ಆ ಯುವತಿಯ ಜೊತೆ ನಾಗಚೈತನ್ಯಗೆ ಮದುವೆ ಮಾಡಲಿದ್ದಾರಂತೆ ನಟ ನಾಗಾರ್ಜುನ, ವೈರಲ್ ಆದ ರೂಮರ್…….!

Follow Us :

ಅಕ್ಕಿನೇನಿ ಕುಟುಂಬದ ನಾಗಚೈತನ್ಯ ಕೆಲವು ವರ್ಷಗಳ ಹಿಂದೆಯಷ್ಟೆ ಸಮಂತಾ ಜೊತೆಗೆ ವಿಚ್ಚೇದನ ಪಡೆದುಕೊಂಡು ಸಿಂಗಲ್ ಆಗಿದ್ದಾರೆ. ಪ್ರೀತಿಸಿ ಮದುವೆಯಾದ ಈ ಜೋಡಿ ಕಡಿಮೆ ಸಮಯದಲ್ಲೇ ವಿಚ್ಚೇದನ ಪಡೆದುಕೊಂಡರು. ವಿಚ್ಚೇದನ ಬಳಿಕ ನಾಗಚೈತನ್ಯ ಎರಡನೇ ಮದುವೆಯ ಬಗ್ಗೆ ಅನೇಕ ಬಾರಿ ಸುದ್ದಿಗಳು ಕೇಳಿಬಂದವು. ಇದೀಗ ಮತ್ತೊಮ್ಮೆ ನಾಗಚೈತನ್ಯ ಎರಡನೇ ಮದುವೆಯ ಬಗ್ಗೆ ಸುದ್ದಿಯೊಂದು ಕೇಳಿಬರುತ್ತಿದ್ದು, ಆ ಯುವತಿಯ ಜೊತೆಗೆ ಮದುವೆ ಮಾಡಲು ನಾಗಚೈತನ್ಯ ತಂದೆ ನಾಗಾರ್ಜುನ್ ರವರು ಪ್ಲಾನ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಅಕ್ಕಿನೇನಿ ನಾಗಚೈತನ್ಯ ಹಾಗೂ ಸಮಂತಾ ಸುಮಾರು ತಿಂಗಳುಗಳ ಕಾಲ ಪ್ರೀತಿಸಿ ಮದುವೆಯಾದರು. ಮದುವೆಯಾದ ಮೂರು ವರ್ಷಗಳಲ್ಲೇ ಇಬ್ಬರೂ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಚೇದನ ಪಡೆದುಕೊಂಡರು. ವಿಚ್ಚೇದನದ ಬಳಿಕ ಇಬ್ಬರೂ ತಮ್ಮ ತಮ್ಮ ಜೀವನ ನಡೆಸುತ್ತಿದ್ದಾರೆ. ವಿಚ್ಚೇದನದ ಬಳಿಕ ಸಮಂತಾ ಮರುಮದುವೆಗಿಂತ ನಾಗಚೈತನ್ಯ ಮರು ಮದುವೆಯ ಬಗ್ಗೆ ಅನೇಕ ಸುದ್ದಿಗಳು ಕೇಳಿಬಂದವು. ಅದರಲ್ಲೂ ನಾಗಚೈತನ್ಯ ಹಾಗೂ ಯಂಗ್ ಬ್ಯೂಟಿ ಶೋಭಿತಾ ಧೂಳಿಪಾಲ ನಡುವೆ ಅಫೈರ್‍ ಇದೆ ಎಂಬ ಸುದ್ದಿ ಜೋರಾಗಿಯೇ ಕೇಳಿಬಂತು. ಇನ್ನೇನು ಅವರ ಮದುವೆ ನಡೆದೇ ಬಿಡುತ್ತದೆ ಎಂಬ ರೂಮರ್‍ ಸಹ ಜೋರಾಗಿ ಹರಿದಾಡಿತ್ತು. ಆದರೆ ಇತ್ತೀಚಿಗೆ ನಾಗಚೈತನ್ಯ ಹಾಗೂ ಶೋಭಿತಾ ಬಗ್ಗೆ ಯಾವುದೇ ಸುದ್ದಿಗಳು ಕೇಳಿಬರುತ್ತಿಲ್ಲ.  ಇದೀಗ ಅಕ್ಕಿನೇನಿ ನಾಗಾರ್ಜುನ್ ರವರೇ ತನ್ನ ಮಗನಿಗೆ ಎರಡನೇ ಮದುವೆ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.

ಸದ್ಯ ನಾಗಾರ್ಜುನ್ ತನ್ನ ಮಗನಾದ ನಾಗಚೈತನ್ಯರಿಗೆ ಮದುವೆ ಮಾಡಲು ನಿರ್ಧಾರ ಮಾಡಿದ್ದಾರಂತೆ. ಈಗಾಗಲೇ ಚೈತನ್ಯಗೆ ಸೆಟ್ ಆಗುವಂತಹ ಯುವತಿಯನ್ನು ಸಹ ಸೆಲೆಕ್ಟ್ ಮಾಡಿದ್ದಾರಂತೆ. ನಾಗಾರ್ಜುನ ರವರ ಸಂಬಂಧಿಕರ ಯುವತಿಯನ್ನೇ ನಾಗಚೈತನ್ಯಗೆ ಕೊಟ್ಟು ಮದುವೆ ಮಾಡಲಿದ್ದಾರಂತೆ. ಈಗಾಗಲದೇ ಮದುವೆಗೆ ಎಲ್ಲಾ ಸಿದ್ದತೆಗಳನ್ನೂ ಸಹ ಮಾಡಿಕೊಂಡಿದ್ದಾರಂತೆ. ಚೈತನ್ಯ ಸಹ ತಂದೆ ಎಲ್ಲವೂ ನಿಮ್ಮಿಷ್ಟ ಎಂದು ಹೇಳಿದ್ದು, ಮದುವೆಯ ಬಗ್ಗೆ ಸಂಪೂರ್ಣ ನಿರ್ಧಾರವನ್ನು ತಂದೆಗೆ ವಹಿಸಿದ್ದಾರೆ ಎನ್ನಲಾಗಿದೆ. ಸದ್ಯ ಈ ಸುದ್ದಿಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲದೇ ಇದ್ದರೂ ಸಹ ಸುದ್ದಿ ಮಾತ್ರ ಭಾರಿ ಸದ್ದು ಮಾಡುತ್ತಿದೆ. ಈ ಕುರಿತು ಶೀಘ್ರದಲ್ಲೇ ಸ್ಪಷ್ಟನೆ ಸಹ ಬರಬಹುದು ಎನ್ನಲಾಗುತ್ತಿದೆ.