Film News

ಜ್ವಾಲಾ ಗುತ್ತಾ ಹಾಗೂ ವಿಷ್ಣು ವಿಶಾಲ್ ವಿಚ್ಚೇದನದ ರೂಮರ್, ವಿಷ್ಣು ವಿಶಾಲ್ ಕೊಟ್ಟ ಸ್ಪಷ್ಟನೆ ಏನು ಗೊತ್ತಾ?

ಸಿನಿರಂಗದಲ್ಲಿ ಲವ್, ಮ್ಯಾರೇಜ್, ಬ್ರೇಕಪ್ ಗಳು ಕೇಳಿಬರುತ್ತಲೇ ಇರುತ್ತವೆ. ಇನ್ನೂ ಅನೇಕರಿಗೆ ಸಿನೆಮಾ ಸೆಲೆಬ್ರೆಟಿಗಳ ವೈಯುಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳುವಂತಹ ಆಸಕ್ತಿ ಸಹ ಹೆಚ್ಚಾಗುತ್ತಿರುತ್ತದೆ. ಈ ಹಾದಿಯಲ್ಲೇ ಸೆಲೆಬ್ರೆಟಿಗಳು ಏನಾದರೂ ಶಾಕಿಂಗ್ ಅಥವಾ ಇಂಟ್ರಸ್ಟಿಂಗ್ ಆಗಿ ಟ್ವೀಟ್ ಮಾಡಿದರೇ ಅದಕ್ಕೆ ನಾನಾ ಅರ್ಥಗಳನ್ನು ಊಹಿಸಿಕೊಳ್ಳುತ್ತಾರೆ. ಇದೀಗ ಕಾಲಿವುಡ್ ಯಂಗ್ ನಟ ವಿಷ್ಣು ವಿಶಾಲ್ ಹಾಗೂ ಬಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುತ್ತಾ ವಿಚ್ಚೇದನಕ್ಕೆ ಮುಂದಾಗಿದ್ದಾರೆ ಎಂಬ ರೂಮರ್‍ ಜೋರಾಗಿಯೇ ಹರಿದಾಡುತ್ತಿದ್ದು, ಇದಕ್ಕೆ ವಿಷ್ಣುವಿಶಾಲ್ ಮಾಡಿದ ಟ್ವೀಟ್ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ವಿಶಾಲ್ ಸಹ ಸ್ಪಷ್ಟನೆ ನೀಡಿದ್ದಾರೆ.

ತಮಿಳು ಸಿನಿರಂಗದ ಯಂಗ್ ಅಂಡ್ ಟ್ಯಾಲೆಂಟೆಡ್ ನಟ ವಿಷ್ಣು ವಿಶಾಲ್ ತನ್ನ ಪತ್ನಿಗೆ ವಿಚ್ಚೇದನ ನೀಡಲಿದ್ದಾರೆ ಎಂಬ ಸುದ್ದಿಯೊಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿತ್ತು. ಇತ್ತೀಚಿಗಷ್ಟೆ ನಟ ವಿಷ್ಣು ವಿಶಾಲ್ ತನ್ನ ಟ್ವಿಟರ್‍ ನಲ್ಲಿ ಟ್ವೀಟ್ ಒಂದನ್ನು ಮಾಡಿದ್ದರು. ಅದರಲ್ಲಿ ನಾನು ತುಂಬಾ ಪ್ರಯತ್ನ ಮಾಡಿದ್ದೆ, ಆದರೂ ಫೈಲ್ ಆಗುತ್ತಲೇ ಇದ್ದೀನಿ, ಅದರಿಂದ ನಾನು ಗುಣಪಾಠವನ್ನು ಕಲಿತೆ, ಅದು ನನ್ನ ಫೈಲ್ಯೂರ್‍ ಅಲ್ಲ ಸಂಪೂರ್ಣವಾಗಿ ನನ್ನ ತಪ್ಪು. ಅದೊಂದು ಮನಃಪೂರ್ವಕ ದ್ರೋಹ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಲೈಫ್ ಸೈನ್ಸಸ್ ಎಂಬ ಹ್ಯಾಷ್ ಟ್ಯಾಗ್ ಹಾಕಿದ್ದರು. ಇದರಿಂದ ವಿಷ್ಣು ವಿಶಾಲ್ ಹಾಗೂ ಜ್ವಾಲಾ ಗುತ್ತಾ ನಡುವೆ ಎಲ್ಲವೂ ಸರಿಯಿಲ್ಲ. ಶೀಘ್ರದಲ್ಲೇ ಈ ಜೋಡಿ ವಿಚ್ಚೇದನ ಪಡೆದುಕೊಳ್ಳಲಿದ್ದಾರೆ ಎಂಬ ರೂಮರ್‍ ಗಳು ಹರಿದಾಡಲು ಶುರುವಾಯ್ತು.

ಸೋಷಿಯಲ್ ಮಿಡಿಯಾದಲ್ಲಿ ವಿಷ್ಣು ವಿಶಾಲ್ ಹಾಗೂ ಜ್ವಾಲಾ ಗುತ್ತಾ ವಿಚ್ಚೇದನದ ಸುದ್ದಿ ಕಡಿಮೆ ಸಮಯದಲ್ಲೇ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದಂತೆ ಈ ಬಗ್ಗೆ ವಿಶಾಲ್ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಆ ಮೂಲಕ ತಮ್ಮ ಬಗ್ಗೆ ಎದುರಾದ ರೂಮರ್‍ ಗಳಿಗೆ ಚೆಕ್ ಇಟ್ಟಿದ್ದಾರೆ. ಇನ್ನೂ ಆ ಟ್ವೀಟ್ ಮಾಡಿದ ಹಿಂದಿರುವ ಉದ್ದೇಶ, ಏತಕ್ಕಾಗಿ ಆ ಟ್ವೀಟ್ ಮಾಡಿದ್ದು ಎಂಬ ವಿಚಾರವನ್ನು ವಿಷ್ಣು ವಿಶಾಲ್ ತಿಳಿಸಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ನಾನು ಟ್ವೀಟ್ ಒಂದನ್ನು ಮಾಡಿದ್ದೇ. ಆದರೆ ಅದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ನಾನು ಆ ಟ್ವೀಟ್ ಮಾಡಿದ್ದು, ನನ್ನ ವೈಯುಕ್ತಿಕ ಜೀವನದ ಬಗ್ಗೆಯಲ್ಲ. ಬದಲಿಗೆ ನನ್ನ ಪ್ರೊಫೆಷನಲ್ ಲೈಫ್ ಕುರಿತು ಮಾತನಾಡಿದ್ದು. ನಮ್ಮ ನಡುವೆ ಒಳ್ಳೆಯ ಬಾಂದವ್ಯವಿದೆ. ಒಬ್ಬರ ಮೇಲೆ ಒಬ್ಬರಿಗೆ ತುಬಾ ನಂಬಿಕೆಯಿದೆ ಎಂದು ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಇನ್ನೂ ವಿಷ್ಣು ವಿಶಾಲ್ ಸೌತ್ ನಲ್ಲಿ ಕೆಲವೊಂದು ಸಿನೆಮಾಗಳ ಮೂಲಕ ಫೇಂ ಪಡೆದುಕೊಂಡಿದ್ದಾರೆ. ಇನ್ನೂ ಜ್ವಾಲಾ ಗುತ್ತಾ ಖ್ಯಾತ ಬಾಡ್ಮಿಂಟನ್ ಆಟಗಾರ್ತಿ. ಕೊನೆಯದಾಗಿ ವಿಷ್ಣು ವಿಶಾಲ್ ಮಟ್ಟಿ ಕುಸ್ತಿ ಎಂಬ ಸಿನೆಮಾದಲ್ಲಿ ನಟನಾಗಿ ತೆಲುಗು ಪ್ರೇಕ್ಷಕರನ್ನೂ ಸಹ ರಂಜಿಸಿದ್ದರು. ಸದ್ಯ ರಜಿನಿಕಾಂತ್ ಪುತ್ರಿ ಐಶ್ವರ್ಯ ರಜನಿಕಾಂತ್ ನಿರ್ದೇಶನ ಮಾಡುತ್ತಿರುವ ಲಾಲ್ ಸಲಾಮ್ ಸಿನೆಮಾದಲ್ಲೂ ಸಹ ವಿಷ್ಣು ವಿಶಾಲ್ ನಟಿಸುತ್ತಿದ್ದಾರೆ. ಸದ್ಯ ಅವರ ವಿಚ್ಚೇದನದ ಬಗ್ಗೆ ಹುಟ್ಟಿಕೊಂಡ ರೂಮರ್‍ ಗೆ ಅಂತ್ಯ ಹಾಡಿದ್ದಾರೆ.

Most Popular

To Top