ನಂಜನಗೂಡಿನಲ್ಲಿ ಇನ್ಸ್ಟಾಗ್ರಾಂ ಲವ್, ಯುವತಿಯನ್ನು ನೋಡಿದ ಬಳಿಕೆ ಬೇಡಾ ಎಂದ ಯುವಕ, ಸಾಯ್ತಿನಿ ಎಂದ ಆಂಟಿ….!

ಇಂದಿನ ಕಾಲದಲ್ಲಿ ಸೋಷಿಯಲ್ ಮಿಡಿಯಾ ತುಂಬಾನೆ ಪ್ರಮುಖ ಪಾತ್ರ ವಹಿಸುತ್ತಿದೆ. ಸೋಷಿಯಲ್ ಮಿಡಿಯಾ ಬಳಸದಂತಹ ವ್ಯಕ್ತಿಗಳು ತುಂಬಾನೆ ವಿರಳ ಎಂದೇ ಹೇಳಬಹುದು. ಈ ಸೋಷಿಯಲ್ ಮಿಡಿಯಾ ಮೂಲಕ ಕೆಲವೊಂದು ಲವ್ ಸ್ಟೋರಿಗಳೂ ನಡೆದಿದ್ದು, ಕೆಲವು ಸ್ಟೋರಿಗಳು ಸಕ್ಸಸ್ ಆಗಿದ್ದರೇ, ಮತ್ತೆ ಕೆಲವು ಸ್ಟೋರಿಗಳು ಫೈಲ್ ಆಗಿದೆ. ಇದೀಗ ಅಂತಹುದೇ ಘಟನೆಯೊಂದು ನಂಜನಗೂಡಿನಲ್ಲಿ ನಡೆದಿದೆ.

ಕಳೆದ ಒಂದು ವರ್ಷದಿಂದ ಬಿಹಾರ ಮೂಲದ ಅಸಿಬೂರ್‍ ರೆಹಮಾನ್ ಎಂಬಾತ ಇನ್ಸ್ಟಾಗ್ರಾಂ ಮೂಲಕ ನಾಸಿಂ ಬೇಗಂ (31) ಎಂಬ ವಿವಾಹಿತೆಯೊಂದಿಗೆ ಲವ್ ಹುಟ್ಟಿಕೊಂಡಿದೆ. ಅಸಿಬೂರ್‍ ರೆಹಮಾನ್ ಹಿಮ್ಮಾವು ಎಂಬ ಗ್ರಾಮದಲ್ಲಿ ವಾಸವಾಗಿದ್ದಾನೆ. ಏಷಿಯನ್ ಪೈಂಟ್ಸ್ ನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾನೆ. ಅಸಿಬೂರ್‍ ಹಾಗೂ ನಾಸಿಂ ಬೇಗಂ ನಡುವೆ ಇನ್ಸ್ಟಾಗ್ರಾಂ ಮೂಲಕ ಪ್ರೀತಿ ಹುಟ್ಟಿದೆ. ಬಿಹಾರದಿಂದ ನಾಸಿಂ ಬೇಗಂ ಅಸಿಬೂರ್‍ ನನ್ನು ಭೇಟಿಯಾಗಲು ಬಂದಿದ್ದಾಳೆ. ಆಕೆಯನ್ನು ನೋಡಿದ ಕೂಡಲೇ ಆಕೆಯನ್ನು ನಿರಾಕರಿಸಿದ್ದಾನೆ. ವಯಸ್ಸಿನ ಅಂತರ ಹೆಚ್ಚಾದ ಹಿನ್ನೆಲೆಯಲ್ಲಿ ಆತ ಮದುವೆಯಾಗಲು ಒಪ್ಪಿಕೊಂಡಿಲ್ಲ ಎಂದು ಹೇಳಲಾಗಿದೆ.

ಇನ್ನೂ ಯುವಕನ ಹೇಳಿಕೆಯಿಂದ ಕೋಪಗೊಂಡ ಯುವತಿ ಮದುವೆ ಮಾಡಿಕೊಳ್ಳಲೇ ಬೇಕು ಎಂದು ಹೈಡ್ರಾಮಾ ಮಾಡಿದ್ದಾಳೆ. ಜೊತೆಗೆ ನಂಜನಗೂಡಿನ ಖಾಸಗಿ ಹೋಟೆಲ್ ಒಂದರ ಮೇಲೆರಿ ಮದುವೆಯಾಗದೇ ಇದ್ದರೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂಬ ಬೆದರಿಕೆ ಸಹ ಹಾಕಿದ್ದಾಳೆ. ಬಳಿಕ ಆಕೆಯ ಮನವೊಲಿಸಿದ ಪೊಲೀಸರು ಕೆಳಗಿ ಇಳಿಸಿದ್ದಾರೆ. ಈ ಸಂಬಂಧ ನಂಜನಗೂಡು ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಮಹಿಳೆ ಪೊಲೀಸರ ವಶದಲ್ಲಿದ್ದಾಳೆ.