Film News

ಪ್ರಕೃತಿಯ ಮಡಿಲಲ್ಲಿ ಎಂಜಾಯ್ ಮಾಡಿದ ನ್ಯಾಚುಲರ್ ಬ್ಯೂಟಿ ಸಾಯಿ ಪಲ್ಲವಿ, ಮನಸ್ಸು ಪ್ರಶಾಂತವಾಗಿದೆ ಎಂದ ನಟಿ…..!

ಸಿನಿರಂಗದಲ್ಲಿ ಕೆಲ ನಟಿಯರು ಓವರ್‍ ಆಗಿ ಗ್ಲಾಮರ್‍ ಶೋ ಮಾಡದೇ ನ್ಯಾಚುರಲ್ ಆಗಿಯೇ ಸ್ಟಾರ್‍ ಡಮ್ ಗಿಟ್ಟಿಸಿಕೊಂಡ ನಟಿಯರಲ್ಲಿ ಸಾಯಿ ಪಲ್ಲವಿ ಸಹ ಒಬ್ಬರಾಗಿದ್ದಾರೆ. ಮಲಯಾಳಂನ ಪ್ರೇಮಂ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ ಕಡಿಮೆ ಸಮಯದಲ್ಲೇ ಸ್ಟಾರ್‍ ಡಮ್ ಗಿಟ್ಟಿಸಿಕೊಂಡು ಬಹುಬೇಡಿಕೆ ನಟಿಯಾದರು. ಇನ್ನೂ ಸಾಯಿ ಪಲ್ಲವಿ ಸೋಷಿಯಲ್ ಮಿಡಿಯಾದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಆಗಾಗ ಒಂದೊಂದು ಪೋಸ್ಟ್ ಮಾಡುತ್ತಿರುತ್ತಾರೆ. ಇದೀಗ ಆಕೆ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದು, ಸಖತ್  ವೈರಲ್ ಆಗುತ್ತಿವೆ.

ಲೇಡಿ ಪವರ್‍ ಸ್ಟಾರ್‍ ಸಾಯಿ ಪಲ್ಲವಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದು ಅವರ ಹೊಸ ಸಿನೆಮಾದ ಅಪ್ಡೇಟ್ ಗಾಗಿ ಕಾಯುತ್ತಿದ್ದಾರೆ. ಮೂಲತಃ ತಮಿಳು ಮೂಲದವರಾದರೂ ಸಹ ಸಾಯಿಪಲ್ಲವಿ ಅಪಾರ ಸಂಖ್ಯೆಯ ತೆಲುಗು ಅಭಿಮಾನಿಗಳನ್ನೂ ಸಹ ಪಡೆದುಕೊಂಡಿದ್ದಾರೆ. ಫಿದಾ, ಎಂಸಿಎ, ಲವ್ ಸ್ಟ್ರೋರಿ, ಶ್ಯಾಮಸಿಂಗರಾಯ್ ಮೊದಲಾದ ಸಿನೆಮಾಗಳ ಮೂಲಕ ಮತಷ್ಟು ಕ್ರೇಜ್ ಪಡೆದುಕೊಂಡರು. ಈ ಸಿನೆಮಾಗಳಲ್ಲಿ ಆಕೆ ಪವರ್‍ ಪುಲ್ ರೋಲ್ ಪ್ಲೇ ಮಾಡಿದ್ದರು. ಇನ್ನೂ ಕಥೆಯಲ್ಲಿ ಪ್ರಧಾನ್ಯತೆಯಿದ್ದರೇ ಮಾತ್ರ ಆಕೆ ನಟಿಸುತ್ತಾರೆ. ಇದೇ ಆಕೆಯ ಸಕ್ಸಸ್ ಗೆ ಕಾರಣ ಎಂದೂ ಸಹ ಹೇಳಲಾಗುತ್ತದೆ. ಇದೀಗ ಆಕೆ ಪ್ರಕೃತಿಯ ಮಡಿಲಲ್ಲಿ, ಪ್ರಾಕೃತಿಕ ಸೌಂದರ್ಯವನ್ನು ಸವಿಯುತ್ತಾ ಪ್ರಶಾಂತತೆಯನ್ನು ಅನುಭವಿಸಿದ್ದಾರೆ.

ಇನ್ನೂ ನಟಿ ಸಾಯಿ ಪಲ್ಲವಿ ಸೋಷಿಯಲ್ ಮಿಡಿಯಾದಲ್ಲಿ ಅಷ್ಟೊಂದು ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಆಗಾಗ ಒಂದೊಂದು ಪೋಸ್ಟ್ ಮಾಡುತ್ತಿರುತ್ತಾರೆ. ಇದೀಗ ಆಕೆ ವೆಕೇಷನ್ ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಪ್ರಾಕೃತಿಕ ಸೌಂದರ್ಯವನ್ನು ಸವಿಯುತ್ತಾ ಕೆಲವೊಂದು ಪೊಟೋಗಳನ್ನು ಅಭಿಮಾನಿಗಳಿಗಾಗಿ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಇಂಟ್ರಸ್ಟಿಂಗ್ ಕ್ಯಾಪ್ಷನ್ ಸಹ ಹಾಕಿದ್ದಾರೆ. ಸುತ್ತಲೂ ಹಸಿರು, ಪ್ರಾಣಿಗಳು, ಎತ್ತರದ ಮರಗಳ ಮಧ್ಯೆ ಪ್ರಶಾಂತವಾದ ವಾತಾವರಣ ಎಜಾಯ್ ಮಾಡುತ್ತಾ ಸಿಂಪಲ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಪೊಟೋಗಳನ್ನು ಶೇರ್‍ ಮಾಡಿ ಮನಸ್ಸು ತುಂಬಾ ಪ್ರಶಾಂತವಾಗಿದೆ ಎಂದು ಕ್ಯಾಪ್ಷನ್ ಹಾಕಿದ್ದಾರೆ. ಇನ್ನೂ ಸಾಯಿ ಪಲ್ಲವಿ ಹಂಚಿಕೊಂಡ ಪೊಟೋಗಳು ವೈರಲ್ ಆಗುತ್ತಿದ್ದು, ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇನ್ನೂ ಸಾಯಿ ಪಲ್ಲವಿ ಕೊನೆಯದಾಗಿ ವಿರಾಟಪರ್ವಂ, ಗಾರ್ಗಿ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಬಳಿಕ ಸುಮಾರು ದಿನಗಳ ಕಾಲ ಆಕೆ ಸೈಲೆಂಟ್ ಆಗಿಯೇ ಇದ್ದರು. ಆಕೆ ಸಿನೆಮಾಗಳಿಂದ ದೂರವುಳಿಯಲಿದ್ದಾರೆ ಎಂಬ ಮಾತುಗಳೂ ಸಹ ಕೇಳಿಬಂದವು. ಆದರೆ ಆಕೆ ಶಿವಕಾರ್ತಿಕೇಯನ್ ಜೊತೆಗೆ SK21 ಸಿನೆಮಾದಲ್ಲಿ ನಟಿಸುತ್ತಿದ್ದಾರೆ.

Most Popular

To Top