ನಿಹಾರಿಕಾ ಬಗ್ಗೆ ಶಾಕಿಂಗ್ ಕಾಮೆಂಟ್ಸ್ ಮಾಡಿದ ಚೈತನ್ಯ ತಂದೆ, ಪಬ್ ಗಳಿಗೆ ಸುತ್ತಿದ್ದು ಬಿಟ್ಟರೇ ಬೇರೆ ಏನು ಇಲ್ಲವಂತೆ…..!

ಸುಮಾರು ದಿನಗಳಿಂದ ಮೆಗಾ ಕುಟುಂಬದ ನಿಹಾರಿಕಾ ಕೊಣಿದೆಲಾ ಹಾಗೂ ಚೈತನ್ಯ ಜೊನ್ನಲಗಡ್ಡ ನಡುವೆ ವಿಬೇದಗಳು ಏರ್ಪಟ್ಟು ವಿಚ್ಚೇದನ ಪಡೆದುಕೊಂಡಿದ್ದಾರೆ. ಅವರ ವಿಚ್ಚೇದನದ ಬಗ್ಗೆ ಸುಮಾರು ತಿಂಗಳುಗಳಿಂದ ಸುದ್ದಿ ಕೇಳಿಬರುತ್ತಲೇ ಇತ್ತು. ಆದರೆ  ಕೆಲವು ದಿನಗಳ ಹಿಂದೆಯಷ್ಟೆ ಅವರ ವಿಚ್ಚೇದನದ ಬಗ್ಗೆ ಅಧಿಕೃತ ಮಾಹಿತಿ ಹೊರಬಂತು. ಜೊತೆಗೆ ನಿಹಾರಿಕಾ ಸಹ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಇಬ್ಬರೂ ಇಚ್ಚೆಯಿಂದಲೇ ವಿಚ್ಚೇದನ ಪಡೆದುಕೊಂಡಿದ್ದಾಗಿ ಹೇಳಿದ್ದಾರೆ. ಇದೀಗ ಚೈತನ್ಯ ರವರ ತಂದೆ ಪ್ರಭಾಕರ್‍ ನಿಹಾರಿಕಾ ಕುರಿತಂತೆ ಕೆಲವೊಂದು ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ ಎಂದು ಸುದ್ದಿ ಕೇಳಿಬರುತ್ತಿದೆ.

ಮೆಗಾ ಡಾಟರ್‍ ನಿಹಾರಿಕಾ ಕೊಣಿದೆಲಾ ಹಾಗೂ ಚೈತನ್ಯ ಜೊನ್ನಲಗಡ್ಡ ರವರ ಮದುವೆ ಜೈಪುರದ ಪ್ಯಾಲೆಸ್ ನಲ್ಲಿ ಅದ್ದೂರಿಯಾಗಿ ನೆರವೇರಿತ್ತು. ಮದುವೆಯಾದ ಎರಡೇ ವರ್ಷಗಳಲ್ಲಿ ಈ ಜೋಡಿಯ ನಡುವೆ ವಿಬೇದಗಳು ಹುಟ್ಟಿಕೊಂಡವು. ಕೆಲವು ತಿಂಗಳುಗಳ ಹಿಂದೆ ಚೈತನ್ಯ ಹಾಗೂ ನಿಹಾರಿಕಾ ತಮ್ಮ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಒಬ್ಬರನ್ನೊಬ್ಬರು ಅನ್ ಫಾಲೋ ಮಾಡಿಕೊಂಡಿದ್ದು, ಪೊಟೊಗಳನ್ನು ಡಿಲೀಟ್ ಮಾಡಿದ್ದರು. ಈ ಕಾರಣದಿಂದ ಅವರ ವಿಚ್ಚೇದನದ ಸುದ್ದಿ ಜೋರಾಗಿಯೇ ಹರಿದಾಡಲು ಶುರುವಾಗಿತ್ತು. ಇನ್ನೂ ಅವರಿಬ್ಬರೂ ಬೇರೆಯಾದ ಬಳಿಕ ಅವರ ಸೋಷಿಯಲ್ ಮಿಡಿಯಾ ಖಾತೆಗಳ ಮೇಲೆ ಸಹ ಎಲ್ಲರೂ ಗಮನ ಹರಿಸುತ್ತಿದ್ದರು. ಚೈತನ್ಯ ಸಹ ಮನಃಶಾಂತಿಗಾಗಿ ಆಧ್ಯಾತ್ಮಿಕ ಯೋಗಾ ಸೆಂಟರ್‍ ಗೆ ಹೋಗಿದ್ದರು. ಜೊತೆಗೆ ನಿಹಾರಿಕಾ ಚೈತನ್ಯ ಗೆ ತುಂಬಾ ಟಾರ್ಚರ್‍ ಸಹ ಕೊಟ್ಟರು ಎಂಬ ಮಾತುಗಳೂ ಸಹ ಕೇಳಿಬಂದವು. ಇದೀಗ ಚೈತನ್ಯ ತಂದೆ ನಿವೃತ್ತ ಪೊಲೀಸ್ ಅಧಿಕಾರಿ ಪ್ರಭಾಕರ್‍ ಕೆಲವೊಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರಂತೆ.

ಚೈತನ್ಯ ತಂದೆ ಪ್ರಭಾಕರ್‍ ತನ್ನ ಹತ್ತಿರದ ವ್ಯಕ್ತಿಗಳೊಂದಿಗೆ ನಿಹಾರಿಕಾ ಹಾಗೂ ಚೈತನ್ಯ ವಿಚ್ಚೇದನಕ್ಕೆ ಕೆಲವೊಂದು ಕಾರಣಗಳನ್ನು ಹಂಚಿಕೊಂಡಿದ್ದಾರಂತೆ. ತಾನು ಒಳ್ಳೆಯ ಗೌರವಯುತವಾದ ಸ್ಥಾನದಲ್ಲಿದ್ದೇನೆ. ಮನೆಯಲ್ಲಿ ನಿಹಾರಿಕಾಗೆ ದೊಡ್ಡವರು ಎಂದರೇ ಕೊಂಚವೂ ಗೌರವ ಇಲ್ಲ. ಪತಿಯೊಂದಿಗೆ ಜೀವಿಸುವ ಆಲೋಚನೆ ನಿಹಾರಿಕಾಗೆ ಇಲ್ಲ. ಪತಿ, ಅತ್ತೆ ಮಾವ ರವರನ್ನು ಗೌರವಿಸುವುದಿಲ್ಲ. ತನ್ನ ಪತಿಯ ಮೇಲೆ ಎಂದೂ ಸಹ ಪ್ರೀತಿಯಿಂದ ಬಾಳಿಲ್ಲ. ಪದ್ದತಿಯಾಗಿ ಕಾಣಿಸಿಕೊಳ್ಳದೇ ಸದಾ ಕ್ಲಬ್ ಗಳು, ಪಬ್ ಗಳನ್ನು ಸುತ್ತಾಡಿದ್ದು ಬಿಟ್ಟರೇ ತನ್ನ ಕುಟುಂಬದ ಬಗ್ಗೆ ಆಕೆ ಎಂದೂ ಯೋಚನೆ ಮಾಡಿಲ್ಲ. ಆಕೆ ಅಷ್ಟು ಮಾಡಿದರೂ ಸಹ ಮೆಗಾ ಫ್ಯಾನ್ಸ್ ಮಾತ್ರ ಸತ್ಯಾಂಶ ತಿಳಿದುಕೊಳ್ಳದೇ ನನ್ನ ಪುತ್ರನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಈ ವಿಚಾರ ನನ್ನನ್ನು ತುಂಬಾ ಕಾಡುತ್ತಿದೆ. ನೋವು ತರುತ್ತಿದೆ ಎಂದು ಪ್ರಭಾಕರ್‍ ಹೇಳಿಕೊಂಡಿದ್ದಾರಂತೆ.

ಇನ್ನೂ ಈ ಸುದ್ದಿಯಲ್ಲಿ ಎಷ್ಟರ ಮಟ್ಟಿಗೆ ಸತ್ಯಾಂಶ ಇದೆ ಎಂಬುದು ಪಕ್ಕಕ್ಕಿಟ್ಟರೇ, ಸೋಷಿಯಲ್  ಮಿಡಿಯಾದಲ್ಲಿ ಮಾತ್ರ ಸುದ್ದಿ ವೈರಲ್ ಆಗುತ್ತಿದೆ. ಇನ್ನೂ ನೆಟ್ಟಿಗರಿಂದಲೂ ವಿಭಿನ್ನ ರೀತಿಯ ಕಾಮೆಂಟ್ ಗಳು ಹರಿದು ಬರುತ್ತಿವೆ. ಕೆಲವರಂತೂ ಬೇಕಂತಲೇ ಇಂತಹ ಸುದ್ದಿಗಳನ್ನು ಹರಿಬಿಡುತ್ತಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ.