Film News

ಗರ್ಭಸ್ರಾವ ಆಗಿದೆ ಎಂದರೇ ಎಲ್ಲಾ ನಾಟಕ ಅಂದ್ರು, ಶೂಟಿಂಗ್ ವೇಳೆ ನಡೆದ ಅವಮಾನದ ಬಗ್ಗೆ ವಿಚಾರ ಹಂಚಿಕೊಂಡ ಸ್ಮೃತಿ ಇರಾನಿ….!

ಕಿರುತೆರೆಯ ಮೂಲಕ ಬೆಳ್ಳಿತೆರೆಗೆ ಪರಿಚಯವಾದ ನಟಿ ಸ್ಮೃತಿ ಇರಾನಿ ಬಗ್ಗೆ ಹೆಚ್ಚಿನ ಪರಿಚಯ ಅಗತ್ಯವಿಲ್ಲ ಎನ್ನಬಹುದು. ರಾಮಾಯಣ್ ಎಂಬ ಸೀರಿಯಲ್ ನಲ್ಲಿ ಸೀತೆಯ ಪಾತ್ರದಲ್ಲಿ ನಟಿಸಿ ಹಾಗೂ ಕ್ಯೂಂಕಿ ಸಾಸ್ ಭಿ ಕಬಿ ಬಹುಥಿ ಎಂಬ ಸೀರಿಯಲ್ ಮೂಲಕ ತುಂಬಾ ಖ್ಯಾತಿ ಪಡೆದುಕೊಂಡರು. ಆಕೆಯ ಕೆರಿಯರ್‍ ನಲ್ಲಿ ನಟಿಸಿದ್ದು ಕೇವಲ ಮೂರು ಸಿನೆಮಾಗಳು ಮಾತ್ರ. ಇದೀಗ ಆಕೆ ರಾಜಕೀಯದಲ್ಲಿ ಸಕ್ರಿಯರಾಗಿದ್ದು, ಕೇಂದ್ರ ಮಂತ್ರಿಯಾಗಿದ್ದಾರೆ. ಇದೀಗ ಸ್ಮೃತಿ ಇರಾನಿ ಶೂಟಿಂಗ್ ನಲ್ಲಿ ಎದುರಿಸಿದ ಅವಮಾನದ ಬಗ್ಗೆ ಮಾತನಾಡಿದ್ದಾರೆ. ಆಕೆಯ ಹೇಳಿಕೆ ಇದೀಗ ವೈರಲ್ ಆಗಿದೆ.

ನಟಿ ಸ್ಮೃತಿ ಇರಾನಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಖಾತೆಯ ಕೇಂದ್ರ ಮಂತ್ರಿಯಾಗಿದ್ದಾರೆ. ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಆಕೆ ಕೆಲವೊಂದು ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಶೂಟಿಂಗ್ ಸಮಯದಲ್ಲಿ ಆಕೆ ಎದುರಿಸಿದ ಅವಮಾನದ ಬಗ್ಗೆ ಹೇಳಿದ್ದಾರೆ. ಶೂಟೀಂಗ್ ವೇಳೆ ಆಕೆಗೆ ಗರ್ಭಸ್ರಾವ ಆಗಿದ್ದು, ಅದನ್ನು ದೊಡ್ಡ ನಾಟಕದಂತೆ ನನ್ನನ್ನು ಅವಮಾನಿಸಿದರು ಎಂದು ಸ್ಮೃತಿ ಇರಾನಿ ಹೇಳಿಕೊಂಡಿದ್ದಾರೆ. ಇನ್ನೂ ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ ಎಂಬ ಸೀರಿಯಲ್ ಶೂಟಿಂಗ್ ಸಮಯದಲ್ಲಿ ಆಕೆ ಗರ್ಭಿಣಿಯಾಗಿದ್ದರಂತೆ. ಆದರೆ ಈ ವಿಚಾರ ಆಕೆಗೂ ಸಹ ತಿಳಿದಿರಲಿಲ್ಲವಂತೆ. ಒಂದು ದಿನ ಶೂಟಿಂಗ್ ಸಮಯದಲ್ಲಿ ತುಂಬಾ ಸುಸ್ತಾಗಿತ್ತಂತೆ. ಮನೆಗೆ ಹೋಗಲು ಕೇಳಿದ್ದೆ. ಆದರೆ ಹೆಚ್ಚು ಕೆಲಸ ಇದ್ದ ಕಾರಣ ಸಂಜೆಯ ವರೆಗೂ ಶೂಟಿಂಗ್ ಸೆಟ್ ನಲ್ಲೆ ಇದ್ದರಂತೆ. ಈ ವೇಳೆ ಆಕೆಗೆ ಅವಮಾನವಾಗಿದ್ದು ಈ ವಿಚಾರವನ್ನು ಸ್ಮೃತಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಇನ್ನೂ ಅದೇ ದಿನ ಸಂಜೆ ರಕ್ತಸ್ರಾವ ಆಗಿತ್ತು, ಜೊತೆಗೆ ಜೋರಾದ ಮಳೆ ಆಟೋ ನಲ್ಲಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡೆ. ಆಗ ವೈದ್ಯರು ಗರ್ಭಸ್ರಾವ ಆಗಿದೆ ಎಂದು ತಿಳಿಸಿದರು.  ಇದರಿಂದ ನಾನು ತುಂಬಾ ಮಾನಸಿಕವಾಗಿ ನೊಂದೆ. ಈ ಘಟನೆಯಿಂದಾಗಿ ಕೆಲವು ದಿನಗಳ ಕಾಲ ಶೂಟಿಂಗ್ ನಿಂದ ಗ್ಯಾಪ್ ತೆಗೆದುಕೊಳ್ಳಲು ತೀರ್ಮಾನ ತೆಗೆದುಕೊಂಡೆ. ಆದರೆ ಶೂಟಿಂಗ್ ಗೆ ಬರಲೇ ಬೇಕು ಎಂದು ಒತ್ತಾಯ ಮಾಡಿದರು. ನಾನು ನಾಟಕ ಆಡುತ್ತಿದ್ದೇನೆ ಎಂದು ಅವಮಾನಿಸಿದರು. ಜೊತೆಗೆ ನನಗೆ ಗರ್ಭಸ್ರಾವ ಆಗಿಲ್ಲ. ನಾನು ನಾಟಕ ಆಡುತ್ತಿದ್ದೇನೆ ಎಂದು ಒಬ್ಬ ವ್ಯಕ್ತಿ ರೂಮರ್‍ ಗಳನ್ನು ಹರಡಿದ್ದ. ಆದರೆ ನಾನು ಅದನ್ನು ಪ್ರೂವ್ ಮಾಡಲು ರಿಪೋರ್ಟ್‌ಗಳನ್ನು ತೆಗೆದುಕೊಂಡು ಹೋಗಿ ಆ ಪ್ರೋಗಾಂ ಕ್ರಿಯೇಟರ್‍ ಏಕ್ತಾ ಕಪೂರ್‍ ಗೆ ತೋರಿಸಿದ್ದೆ ಎಂದು ತಾನು ಎದುರಿಸಿದ ಅವಮಾನದ ಬಗ್ಗೆ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಮತಷ್ಟು ವಿಚಾರಗಳನ್ನು ಹಂಚಿಕೊಂಡ ಸ್ಮೃತಿ ಇರಾನಿ, ಮನೆಯ ಇಎಂಐ ಸೇರಿದಂತೆ ಬೇರೆ ಖರ್ಚುಗಳ ಕಾರಣದಿಂದಾಗಿ ಮತ್ತೆ ಸೆಟ್ ಗೆ ಹೋದೆ. ಇಂಡಸ್ಟ್ರಿಯಲ್ಲಿ ಬಂದ ಮೊದಲಲ್ಲಿ ನನ್ನ ಸಂಪಾದನೆ ಕೇವಲ 1800 ಮಾತ್ರ. ಮದುವೆ ಸಮಯದಲ್ಲಿ ನಮ್ಮ ಬಳಿ ಕೇವಲ ಮೂವತ್ತು ಸಾವಿರ ಇತ್ತು ಎಂದು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಸ್ಮೃತಿ ಇರಾನಿ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.

Most Popular

To Top