Film News

ಎಲ್ಲರ ಮುಂದೆಯೇ ತಮನ್ನಾ ಕೆನ್ನೆಗೆ ಬಾರಿಸಿದ್ದರಂತೆ ಆ ನಿರ್ದೇಶಕ, ಆಕೆ ಮಾಡಿದ ತಪ್ಪಾದರೂ ಏನು ಗೊತ್ತಾ?

ಗ್ಲಾಮರಸ್ ಡ್ಯಾನ್ಸ್ ಮೂಲಕ ಎರಡು ದಶಕಗಳ ಕಾಲ ಸೌತ್ ಸಿನಿರಂಗವನ್ನು ಆಳಿದಂತಹ ನಟಿ ತಮನ್ನಾ ಭಾಟಿಯಾ ಪ್ರಸಕ್ತ ವರ್ಷದಿಂದ ಭಾರಿ ಸದ್ದು ಮಾಡುತ್ತಿದ್ದಾರೆ. ಒಂದಲ್ಲ ಒಂದು ವಿಚಾರದಿಂದ ಆಕೆ ಸುದ್ದಿಯಾಗುತ್ತಿದ್ದಾರೆ. ಜೊತೆಗೆ ಬಾಲಿವುಡ್ ನಲ್ಲಿ ಎರಡು ವೆಬ್ ಸಿರೀಸ್ ಗಳ ಬಳಿಕವಂತೂ ತುಂಬಾನೆ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಆಕೆಯ ಕೆನ್ನೆಗೆ ನಿರ್ದೇಶಕನೋರ್ವ ಹೊಡೆದಿದ್ದಾರೆ ಎಂಬ ಸುದ್ದಿಯೊಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ.

ಟಾಲಿವುಡ್ ಸಿನೆಮಾಗಳ ಮೂಲಕ ಸ್ಟಾರ್‍ ಡಂ ಗಿಟ್ಟಿಸಿಕೊಂಡ ತಮನ್ನಾ ಸೌತ್ ಸಿನಿರಂಗದಲ್ಲಿ ಬಹುಬೇಡಿಕೆ ಪಡೆದುಕೊಂಡರು. ಇದೀಗ ಬಾಲಿವುಡ್, ಕಾಲಿವುಡ್, ಟಾಲಿವುಡ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸುಮಾರು ಎರಡು ದಶಕಗಳ ಕಾಲ ಸಿನಿರಸಿಕರನ್ನು ರಂಜಿಸುತ್ತಿದ್ದಾರೆ.  ಸೆಕೆಂಡ್ ಇನ್ನಿಂಗ್ಸ್ ನಲ್ಲಿ ರೂಟ್ ಬದಲಿಸಿರುವ ತಮನ್ನಾ ಬೋಲ್ಡ್ ದೃಶ್ಯಗಳಲ್ಲು ಸಹ ನಟಿಸುತ್ತಾ ಸೈ ಎನ್ನಿಸಿದ್ದಾರೆ. ಕೆರಿಯರ್‍ ಆರಂಭದಲ್ಲಿ ಬೋಲ್ಡ್ ದೃಶ್ಯಗಳಿಂದ ದೂರ ಉಳಿದ ತಮನ್ನಾ ಜೀ ಖರ್ದಾ ಹಾಗೂ ಲಸ್ಟ್ ಸ್ಟೋರೀಸ್-2 ವೆಬ್ ಸಿರೀಸ್ ನಲ್ಲಿ ಮೊದಲ ಬಾರಿಗೆ ಬೋಲ್ಡ್ ದೃಶ್ಯಗಳ ಮೂಲಕ ಶಾಕ್ ಕೊಟ್ಟಿದ್ದರು. ಈ ಸಿರೀಸ್ ಬಳಿಕ ಆಕೆ ಮತಷ್ಟು ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಕೆಲವು ತಿಂಗಳುಗಳಿಂದ ತಮನ್ನಾ ಬಗ್ಗೆ ಒಂದಲ್ಲ ಒಂದು ಸುದ್ದಿ ಹರಿದಾಡುತ್ತಲೇ ಇದೆ. ಇದೀಗ ಮತ್ತೊಂದು ಕೇಳಿಬರುತ್ತಿದ್ದು, ಅದು ಸೋಷಿಯಲ್ ಮಿಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ. ಸಿನೆಮಾ ಒಂದರ ಶೂಟಿಂಗ್ ಸಮಯದಲ್ಲಿ ತಮನ್ನಾ ನಿರ್ದೇಶಕರ ನಿರೀಕ್ಷೆಯಂತೆ ನಟನೆ ಮಾಡಿಲ್ಲವಂತೆ ಆಕೆ ತುಂಬಾನೆ ಟೇಕ್ಸ್ ತೆಗೆದುಕೊಂಡಿದ್ದರಂತೆ. ಈ ಕಾರಣದಿಂದ ನಿರ್ದೇಶಕ ಕೋಪಗೊಡು ಆಕೆಯ ಕೆನ್ನೆಗೆ ಬಾರಿಸಿದ್ದರಂತೆ. ಆದರೆ ತಮನ್ನ ಮಾತ್ರ ಏನು ಹೇಳದೇ ಮೌನವಾಗಿದ್ದರಂತೆ. ಆ ನಿರ್ದೇಶಕ ತಮನ್ನಾ ಮಿತ್ರನಾದ ಕಾರಣದಿಂದ ಆಕೆ ಸುಮ್ಮನ್ನಿದ್ದಳಂತೆ. ಆತನೊಂದಿಗೆ ಕೆಲವೊಂದು ಪ್ರಾಜೆಕ್ಟ್ ಗಳನ್ನು ಸಹ ಮಾಡಿದ್ದರಂತೆ. ಆದರೆ ಆ ಸಿನೆಮಾದ ಬಳಿಕ ಆಕೆ ಆತನೊಂದಿಗೆ ಕೆಲಸ ಮಾಡಿಲ್ಲವಂತೆ. ಸದ್ಯ ಈ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಇನ್ನೂ ಸ್ಟಾರ ನಟಿ ತಮನ್ನಾಗೆ ನಿರ್ದೇಶಕ ಹೊಡೆದಿರುವ ಬಗ್ಗೆ ಸುದ್ದಿ ಭಾರಿ ವೈರಲ್ ಆಗುತ್ತಿದ್ದು, ಈ ಬಗ್ಗೆ ಅಧಿಕೃತವಾದ ಮಾಹಿತಿ ಮಾತ್ರವಿಲ್ಲ. ಈ ಸುದ್ದಿಯಲ್ಲಿ ಎಷ್ಟು ಸತ್ಯಾಂಶವಿದೆ ಎಂಬುದನ್ನ ತಮನ್ನಾ ರವರೇ ತಿಳಿಸಬೇಕಿದೆ. ಇನ್ನೂ ತಮನ್ನಾ ಹಾಗೂ ಬಾಲಿವುಡ್ ನಟ ವಿಜಯ್ ವರ್ಮಾ ಕೆಲವು ದಿನಗಳಿಂದ ಡೇಟಿಂಗ್ ಮಾಡುತ್ತಿದ್ದು, ಶೀಘ್ರದಲ್ಲೇ ಈ ಜೋಡಿಯ ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.

Most Popular

To Top