News

ಬಿಎಂಟಿಸಿ ಬಸ್ ಗೆ ಶಾಲಾ ಬಾಲಕಿ ಬಲಿ, ಬಸ್ ಹಾಗೂ ಬೈಕ್ ನಡುವೆ ಅಪಘಾತ….!

ಬೆಳಿಗ್ಗೆ ಶಾಲೆಗೆಂದು ಹೋದ ಮಗಳು ಶವವಾಗಿ ಮನೆಗೆ ಹೋಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಬೆಳಿಗ್ಗೆ 9 ಗಂಟೆ ಸಮಯದಲ್ಲಿ ಶಾಲೆಗೆ ಹೋಗಬೇಕಾದ ಪುಟಾಣಿ ಮಗು ಅಪಘಾತದಲ್ಲಿ ಮೃತಪಟ್ಟಿದ್ದಾಳೆ. ನಗರದ ಉತ್ತರಹಳ್ಳಿ ಮುಖ್ಯ ರಸ್ತೆಯ ಸಿಗ್ನಲ್ ಬಳಿಯಿರುವ ಪದ್ಮಾವತಿ ಸಿಲ್ಕ್ ಶೋ ರೂಂ ಬಳಿ ಈ ಮನಕಲಕುವಂತಹ ಘಟನೆ ನಡೆದಿದೆ.

ಬೆಳಗ್ಗೆ ಸುಮಾರು 9 ಗಂಟೆ ಸಮಯದಲ್ಲಿ  ಬೆಂಗಳೂರಿನ ಉತ್ತರಹಳ್ಳಿ ಮುಖ್ಯ ರಸ್ತೆ ಸಿಗ್ನಲ್ ಬಳಿ ಬೈಕ್ ನಲ್ಲಿ ತಂದೆ ಮಗಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿರುತ್ತಾರೆ.  ಈ ವೇಳೆ ಏಕಾಏಕಿ ಬಂದ ಬಿಎಂಟಿಸಿ ಬಸ್ ಬೈಕ್ ಗೆ ಡಿಕ್ಕಿ ಹೊಡೆದಿದೆ. ಬಸ್ ಡಿಕ್ಕಿ ಹೊಡೆದ ರಭಸಕ್‌ಎಕ ಬಾಲಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಮೃತ ದುರ್ದೈವಿಯನ್ನು ನಾಲ್ಕೂವರೆ ವರ್ಷದ ಪೂರ್ವಿ ಎಂದು ಗುರ್ತಿಸಲಾಗಿದೆ. ಮೃತಳ ತಂದೆ ಪ್ರಸನ್ನ ಬೈಕ್ ನಲ್ಲಿ ಮಗಳನ್ನು ಕರೆದುಕೊಂಡು ಹೋಗುತ್ತಿದ್ದ, ಮಧ್ಯೆ ರೋಡ್ ನಲ್ಲಿ ಟರ್ನ್ ಮಾಡಲು ಮುಂದಾಗಿದ್ದ ಎಂದು ತಿಳಿದು ಬಂದಿದೆ. ಅದೇ  ಸಮಯದಲ್ಲಿ ಬಂದ ಬಿಎಂಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಗೆ ಡಿಕ್ಕಿ ಹೊಡೆದಿದೆ. ಈ ಕಾರಣದಿಂದ ಅಪಘಾತ ಸಂಭವಿಸಿ ಬಾಲಕಿ ಮೃತಪಟ್ಟಿದ್ದಾಳೆ.

ಇನ್ನೂ ಮೃತ ಬಾಲಕಿಯ ಮರಣೋತ್ತರ ಪರೀಕ್ಷೆ ಸಹ ನಡೆದಿದ್ದು, ಬಳಿಕ ಕುಟುಂಬಸ್ಥರಿಗೆ ಮೃತ ದೇಹ ಹಸ್ತಾಂತರ ಮಾಡಲಾಗಿದೆ. ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ ಕುಮಾರಸ್ವಾಮಿ ಲೇಔಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದೆ. ಇನ್ನೂ ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಪ್ರಸನ್ನ ರಸ್ತೆಯ ಎಡಬದಿಯಲ್ಲಿ ಬಿದ್ದಿದಾರೆ. ಮೃತ ಪೂರ್ವಿ ಬೈಕ್ ನ ಬಲಬದಿ ಬಿದಿದ್ದಾಳೆ. ಇದೇ ಸಮಯದಲ್ಲಿ ಪೂರ್ವಿ ಮೇಲೆ ಬಿಎಂಟಿಸಿ ಬಸ್ ಹರಿದ ಕಾರಣ ಪುಟಾಣಿ ಮಗು ಮೃತಪಟ್ಟಿದ್ದಾಳೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಚಾಲಕನನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

Most Popular

To Top