ವಿದೇಶದಲ್ಲಿ ಬುಟ್ಟಬೊಮ್ಮ ಪೂಜಾ ಹೆಗ್ಡೆ ಸಖತ್ ಎಂಜಾಯ್, ಈ ವರ್ಷವಾದರೂ ಆಕೆಗೆ ಸಿಗುತ್ತಾ ಸಕ್ಸಸ್?

ಸಿನಿರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ಸೋಲು ಕಂಡರೇ ಅಂತಹ ನಟಿಯರು ಫೇಡ್ ಔಟ್ ಆಗಿಬಿಡುತ್ತಾರೆ. ಆದರೆ ಬುಟ್ಟಬೊಮ್ಮ ಎಂದೇ ಕರೆಯಲಾಗುವ ಪೂಜಾ ಹೆಗ್ಡೆ ಮಾತ್ರ ಹ್ಯಾಟ್ರಿಕ್ ಸೋಲುಗಳನ್ನು ಕಂಡರೂ ಸಹ ಆಕೆಯ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ನಟಿಸುವ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇದೀಗ ಆಕೆ ತನ್ನ ಸ್ನೇಹಿತರೊಂದಿಗೆ ದುಬೈನಲ್ಲಿ ಹೊಸ ವರ್ಷದ ಆಚರಣೆಗೆ ಹೋಗಿದ್ದಾರೆ. ಅಲ್ಲಿ ಆಕೆ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಇನ್ನೂ ಆಕೆಯ ಅಭಿಮಾನಿಗಳು ಈ ವರ್ಷವಾದರೂ ಆಕೆಗೆ ಬ್ರೇಕ್ ನೀಡುವಂತಹ ಸಿನೆಮಾಗಳು ಸಿಗಲಿ ಎಂದು ಹಾರೈಸುತ್ತಿದ್ದಾರೆ.

ನಟಿ ಪೂಜಾ ಹೆಗ್ಡೆ ಸದ್ಯ ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್ ಜೊತೆಗೆ ಹಾಗೂ ಟಾಲಿವುಡ್ ನಲ್ಲಿ ಮಹೇಶ್ ಬಾಬು ಜೊತೆಗೆ ನಟಿಸುತ್ತಿದ್ದಾರೆ. ತ್ರಿವಿಕ್ರಮ್ ಶ್ರೀನಿವಾಸ್ ಹಾಗೂ ಮಹೇಶ್ ಬಾಬು ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ SSMB28 ಸಿನೆಮಾದ ಶೂಟಿಂಗ್ ಭರದಿಂದ ಸಾಗಿತ್ತು. ಆದರೆ ಕೆಲವೊಂದು ಕಾರಣಗಳಿಂದ ಈ ಸಿನೆಮಾದ ಶೂಟಿಂಗ್ ನಿಂತಿದೆ. ಇದೀಗ ತ್ರಿವಿಕ್ರಮ್ ನೆಕ್ಸ್ಟ್ ಶೇಡ್ಯೂಲ್ಡ್ ಅನ್ನು ಪ್ಲಾನ್ ಮಾಡಿದ್ದು, ಶೀಘ್ರದಲ್ಲೇ ಶೂಟಿಂಗ್ ಸಹ ನಡೆಯಲಿದೆ. ಇನ್ನೂ ಶೂಟಿಂಗ್ ನಿಂದ ಬ್ರೇಕ್ ಸಿಕ್ಕ ಹಿನ್ನೆಲೆಯಲ್ಲಿ ಆಕೆ ಬ್ಯಾಕ್ ಟು ಬ್ಯಾಕ್ ಪ್ರವಾಸಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಹೊಸ ವರ್ಷದ ಆಚರಣೆಗಾಗಿ ದುಬೈಗೆ ಹಾರಿದ್ದಾರೆ. ಅಲ್ಲಿನ ಸುಂಧರವಾದ ಪ್ರದೇಶಗಳಲ್ಲಿ ಪೂಜಾ ಹೆಗ್ಡೆ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಅಲ್ಲಿನ ಕೆಲವೊಂದು ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನೂ ಕಳೆದ ವರ್ಷ ಪೂಜಾ ಹೆಗ್ಡೆ ಅಭಿನಯದ ಐದು ಸಿನೆಮಾಗಳು ತೆರೆಗೆ ಬಂದಿದ್ದವು. ಈ ಪೈಕಿ ಎಫ್-3 ಸಿನೆಮಾದಲ್ಲಿ ಐಟಂ  ಸಾಂಗ್ ನಲ್ಲಿ ಕಾಣಿಸಿಕೊಂಡಿದ್ದರು. 2022 ನೇ ವರ್ಷ ಪೂಜಾ ಕೆರಿಯರ್‍ ನಲ್ಲಿ ತುಂಬಾ ಸೋಲು ತಂದುಕೊಟ್ಟಿದೆ. ಇದೀಗ ಆಕೆ ಮಹೇಶ್ ಬಾಬು ಜೊತೆಗೆ SSMB28 ಸಿನೆಮಾದಲ್ಲಿ ನಟಿಸುತ್ತಿದ್ದು, ಆಕೆಗೆ ಬಿಗ್ ಬ್ರೇಕ್ ಕೊಡಲು ತ್ರಿವಿಕ್ರಮ್ ಕರ್ತವ್ಯ ತೆಗೆದುಕೊಳ್ಳಬೇಕಿದೆ. ಈ ಸಿನೆಮಾದ ಮೂಲಕವಾದರೂ ಪೂಜಾ ಹೆಗ್ಡೆ ಬಿಗ್ ಬ್ರೇಕ್ ಪಡೆದುಕೊಳ್ಳಲಿ ಎಂದು ಆಕೆಯ ಅಭಿಮಾನಿಗಳು ಸಹ ಕೋರುತ್ತಿದ್ದಾರೆ. ಇನ್ನೂ ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್ ಜೊತೆಗೂ ಸಹ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಕಳೆದ ವರ್ಷ ಇಡೀ ಬಾಲಿವುಡ್ ಗೆ ಕೆಟ್ಟ ವರ್ಷ ಎಂದೇ ಹೇಳಬಹುದಾಗಿದೆ. ದೊಡ್ಡ ದೊಡ್ಡ ಸ್ಟಾರ್‍ ನಟರ ಸಿನೆಮಾಗಳೂ ಸಹ ಬಾಲಿವುಡ್ ನಲ್ಲಿ ದೊಡ್ಡ ಮಟ್ಟದ ಸೋಲನ್ನು ಕಂಡಿದೆ.

ಇನ್ನೂ ಪೂಜಾ ಹೆಗ್ಡೆ 2021 ರವರೆಗೂ ಭಾರಿ ಸಕ್ಸಸ್ ಕಂಡುಕೊಂಡರು. ಮಹರ್ಷಿ, ಅಲಾ ವೈಕುಂಟಪುರಂಲೋ ಸಿನೆಮಾಗಳು ಆಕೆ ಒಳ್ಳೆಯ ಫೇಂ ತಂದುಕೊಟ್ಟಿತ್ತು. ಆಕೆಯನ್ನು ಗೋಲ್ಡನ್ ಲೆಗ್ ನಟಿ ಎಂದೂ ಕರೆದರು. ಆದರೆ 2022 ನೇ ವರ್ಷ ಆಕೆಗೆ ಐರನ್ ಲೆಗ್ ಎಂಬ ಮುದ್ರೆಯನ್ನು ಹಾಕಿತ್ತು. ಆ ವರ್ಷದಲ್ಲಿ ಆಕೆ ನಟಿಸಿದ ಎಲ್ಲಾ ಸಿನೆಮಾಗಳು ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದವು. ಈ ವರ್ಷವಾದರೂ ಪೂಜಾ ಹೆಗ್ಡೆ ಒಳ್ಳೆಯ ಸಕ್ಸಸ್ ಕಂಡುಕೊಳ್ಳಲಿ ಎಂದು ಆಕೆಯ ಅಭಿಮಾನಿಗಳೂ ಸಹ ಕೋರುತ್ತಿದ್ದಾರೆ.

Previous articleಕಲರ್ ಪುಲ್ ಡ್ರೆಸ್ ನಲ್ಲಿ ಹಾಟ್ ಟ್ರೀಟ್ ಕೊಟ್ಟ ಸೀನಿಯರ್ ಬ್ಯೂಟಿ ಶ್ರೆಯಾ, ಮೈಂಡ್ ಬ್ಲೋಯಿಂಗ್ ಪಿಕ್ಸ್ ವೈರಲ್….!
Next articleಸಂಭಾವನೆ ಏರಿಸಿದ ಸೀತಾರಾಮಂ ಬ್ಯೂಟಿ ಮೃಣಾಲ್, ನಾನಿ ಸಿನೆಮಾಗಾಗಿ ಭಾರಿ ಮೊತ್ತ ಡಿಮ್ಯಾಂಡ್ ಮಾಡಿದ್ದಾರಂತೆ?