ಚುನಾವಣೆ ಅಂದ್ರೆ ನನಗೆ ಭಯವಿಲ್ಲ ಎಂದ ಗೀತಾ ಶಿವರಾಜ್ ಕುಮಾರ್, ಈ ಭಾರಿ ಗೆಲುವು ಪಕ್ಕಾ ಎಂದ ಅಭ್ಯರ್ಥಿ ಗೀತಾ….!

Follow Us :

ಇನ್ನೇನು ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ 2024 ರ ಮತದಾನ ನಡೆಯಲಿದೆ. ಈ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್‍ ರವರ ಪತ್ನಿ ಗೀತಾ ಶಿವರಾಜ್ ಕುಮಾರ್‍ ಕಾಂಗ್ರೇಸ್ ಪಕ್ಷದಿಂದ ಸ್ಪರ್ಧೆ ಮಾಡಲಿದ್ದಾರೆ. ಈಗಾಗಲೇ ಪ್ರಚಾರಕ್ಕೆ ಭರ್ಜರಿ ಸಿದ್ದತೆ ನಡೆಸಿರುವ ಗೀತಾ ಈ ಬಾರಿ ಗೆಲುವು ಪಕ್ಕಾ, ನನಗೆ ಚುನಾವಣೆ ಅಂದ್ರೆ ಭಯವಿಲ್ಲ ಎಂದಿದ್ದಾರೆ. ಗೀತಾ ಶಿವರಾಜ್ ಕುಮಾರ್‍ ರವರಿಗೆ ಕನ್ನಡ ಸಿನಿರಂಗದ ಹಲವು ನಿರ್ಮಾಪಕರು ಬೆಂಬಲವಾಗಿ ನಿಂತಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದುಕೊಂಡಿರುವ ಗೀತಾ ಶಿವರಾಜ್ ಕುಮಾರ್‍ ಈ ಭಾರಿ ಗೆಲುವು ಸಾಧಿಸಲು ಭರ್ಜರಿ ಸಿದ್ದತೆ ಮಾಡಿಕೊಂಡಿದ್ದಾರೆ.  ಇನ್ನೂ ನಾಗವಾರದಲ್ಲಿರುವ ಶಿವಣ್ಣ ಮನೆಯಲ್ಲಿ ನಿರ್ಮಾಪಕರ ಸಭೆ ನಡೆದಿದ್ದು, ಈ ವೇಳೆ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಗೀತಾರವರನ್ನು ಬೆಂಬಲಿಸುವ ನಿಟ್ಟಿನಲ್ಲಿ ನಿರ್ಮಾಪಕರು ತೆಗೆದುಕೊಂಡ ನಿರ್ಮಾಪಕರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ ಶಿವರಾಜ್ ಕುಮಾರ್‍. ನಾವೆಲ್ಲರೂ ಒಂದೇ ಕುಟುಂಬ ಎಂದು ಅಪ್ಪಾಜಿ ಹೇಳಿದ್ದರು. ನಮಗೆ ನಿರ್ಮಾಪಕರು ತೋರಿದ ಪ್ರೀತಿ ಹೆಮ್ಮೆ ಅನಿಸುತ್ತಿದೆ. ಗೀತಾಗೆ ನಾನು ಹೇಳೋದು ಒಂದೆ ಇಲ್ಲಿ ಅನುಭವ ಮುಖ್ಯವಲ್ಲ, ಅನುಭವಕ್ಕಿಂತ ಹೃದಯ ದೊಡ್ಡದು. ನಾನು ಸದಾ ಗೀತಾ ಜೊತೆಯಲ್ಲಿ ಇರುತ್ತೇನೆ. ಹೆಣ್ಣು ಮಕ್ಕಳೇ ಸ್ಟ್ರಾಮಗ್ ಗುರು ಎಂದು ಶಿವರಾಜ್ ಕುಮಾರ್‍ ಹೇಳಿದ್ದಾರೆ. ರಾಜಕುಮಾರ್‍ ರವರಿಗೂ ಪಾಲಿಟಿಕ್ಸ್ ಬೇಕಾಗಿತ್ತು. ಅವರು ಎಂದೂ ರಾಜಕೀಯ ತಪ್ಪು ಎಂದು ಹೇಳಿಲ್ಲ ಎಂದು ವರನಟ ರಾಜ್ ಕುಮಾರ್‍ ರವರನ್ನು ನೆನಪಿಸಿಕೊಂಡರು.

ಇನ್ನೂ ಇದೇ ಸಮಯದಲ್ಲಿ ಮಾತನಾಡಿದ ಶಿವಮೊಗ್ಗ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್‍ ಮಾತನಾಡಿ, ಶಿವಮೊಗ್ಗದಲ್ಲಿ ಇದು ನನ್ನ ಮೊದಲ ಎಲೆಕ್ಷನ್ ಆಗಿದೆ. ನಾನು ಏನು ಕಲಿತಿದ್ದೇನೋ ಅದನ್ನೇ ಮಧು ಬಂಗಾರಪ್ಪ ಸಹ ಕಲಿತಿದ್ದಾನೆ. ನಾನು ಯಾರಿಗೂ ಹೆದರೊಲ್ಲ, ನನಗೆ ಚುನಾವಣೆ ಅಂದ್ರೆ ಭಯವಿಲ್ಲ. ಚಿತ್ರರಂಗಕ್ಕೆ ನಾನು ಸದಾ ಬೆಂಬಲಿಸುತ್ತೇನೆ. ನಿರ್ಮಾಪಕರ ಬೆಂಬಲದಿಂದ ಹೃದಯ ತುಂಬಿ ಬಂದಿದೆ ಎಂದು ಗೀತಾ ಹೇಳಿದ್ದಾರೆ. ಈ ವೇಳೆ ಕನ್ನಡ ಸಿನಿರಂಗದ ಹಲವು ನಿರ್ಮಾಪಕರು ಹಾಜರಿದ್ದರು.