ಸಲ್ಮಾನ್ ಖಾನ್ ಸಹಾಯದಿಂದ ನಾನು ತಾಯಿಯಾದೆ ಎಂದ ಬಾಲಿವುಡ್ ನಟಿ ಕಾಶ್ಮೀರಾ, ವೈರಲ್ ಆದ ಕಾಮೆಂಟ್ಸ್……!

ಸಿನಿರಂಗದಲ್ಲಿ ಸದಾ ಒಂದಲ್ಲ ಒಂದು ವಿಚಾರದಿಂದ ಸಲ್ಮಾನ್ ಖಾನ್ ಸುದ್ದಿಯಲ್ಲಿರುತ್ತಾರೆ. ಇದೀಗ ಸಲ್ಮಾನ್ ಖಾನ್ ರವರ ಸಹಾಯದಿಂದ ನಾನು ತಾಯಿಯಾದೆ ಎಂದು ಬಾಲಿವುಡ್ ನಟಿ ಕಾಶ್ಮೀರಾ ಕಾಮೆಂಟ್ಸ್ ಮಾಡಿದ್ದಾರೆ. ನಟಿ ಕಾಶ್ಮೀರಾ ಬಾಲಿವುಡ್ ಸೇರಿದಂತೆ ವಿವಿಧ ಭಾಷೆಗಳಲ್ಲಿ ನಟಿಸಿದ್ದಾರೆ. ಜೊತೆಗೆ ಕಿರುತೆರೆಯಲ್ಲೂ ಸಹ ಫೇಂ ಪಡೆದುಕೊಂಡಿದ್ದಾರೆ. ಇದೀಗ ಕಾಶ್ಮೀರಾ ಸಲ್ಮಾನ್ ಖಾನ್ ರವರ ಬಗ್ಗೆ ನೀಡಿದ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಬಾಲಿವುಡ್ ಸಿನಿರಂಗದ ನಟಿ ಕಾಶ್ಮೀರಾ ಕೇವಲ ಹಿಂದಿ ಸಿನೆಮಾಗಳ ಮೂಲಕ ಮಾತ್ರವಲ್ಲದೇ ತೆಲುಗು ತಮಿಳು ಸಿನೆಮಾಗಳ ಮೂಲಕ ಸೌತ್ ಪ್ರೇಕ್ಷಕರಿಗೂ ಸಹ ಆಕೆ ಪರಿಚಯವಾಗಿದ್ದಾರೆ. ಬಿಗ್ ಬಾಸ್ 1, ಫಿಯರ್‍ ಫ್ಯಾಕ್ಟರ್‍, ನಾಚ್ ಬಲಿಯೇ ಮೊದಲಾದ ಕಿರುತೆರೆ ಶೋಗಳ ಮೂಲಕವೂ ಸಹ ಫೇಂ ಪಡೆದುಕೊಂಡಿದ್ದಾರೆ. ಅದಲ್ಲೂ ಆಕೆ ಐಟಂ ಸಾಂಗ್ಸ್ ಮೂಲಕ ಮತಷ್ಟು ಖ್ಯಾತಿ ಪಡೆದುಕೊಂಡರು. ಕಳೆದ 1996 ರಿಂದ ಸಿನಿರಂಗದಲ್ಲಿದ್ದು ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಕಿರುತೆರೆ ಹಾಗೂ ಬೆಳ್ಳಿತೆರೆ ಯ ಮೂಲಕ ಸಹ ಸದ್ದು ಮಾಡಿದ್ದರು. ಇನ್ನೂ ಆಕೆಗೆ ಎರಡು ಬಾರಿ ಮದುವೆಯಾಗಿದೆ. 2003 ರಲ್ಲಿ ಬ್ರಾಡ್ ಲಿಟ್ಟರ್‍ ಮ್ಯಾನ್ ಎಂಬಾತನೊಂದಿಗೆ ಮದುವೆಯಾಯ್ತು, ಬಳಿಕ 2007 ರಲ್ಲಿ ವಿಚ್ಚೇದನ ಪಡೆದುಕೊಂಡರು. ಬಳಿಕ ಆಕೆ 2013 ರಲ್ಲಿ ಬಾಲಿವುಡ್ ನಟ ಕೃಷ್ಣ ಅಭಿಷೇಕ್ ಎಂಬಾತನನ್ನು ವಿವಾಹವಾಗಿ ಜೀವನ ಸಾಗಿಸುತ್ತಿದ್ದಾರೆ.

ನಟಿ ಕಾಶ್ಮೀರಾ ಇದೀಗ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದು, ಕೆಲವೊಂದು ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ.  ಎರಡನೇ ಪತಿಯೊಂದಿಗೆ ಮಕ್ಕಳಿಗಾಗಿ ತುಂಬಾನೆ ಪ್ರಯತ್ನಗಳನ್ನು ಮಾಡಿದ್ದೇವೆ. ಆದರೆ ಫಲಿತಾಂಶ ಸಿಕ್ಕಿಲ್ಲ. ಐವಿಎಫ್ ಮೂಲಕ ತಾಯಿ ಆಗಲು ಮಾಡಿದ ಪ್ರಯತ್ನ ಸಹ ವಿಫಲವಾಯ್ತು. ಆದರೆ ಒಂದು ಸಂದರ್ಭದಲ್ಲಿ ಸಲ್ಮಾನ್ ಖಾನ್ ರವರು ನೀಡಿದ ಸಲಹೆಯ ಕಾರಣದಿಂದ ನಾನು ತಾಯಿಯಾದೆ. ನಾನು ಮಕ್ಕಳಿಲ್ಲ ಎಂದು ನೋವು ಪಡುತ್ತಿದ್ದಾಗ ಸಲ್ಮಾನ್ ಖಾನ್ ಸೆರಗೋಸಿ ಮೂಲಕ ಮಗು ಪಡೆದುಕೊಳ್ಳುವಂತೆ ಸಲ್ಮಾನ್ ಖಾನ್ ತಿಳಿಸಿದ್ದರಂತೆ. ಆ ಸಲಹೆಯನ್ನು ಪಾಲಿಸಿ ಆ ಮೂಲಕ ಕಾಶ್ಮೀರಾ ತಾಯಿಯಾದೆ. ಮದುವೆಯಾದ ನಾಲ್ಕು ವರ್ಷಗಳ ಬಳಿಕ ಸಲ್ಮಾನ್ ಖಾನ್ ರವರ ಸಲಹೆಯ ಮೇರೆಗೆ ತಂದೆ ತಾಯಿಯರಾದೆವು. ಅಂದು ನಾವು ಟ್ರೋಲ್ಸ್ ಗೆ ಸಹ ಗುರಿಯಾದೆವು. ಆದರೆ ನಮ್ಮ ಮನೆಯಲ್ಲಿ ಖುಷಿಗೆ ಸಲ್ಮಾನ್ ಖಾನ್ ರವರ ಸಲಹೆ ಕಾರಣ ಎಂದು ಕಾಶ್ಮೀರಾ ಹೇಳಿದ್ದಾರೆ.

ಇನ್ನೂ ಸಲ್ಮಾನ್ ಖಾನ್ ರವರ ಸಲಹೆಯ ಮೇರೆಗೆ ತಾನು ತಾಯಿಯಾದೆ ಎಂಬ ವಿಚಾರ ಆಕೆ ಹಂಚಿಕೊಂಡಿದ್ದಾರೆ. ಸಲ್ಮಾನ್ ಖಾನ್ ರವರ ಸಲಹೆಯಂತೆ ಕಾಶ್ಮೀರಾ ಮನೆಯಲ್ಲಿ ಸಂತಸ ಮನೆ ಮಾಡಿದೆಯಂತೆ. ಸದ್ಯ ಆಕೆಯ ಈ ಹೇಳಿಕೆಗಳು ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.