ಸೈಲೆಂಟ್ ಆಗಿ ಅಭಿಮಾನಿಗಳನ್ನು ಭೇಟಿಯಾದ ಕೃತಿ ಶೆಟ್ಟಿ, ಕನ್ನಡದ ಬ್ಯೂಟಿ ಕೃತಿ ಶೆಟ್ಟಿ ಈ ಭೇಟಿಗೆ ಕಾರಣವಾದರೂ ಏನು?

ಸೌತ್ ಸಿನಿರಂಗದಲ್ಲಿ ಕನ್ನಡ ಮೂಲದ ನಟಿಯರ ಹವಾ ಜೋರಾಗಿಯೇ ನಡೆಯುತ್ತಿದೆ. ಈ ಸಾಲಿಗೆ ಯಂಗ್ ನಟಿ ಕೃತಿ ಶೆಟ್ಟಿ ಸಹ ಸೇರುತ್ತಾರೆ. ಕಡಿಮೆ ಸಮಯದಲ್ಲೇ ಸ್ಟಾರ್‍ ನಟಿಯಾಗಿ ಕ್ರೇಜ್ ಪಡೆದುಕೊಂಡ ಈಕೆ ದೊಡ್ಡ ಮಟ್ಟದ ಫ್ಯಾನ್ ಫಾಲೋಯಿಂಗ್ ಸಹ ಬೆಳೆಸಿಕೊಂಡಿದ್ದಾರೆ.  ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಬ್ಯುಸಿಯಾಗಿರುತ್ತಾರೆ. ಇದೀಗ ಆಕೆ ತನ್ನ ಅಭಿಮಾನಿಗಳ ಜೊತೆಗೆ ಸೈಲೆಂಟ್ ಆಗಿ ಸೀಕ್ರೇಟ್ ಮೀಟಿಂಗ್ ಮಾಡಿದ್ದಾರೆ ಎನ್ನಲಾಗಿದ್ದು ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದಾರೆ.

ನಟಿ ಕೃತಿ ಶೆಟ್ಟಿ ಸೌತ್ ಸಿನಿರಂಗದಲ್ಲಿ ಸ್ಟಾರ್‍ ಇಮೇಜ್ ಗಿಟ್ಟಿಸಿಕೊಂಡು ಮುನ್ನುಗ್ಗುತ್ತಿದ್ದಾರೆ. ತೆಲುಗು, ತಮಿಳು, ಮಲಯಾಳಂ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದು ಕಡೆ ಓದುತ್ತಾ, ಮತ್ತೊಂದು ಕಡೆ ಸಿನೆಮಾಗಳನ್ನು ಮಾಡುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಇನ್ನೂ ಸಿನೆಮಾಗಳಂತೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಬ್ಯುಸಿಯಾಗಿರುತ್ತಾರೆ. ಆಕೆಗೆ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಫ್ಯಾನ್ ಫಾಲೋಯಿಂಗ್ ಪಡೆದುಕೊಂಡಿದ್ದಾರೆ. ತೆಲುಗಿನ ಉಪ್ಪೆನಾ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ  ಮೊದಲನೇ ಸಿನೆಮಾದ ಮೂಲಕ ದೊಡ್ಡ ಕ್ರೇಜ್ ಪಡೆದುಕೊಂಡರು. ಸೋಷಿಯಲ್ ಮಿಡಿಯಾ ಮೂಲಕವೂ ಸಹ ಹಾಟ್ ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರನ್ನೂ ಸೆಳೆಯುತ್ತಿರುತ್ತಾರೆ. ಆಕೆಯ ಅಭಿಮಾನಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಈ ಹಾದಿಯಲ್ಲೇ ಆಕೆ ತನ್ನ ಅಭಿಮಾನಿಗಳನ್ನು ಭೇಟಿಯಾಗಿದ್ದಾರೆ.

ಇತ್ತೀಚಿಗಷ್ಟೆ ನಟಿ ಕೃತಿ ಶೆಟ್ಟಿ ಹೈದರಾಬಾದ್ ನಲ್ಲಿ ಯಾವುದೇ ರೀತಿಯ ಆಡಂಬರ ವಿಲ್ಲದೇ ತನ್ನ ಅಭಿಮಾನಿಗಳನ್ನು ಭೇಟಿಯಾಗಿದ್ದಾರೆ. ಸೋಷಿಯಲ್ ಮಿಡಿಯಾ ಮೂಲಕ ತಮ್ಮ ಫ್ಯಾನ್ ಪೇಜ್ ಗಳನ್ನು ನಿರ್ವಹಣೆ ಮಾಡುವಂತಹವರೊಂದಿಗೆ ಕೃತಿ ಫ್ಯಾನ್ಸ್ ಮೀಟ್ ಕಾರ್ಯಕ್ರಮವನ್ನು ಏರ್ಪಡಿಸಿದ್ದಾರೆ. ಈ ಭೇಟಿಯಲ್ಲಿ ಕೃತಿ ತಮ್ಮ ಅಭಿಮಾನಿಗಳೊಂದಿಗೆ ಸಮಯ ಕಳೆದಿದ್ದಾರೆ. ಅವರೊಂದಿಗೆ ಪೊಟೋಗಳಿಗೆ ಪೋಸ್ ಕೊಟ್ಟಿದ್ದಾರೆ. ಗ್ರೂಪ್ ಸೆಲ್ಫಿ ಸಹ ಕೊಟ್ಟಿದ್ದಾರೆ. ಇದೀಗ ಆಕೆ ತಮ್ಮ ಅಭಿಮಾನಿಗಳೊಂದಿಗೆ ತೆಗೆಸಿಕೊಂಡ ಸೆಲ್ಫಿ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಇನ್ನೂ ಈ ಪೊಟೋ ಹೊರಬಂದ ಕೂಡಲೇ ಎಲ್ಲರೂ ಶಾಕ್ ಆಗಿದ್ದಾರೆ. ಇಲ್ಲಿಯವರೆಗೂ ಹಿರೋಗಳನ್ನು ಬಿಟ್ಟರೇ ಯಾವುದೇ ಹಿರೋಯಿನ್ ಗಳು ಈ ರೀತಿಯ ಮೀಟಿಂಗ್ ಏರ್ಪಡಿಸಿಲ್ಲ.

ಆದರೆ ನಟಿ ಕೃತಿ ಶೆಟ್ಟಿ ಮಾತ್ರ ಕೆರಿಯರ್‍ ಆರಂಭದಲ್ಲೇ ಈ ರೀತಿಯ ಫ್ಯಾನ್ಸ್ ಮೀಟ್ ಇಟ್ಟಿದ್ದು ಇತರೆ ನಟಿಯರಿಗೆ ಶಾಕ್ ಆಗಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಹ್ಯಾಟ್ರಿಕ್ ಹಿಟ್ಸ್ ಪಡೆದುಕೊಂಡ ಕೃತಿ ಶೆಟ್ಟಿ, ಬಳಿಕ ಬಂದಂತಹ ಎರಡೂ ಸಿನೆಮಾಗಳಲ್ಲೂ ಸೋಲನ್ನು ಕಂಡರು. ಈ ಕಾರಣದಿಂದ ಆಕೆ ಕೊಂಚ ನಿರಾಸೆಯನ್ನು ಕಂಡರೂ ಸಹ ಆಫರ್‍ ಗಳು ಮಾತ್ರ ಕಡಿಮೆಯಾಗಿಲ್ಲ. ಆಕೆಗೆ ಅನೇಕ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ ಎನ್ನಲಾಗುತ್ತಿದೆ.

Previous articleಆ ಸಿನೆಮಾದಲ್ಲಿ ಪಾತ್ರವನ್ನು ಎಂದೂ ಮರೆಯೊಲ್ಲ ಎಂದ ಬುಟ್ಟ ಬೊಮ್ಮ ಪೂಜಾಹೆಗ್ಡೆ, ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಬ್ಯೂಟಿ…!
Next articleಶಾರ್ಟ್ ಡ್ರೆಸ್ ನಲ್ಲಿ ಹಾಟ್ ಪೋಸ್ ಕೊಟ್ಟ ಆಪಲ್ ಬ್ಯೂಟಿ ಹನ್ಸಿಕಾ, ಮದುವೆಯಾದರೂ ತಗ್ಗೇದೆ ಲೇ ಎಂದು ಹಾಟ್ ಟ್ರೀಟ್ ಕೊಟ್ಟ ಬ್ಯೂಟಿ….!