ಹಾಡಹಗಲೇ ಯುವತಿಯ ಕತ್ತಿಗೆ ಚಾಕು ಇರಿದು ಕೊಲೆ ಮಾಡಿದ ಯುವಕ, ಪ್ರೇಯಸಿಯನ್ನೆ ಭರ್ಬರವಾಗಿ ಕೊಂದ ಪ್ರೇಮಿ…..!

Follow Us :

ಸಮಾಜದಲ್ಲಿ ಪ್ರೀತಿ ಸಿಗದೇ ಅನೇಕರು ಪ್ರಾಣ ಬಿಟ್ಟಿದ್ದಾರೆ, ಪ್ರೀತಿಸಿಲ್ಲ ಎಂದು ಕೊಲೆಗಳನ್ನು ಮಾಡಿದ್ದಾರೆ, ಆದರೆ ಇಲ್ಲೊಬ್ಬ ಪ್ರಿಯಕರ ಮಾತ್ರ ತನ್ನ ಪ್ರೀತಿಸುತ್ತಿರುವ ಪ್ರೇಯಸಿಯ ಕತ್ತಿಗೆ ಚಾಕು ಇರಿದು ಕೊಲೆ ಮಾಡಿದ್ದಾನೆ. ಕತ್ತಿಗೆ ಚಾಕುವಿನಿಂದ ಇರಿದ ಹಿನ್ನೆಲೆಯಲ್ಲಿ ಆಕೆ ರಕ್ತದ ಮಡುವಿನಲ್ಲಿ ಬಿದ್ದು, ಸಾವು ಬದುಕಿನ ನಡುವೆ ಹೋರಾಟ ಮಾಡಿ, ಆಸ್ಪತ್ರೆಯಲ್ಲಿ ಕೊನೆಯುರಿನ್ನೆಳೆದಿದ್ದಾಳೆ. ಅಷ್ಟಕ್ಕೂ ಪ್ರಾಣದಂತೆ ಪ್ರೀತಿಸುತ್ತಿದ್ದ ಯುವತಿಯನ್ನು ಕೊಲೆ ಮಾಡಿದ್ದಾದರೂ ಏಕೆ ಎಂಬ ವಿಚಾರಕ್ಕೆ ಬಂದರೇ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬಲ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಪುತ್ತೂರು ಬಸ್ ನಿಲ್ದಾಣದ ಬಳಿ ಯುವಕ ತನ್ನ ಪ್ರೇಯಸಿಯ ಕತ್ತು ಸೀಳಿ ಎಸ್ಕೇಪ್ ಆಗಿದ್ದ, ಬೈಕ್ ನಲ್ಲಿ ಬಂದು ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದ. ಮೃತ ದುರ್ದೈವಿಯನ್ನು ಬಂಟ್ವಾಳ ತಾಲೂಕಿನ ಅರಿಕೆ ಗ್ರಾಮದ ಗೌರಿ (18) ಎಂದು ಗುರ್ತಿಸಲಾಗಿದೆ. ಕತ್ತು ಸೀಳಿ ಹಲ್ಲೆ ಮಾಡಿದ ಆರೋಪಿಯನ್ನು ಪದ್ಮರಾಜ್ ಎಂದು ಗುರ್ತಿಸಲಾಗಿದೆ. ಬಸ್ ನಿಲ್ದಾಣದ ಬಳಿ ಗೌರಿ ಹಾಗೂ ಪದ್ಮರಾಜ್ ನಡುವೆ ಗಲಾಟೆಯಾಗಿದೆ. ಈ ವೇಳೆ ಆಕೆ ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದ್ದಳಂತೆ. ಇದರಿಂದ ಸಿಟ್ಟಗೆದ್ದ ಯುವಕ ಬೈಕ್ ನಲ್ಲಿ ಬಂದು ಚಾಕು ಇರಿದು ಪರಾರಿಯಾಗಿದ್ದಾನೆ. ಇನ್ನೂ ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದಿದ್ದ ಗೌರಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.

ಇನ್ನೂ ಮೃತ ಗೌರಿ ಪುತ್ತೂರಿನ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸುಮಾರು ದಿನಗಳಿಂದ ಗೌರಿ ಹಾಗೂ ಪದ್ಮರಾಜ್ ಪ್ರೀತಿಸಿಕೊಳ್ಳುತ್ತಿದ್ದರಂತೆ. ಆದರೆ ಅವರಿಬ್ಬರ ನಡುವೆ ಯಾವುದೋ ಒಂದು ವಿಚಾರಕ್ಕೆ ಅನೇಕ ಬಾರಿ ಗಲಾಟೆ ಸಹ ನಡೆದಿದ್ದಂತೆ. ಜೊತೆಗೆ ವಿಟ್ಲ ಪೊಲೀಸ್ ಠಾಣೆಯ ವರೆಗೂ ಈ ಗಲಾಟೆ ಹೋಗಿತ್ತಂತೆ. ಇದೀಗ ಗೌರಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದು, ಆರೋಪಿ ಪದ್ಮರಾಜ್ ನನ್ನು ವಶಕ್ಕೆ ಪಡೆದ ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.