೇವ್ ರನ್ನು ಶ್ರೀಜಾ ಎರಡನೇ ಮದುವೆಯಾದರು. ಕಳೆದ 2016ರಲ್ಲಿ ಇವರಿಬ್ಬರ ಮದುವೆ ನಡೆದಿದ್ದು, ಅವರಿಬ್ಬರಿಗೆ ಒಂದು ಹೆಣ್ಣು ಮಗು ಇದೆ. ಇದೀಗ ಶ್ರೀಜಾ ಮೂರನೇ ಮದುವೆಯ ಬಗ್ಗೆ ರೂಮರ್‍ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಶ್ರೀಜಾ ಮೊದಲಿಗೆ ಒಬ್ಬ ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ಬಳಿಕ ಒಬ್ಬ ಮಗು ಜನಿಸಿದ ಬಳಿಕ ಆತನೊಂದಿಗೆ ಭಿನ್ನಾಭಿಪ್ರಾಯಗಳ ಕಾರಣದಿಂದ ಆತನಿಂದ ಬೇರೆಯಾದರು. ಬಳಿಕ ಶ್ರೀಜಾಗೆ ಕಲ್ಯಾಣ್ ದೇವ್ ಎಂಬಾತನೊಂದಿಗೆ ಮನೆಯವರು ಮದುವೆಯಾದರು. ಶ್ರೀಜಾ ಹಾಗೂ ಕಲ್ಯಾಣ್ ದೇವ್ ಸಂತೋಷದಿಂದ ಜೀವನ ಸಾಗಿಸುತ್ತಿದ್ದರು. ಆದರೆ ಅವರ ನಡುವೆ ಭಿನ್ನಾಭಿಪ್ರಾಯಗಳು ಏರ್ಪಟ್ಟು ಕಳೆದ 2021 ರಿಂದ ಬೇರೆಯಾಗಿದ್ದಾರೆ. ಶ್ರೀಜಾ ತನ್ನ ಸೋಷಿಯಲ್ ಮಿಡಿಯಾ ಖಾತೆಯಿಂದ ಕಲ್ಯಾಣ್ ದೇವ್ ಹೆಸರನ್ನು ತೆಗೆದುಹಾಕಿದ್ದಾರೆ. ಅಂದಿನಿಂದ ಇಬ್ಬರೂ ವಿಚ್ಚೇಧನಕ್ಕೆ ಮುಂದಾಗಿದ್ದಾರೆ ಎಂಬ ರೂಮರ್‍ ಗಳು ಹುಟ್ಟಿಕೊಂಡವು. ಬಳಿಕ ಶ್ರೀಜಾ ಸಹ ಕಲ್ಯಾಣ್ ದೇವ್ ರೊಂದಿಗೆ ಕಾಣಿಸಿಕೊಂಡಿರಲಿಲ್ಲ. ಇನ್ನೂ ಮಕ್ಕಳ ಹುಟ್ಟುಹಬ್ಬದ ಕಾರ್ಯಕ್ರಮಗಳಲ್ಲೂ ಸಹ ಕಲ್ಯಾಣ್ ದೇವ್ ಕಾಣಿಸಿಕೊಳ್ಳುತ್ತಿರಲಿಲ್ಲ. ಈ ಕಾರಣದಿಂದ ಅವರಿಬ್ಬರು ವಿಚ್ಚೇದನ ಪಡೆದುಕೊಂಡಿದ್ದಾರೆ ಎಂಬುದಾಗಿ ಸುದ್ದಿಗಳು ಹರಿದಾಡಿದವು. ಆದರೆ ಈ ಬಗ್ಗೆ ಎಲ್ಲೂ ಸಹ ಅಧಿಕೃತ ಮಾಹಿತಿ ಹೊರಬಂದಿಲ್ಲ.

ಇನ್ನೂ ಶ್ರೀಜಾ ಹಾಗೂ ಕಲ್ಯಾಣ್ ದೇವ್ ದೂರವಿದ್ದು, ಶ್ರೀಜಾ ಮೂರನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೊಂದು ಆಗಾಗ ಕೇಳಿಬರುತ್ತಲೇ ಇರುತ್ತದೆ. ಇದೀಗ ಮತ್ತೊಮ್ಮೆ ಅಂತಹುದೇ ರೂಮರ್‍ ಒಂದು ಹರಿದಾಡುತ್ತಿದೆ. ಇತ್ತೀಚಿಗೆ ಶ್ರೀಜಾ ಓರ್ವ ವ್ಯಕ್ತಿಯೊಂದಿಗೆ ಇರುವಂತಹ ಪೊಟೋಗಳನ್ನು ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಪೊಟೋ ವೈರಲ್ ಆಗಿದ್ದು, ಶ್ರೀಜಾ ಆತನನ್ನೆ ಮದುವೆಯಾಗಲಿದ್ದಾರೆ ಎಂಬ ರೂಮರ್‍ ಹರಿಡಲಾಗಿದೆ. ಇನ್ನೂ ಶ್ರೀಜಾ ಹಂಚಿಕೊಂಡ ಆ ಪೊಟೋದಲ್ಲಿರುವ ವ್ಯಕ್ತಿ ಯಾರು ಎಂಬ ವಿಚಾರಕ್ಕೆ ಬಂದರೇ ಆತ ಶ್ರೀಜಾ ಜಿಮ್ ಟ್ರೈನರ್‍. ಜಿಮ್ ನಲ್ಲಿ ಆತ ತರಬೇತಿ ನೀಡಿತ್ತಿರುತ್ತಾರೆ. ಕೊನೆಯದಾಗಿ ಆಕೆ ಆತನೊಂದಿಗೆ ಪೊಟೊ ಒಂದನ್ನು ತೆಗೆಸಿಕೊಂಡು ಜಿಮ್ ನಲ್ಲಿ ಆಕೆ ಮಾಡಿದ ಕಸರತ್ತುಗಳನ್ನು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ.

ಇನ್ನೂ ಶ್ರೀಜಾ ಹಂಚಿಕೊಂಡ ವಿಡಿಯೋ ಹಾಗೂ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋಗೆ ವಿವಿಧ ರೀತಿಯ ಕಾಮೆಂಟ್ ಗಳೂ ಸಹ ಹರಿದುಬರುತ್ತಿವೆ. ಶ್ರೀಜಾ ಮೂರನೇ ಮದುವೆಯಾಗಲಿರುವುದು ಆತನನ್ನೆ ಇರಬಹುದು ಎಂದರೇ ಮತ್ತೆ ಕೆಲವರು ಪತಿಯನ್ನು ಬಿಟ್ಟು ವರ್ಕೌಟ್ ಮಾಡುತ್ತಾ ಎಂಜಾಯ್ ಮಾಡುತ್ತಿದ್ದಿಯಾ ಎಂದು ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಈ ವಿಡಿಯೋ ಕಾರಣದಿಂದ ಮತ್ತೊಮ್ಮೆ ಶ್ರೀಜಾ ಮೂರನೇ ಮದುವೆ ರೂಮರ್‍ ಹಲ್ ಚಲ್ ಸೃಷ್ಟಿಸಿದೆ.