Film News

ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡ ವಿಕ್ಕಿ-ನಯನ್ ದಂಪತಿ, ಆಸ್ತಿ ಕಬಳಿಕೆ ಆರೋಪದಡಿ ಸ್ಟಾರ್ ಜೋಡಿ…..!

ಸೌತ್ ಇಂಡಿಯಾ ಸ್ಟಾರ್‍ ಜೋಡಿ ನಯನತಾರಾ ಹಾಗೂ ವಿಘ್ನೇಶ್ ಮದುವೆ ಕಳೆದ ವರ್ಷ ಜೂನ್ ಮಾಹೆಯಲ್ಲಿ ಅದ್ದೂರಿಯಾಗಿ ನೆರವೇರಿತ್ತು. ಮದುವೆಯಾದಾಗಿನಿಂದ ಈ ಜೋಡಿ ಒಂದಲ್ಲ ಒಂದು ರೀತಿಯ ವಿವಾದಗಳನ್ನು ಎದುರಿಸುತ್ತಿದ್ದಾರೆ. ಇದೀಗ ಈ ಜೋಡಿ ಮತ್ತೊಂದು ವಿವಾದಕ್ಕೆ ಗುರಿಯಾಗಿದ್ದಾರೆ. ವಿಘ್ನೇಶ್ ಶಿವನ್ ಸಂಬಂಧಿಕರು ಆಸ್ತಿ ಕಬಳಿಕೆಯ ಪ್ರಕರಣವೊಂದನ್ನು ದಾಖಲು ಮಾಡಿದ್ದು, ಈ ಬಗ್ಗೆ ಪೊಲೀಸರು ವಿಚಾರಣೆಯನ್ನು ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ನಿರ್ದೇಶಕ ವಿಘ್ನೇಶ್ ಶಿವನ್ ತಂದೆಯ ಹೆಸರು ಶಿವ ಕೋಳುದು. ಅವರು ಒಂಭತ್ತು ಮಂದಿ ಅಣ್ಣ ತಮ್ಮಂದಿರಂತೆ. ಶಿವ ಕೊಳುದು ಪೊಲೀಸ್ ಇನ್ಫಾರಮರ್‍ ಆಗಿ ಕೆಲಸ ಮಾಡುತ್ತಿದ್ದರಂತೆ. ಇನ್ನೂ ಕೆಲವು ವರ್ಷಗಳ ಹಿಂದೆ ಶಿವ ಕೊಳುದು ಮೃತಪಟ್ಟರು. ಆತ ಜೀವಿಸಿದ್ದಾಗ ಅಣ್ಣ ತಮ್ಮಂದಿರಿಗೆ ಹಕ್ಕಿರುವಂತಹ ಆಸ್ತಿಯನ್ನು ಮಾರಿದ್ದರಂತೆ.  ಈ ಸಂಬಂಧ ವಿಘ್ನೇಶ್ ಶಿವನ್ ತಂದೆಯ ಸಹೋದರರಾದ ಮಾಣಿಕ್ಯಂ, ಕುಂಚಿತ ಪಾದಂ ಎಂಬುವವರು ಆರೋಪಗಳನ್ನು ಮಾಡುತ್ತಿದ್ದಾರೆ. ಜಂಟಿ ಆಸ್ತಿಯನ್ನು ನಮಗೆ ತಿಳಿಯದೇ ಮಾರಿದ್ದಾರೆ, ಮಾರಿದ ಆಸ್ತಿಯ ಹಣ ವಾಪಸ್ಸು ಮಾಡಿ ಮತ್ತೆ ಆಸ್ತಿಯನ್ನು ನೀಡಬೇಕೆಂದು ಡಿಮ್ಯಾಂಡ್ ಮಾಡುತ್ತಿರುವುದಾಗಿ ತಿಳಿದು ಬಂದಿದೆ.

ಇನ್ನೂ ಈ ಬಗ್ಗೆ ತಿರುಚಿ ಡಿಜಿಪಿ ಕಛೇರಿಯಲ್ಲಿ ಪಿರ್ಯಾದು ಸಹ ಮಾಡಲಾಗಿದೆಯಂತೆ. ಈ ಪಿರ್ಯಾದಿನಲ್ಲಿ ವಿಗ್ನೇಶ್ ಶಿವನ್ ಜೊತೆಗೆ ನಯನತಾರಾ ಹಾಗೂ ವಿಘ್ನೇಶ್ ತಾಯಿ ಮೀನಾಕುಮಾರಿ ಹಾಗೂ ಮಗಳು ಐಶ್ವರ್ಯ ಮೇಲೆ ಕ್ರಮ ವಹಿಸುವಂತೆ ಕೋರಿದ್ದಾರೆ ಎನ್ನಲಾಗಿದೆ. ಇನ್ನೂ ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರಂತೆ. ಇನ್ನೂ ಈ ಸುದ್ದಿ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಕಳೆದ ವರ್ಷ ವಿಘ್ನೇಶ್ ಹಾಗೂ ನಯನತಾರಾ ಮದುವೆಯಾದರು. ಮದುವೆಯಾದಾಗಿನಿಂದ ಒಂದಲ್ಲ ಒಂದು ವಿವಾದಕ್ಕೆ ಗುರಿಯಾಗುತ್ತಿದ್ದಾರೆ.

ಮದುವೆಯ ಬಳಿಕ ತಿರುಮಲದಲ್ಲಿ ಒಂದು ವಿವಾದ, ಬಳಿಕ ಸೆರಗೋಸಿ ಪದ್ದತಿಯ ಮೂಲಕ ಮಕ್ಕಳನ್ನು ಪಡೆದುಕೊಂಡು ಅದರಿಂದ ಒಂದು ವಿವಾದ ಹೀಗೆ ಅನೇಕ ವಿವಾದಗಳಿಗೆ ಗುರಿಯಾಗುತ್ತಿದ್ದಾರೆ. ಇದೀಗ ಆಸ್ತಿ ಕಬಳಿಕ ಪ್ರಕರಣದ ವಿವಾದಕ್ಕೆ ಗುರಿಯಾಗಿದ್ದಾರೆ. ಇನ್ನೂ ನಯನತಾರಾ ಇದೀಗ ಶಾರುಖ್ ಖಾನ್ ಜೊತೆಗೆ ಜವಾನ್ ಎಂಬ ಸಿನೆಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನೆಮಾಗಾಗಿ ನಯನತಾರಾ ಭಾರಿ ಮೊತ್ತದ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

Most Popular

To Top