Film News

ಆ ಸಿನೆಮಾದಲ್ಲಿ ಪಾತ್ರವನ್ನು ಎಂದೂ ಮರೆಯೊಲ್ಲ ಎಂದ ಬುಟ್ಟ ಬೊಮ್ಮ ಪೂಜಾಹೆಗ್ಡೆ, ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಬ್ಯೂಟಿ…!

ಸೌತ್ ಸಿನಿರಂಗದಲ್ಲಿ ಕಡಿಮೆ ಸಮಯದಲ್ಲೇ ಸ್ಟಾರ್‍ ಡಮ್ ಗಿಟ್ಟಿಸಿಕೊಂಡ ನಟಿಯರಲ್ಲಿ ಪೂಜಾ ಹೆಗ್ಡೆ ಅಗ್ರಸ್ಥಾನದಲ್ಲಿರುತ್ತಾರೆ. ಕಳೆದ ವರ್ಷ ಪೂಜಾ ಹೆಗ್ಡೆ ಕೆರಿಯರ್‍ ಗೆ ಅದು ತುಂಬಾನೆ ಕೆಟ್ಟದು ಎಂದು ಹೇಳಬಹುದಾಗಿದೆ. ಕಳೆದ ವರ್ಷ ಆಕೆ ಬಿಗ್ ಬಜೆಟ್ ಸಿನೆಮಾಗಳಲ್ಲಿ ನಟಿಸಿದ್ದರು. ಅದೂ ಸ್ಟಾರ್‍ ನಟರ ಸಿನೆಮಾಗಳಲ್ಲಿ. ಆದರೆ ಈ ನಾಲ್ಕು ಸಿನೆಮಾಗಳೂ ಸಹ ಆಕೆಎಗೆ ಡಿಜಾಸ್ಟರ್‍ ನೀಡಿತ್ತು. ಈ ಕಾರಣದಿಂದ ಆಕೆಗೆ ಐರನ್ ಲೆಗ್ ಎಂಬ ಮುದ್ರೆಯನ್ನು ಸಹ ಹಾಕಿದ್ದರು. ಆದರೂ ಸಹ ಆಕೆಗೆ ಅವಕಾಶಗಳು ಮಾತ್ರ ಕಡಿಮೆಯಾಗಿಲ್ಲ. ಆಕೆ ಮತಷ್ಟು ಆಫರ್‍ ಗಳನ್ನು ಗಿಟ್ಟಿಸಿಕೊಳ್ಳುತ್ತಾ ಮುಂದುವರೆಯುತ್ತಿದ್ದಾರೆ.

ನಟಿ ಪೂಜಾ ಹೆಗ್ಡೆ ಕೆರಿಯರ್‍ ನಲ್ಲಿ ಬಿಗ್ ಬ್ರೇಕ್ ನೀಡಿದ ಅನೇಕ ಸಿನೆಮಾಗಳಿವೆ. ಈ ಪೈಕಿ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದಲ್ಲಿ ತೆರೆಗೆ ಬಂದ ಅಲಾ ವೈಕುಂಠಪುರಂಲೋ ಸಿನೆಮಾ ಸಹ ಒಂದಾಗಿದೆ. ಈ ಸಿನೆಮಾದಲ್ಲಿ ಸ್ಟೈಲಿಷ್ ಸ್ಟಾರ್‍ ಅಲ್ಲು ಅರ್ಜುನ್ ಜೊತೆಗೆ ಪೂಜಾ ಹೆಗ್ಡೆ ಕೆಮಿಸ್ಟ್ರಿ ಸಹ ತುಂಬಾ ಚೆನ್ನಾಗಿ ವರ್ಕೌಟ್ ಆಗಿತ್ತು. ಈ ಸಿನೆಮಾದಲ್ಲಿ ಪೂಜಾ ಹೆಗ್ಡೆ ಸಹ ತುಂಬಾನೆ ಮುದ್ದಾಗಿ ಕಾಣಿಸಿಕೊಂಡಿದ್ದು, ಅಮೂಲ್ಯ ಪಾತ್ರದಲ್ಲಿ ಅದ್ಬುತವಾಗಿ ನಟಿಸಿದ್ದಾರೆ. ಈ ಸಿನೆಮಾದ ಬಳಿಕ ಆಕೆಗೆ ಬುಟ್ಟಬೊಮ್ಮ ಎಂಬ ಖ್ಯಾತಿ ಸಹ ದೊರೆಯಿತು. ಈ ಸಿನೆಮಾದಲ್ಲಿ ಬುಟ್ಟ ಬೊಮ್ಮ ಹಾಡಿನ ಮೂಲಕ ತುಂಬಾನೆ ಕ್ರೇಜ್ ಪಡೆದುಕೊಂಡರು. ಇನ್ನೂ ಈ ಸಿನೆಮಾ ಬಿಡುಗಡೆಯಾಗಿ ಮೂರು ವರ್ಷಗಳು ಪೂರ್ಣಗೊಂಡಿದ್ದು, ಈ ಬಗ್ಗೆ ಪೂಜಾ ಹೆಗ್ಡೆ ಸೋಷಿಯಲ್ ಮಿಡಿಯಾದಲ್ಲಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ನಟಿ ಪೂಜಾ ಹೆಗ್ಡೆ ತನಗೆ ಬ್ಲಾಕ್ ಬ್ಲಸ್ಟರ್‍ ಹಿಟ್ ನೀಡಿದ ಅಲಾ ವೈಕುಂಟಪುರಂ ಲೋ ಸಿನೆಮಾದ ಬಗ್ಗೆ ಸೋಷಿಯಲ್ ಮಿಡಿಯಾ ಮೂಲಕ ಪೋಸ್ಟ್ ಒಂದನ್ನು ಮಾಡಿದ್ದಾರೆ. ಈ ಸಿನೆಮಾದ ಕೆಲವೊಂದು ಜ್ಞಾಪಕಗಳನ್ನು ಆಕೆ ನೆನಪಿಸಿಕೊಂಡಿದ್ದಾರೆ. ಈ ಸಿನೆಮಾದಲ್ಲಿ ಪೂಜಾ ಹೆಗ್ಡೆ ಅಮೂಲ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಪಾತ್ರದ ಬಗ್ಗೆ ಸ್ಪಂದಿಸುತ್ತಾ ಪೋಸ್ಟ್ ಮಾಡಿದ್ದು, ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಸೊಷಿಯಲ್ ಮಿಡಿಯಾದಲ್ಲಿ ಆಕೆ ಮಾಡಿತು ಪೋಸ್ಟ್ ನಲ್ಲಿರುವಂತೆ ಅಮೂಲ್ಯ ಎಂಬ ಪಾತ್ರ ಹುಟ್ಟಿ ಮೂರು ವರ್ಷಗಳು ಕಳೆದಿದೆ. ಈ ಪಾತ್ರ ಎಂದಿಗೂ ನನ್ನ ಹೃದಯಲ್ಲೇ ಇರುತ್ತದೆ. ಆ ಪಾತ್ರ ತುಂಬಾನೆ ಪ್ರತ್ಯೇಕವಾದುದು.

ಈ ಸಿನೆಮಾ ಮೂರು ವರ್ಷಗಳನ್ನು ಪೂರೈಸಿದ್ದು, ಸಂಭ್ರಮಿಸಲು ಸಿದ್ದವಾಗಿದೆ ಎಂದು ಪೋಸ್ಟ್ ಮಾಡಿದ್ದಾರೆ. ಸದ್ಯ ಆಕೆಯ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಸದ್ಯ ಪೂಜಾ ಹೆಗ್ಡೆ ತ್ರಿವಿಕ್ರಮ್ ಶ್ರೀನಿವಾಸ್ ಹಾಗೂ ಮಹೇಶ್ ಬಾಬು ಕಾಂಬಿನೇನಷನ್ ನಲ್ಲಿ ಮೂಡಿಬರಲಿರುವ SSMB28 ಸಿನೆಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಈ ಸಿನೆಮಾದ ಶೂಟಿಂಗ್ ಶುರುವಾಗಿದ್ದು, ಕೆಲವೊಂದು ಕಾರಣಗಳಿಂದ ಶೂಟಿಂಗ್ ನಿಂತಿತ್ತು. ಸಂಕ್ರಾಂತಿ ಹಬ್ಬದ ಬಳಿಕ ಈ ಸಿನೆಮಾದ ಶೂಟಿಂಗ್ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ.

Most Popular

To Top