Film News

ಹೊಸ ವರ್ಷ ಆಚರಣೆಗೆ ಮಾಲ್ಡೀವ್ಸ್ ಗೆ ಹೊರಟ ವಿಜಯ್ ದೇವರಕೊಂಡ ಅಂಡ್ ರಷ್ಮಿಕಾ?

ಒಂದಲ್ಲ ಒಂದು ವಿಚಾರಕ್ಕೆ ಸದಾ ಸುದ್ದಿಯಲ್ಲಿರುವ ನಟಿಯೆಂದರೇ ನ್ಯಾಷನಲ್ ಕ್ರಷ್ ರಶ್ಮಿಕಾ ಎಂದು ಹೇಳಬಹುದು. ಆಕೆ ಏನೆ ಮಾಡಿದರೂ ಸಹ ಕ್ಷಣದಲ್ಲೇ ವೈರಲ್ ಆಗುತ್ತಿರುತ್ತದೆ. ಆಕೆ ಸೋಷಿಯಲ್ ಮಿಡಿಯಾದಲ್ಲಿ ಗ್ಲಾಮರಸ್ ಪೊಟೋಗಳ ಮೂಲಕ ಎಲ್ಲರನ್ನೂ ರಂಜಿಸುತ್ತಿರುತ್ತಾರೆ. ತೆಲುಗು ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ನಡುವೆ ಪ್ರೇಮ ಪಯಣ ನಡೆಯುತ್ತಿದೆ ಎಂಬ ರೂಮರ್‍ ಗಳು ಹರಿದಾಡುತ್ತಲೇ ಇದೇ, ಇದೀಗ ಅವರು ಹೊಸ ವರ್ಷದ ಆಚರಣೆಗೆ ಮಾಲ್ಡೀವ್ಸ್ ಗೆ ಹೊರಟಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದೆ.

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ರವರ ಪ್ರೇಮ ಕಥೆ ಆಗಾಗ ಕೇಳಿಬರುತ್ತಲೇ ಇರುತ್ತದೆ. ಸುಮಾರು ದಿನಗಳಿಂದ ಈ ಜೋಡಿಯ ಬಗ್ಗೆ ವಿವಿಧ ರೀತಿಯ ರೂಮರ್‍ ಗಳು ಕೇಳಿಬರುತ್ತಲೇ ಇರುತ್ತದೆ. ರೂಮರ್‍ ಗಳು ಜೋರಾದ ಸಮಯದಲ್ಲಿ ಅವರು ನಮ್ಮ ಮಧ್ಯೆ ಅಂತಹ ಯಾವುದೇ ಸಂಬಂಧವಿಲ್ಲ. ನಾವಿಬ್ಬರೂ ಒಳ್ಳೆಯ ಸ್ನೇಹಿತರು ಎಂದು ಹೇಳಿದ್ದರು. ಆದರೂ ಸಹ ಅವರ ಬಗೆಗಿನ ರೂಮರ್‍ ಗಳು ಮಾತ್ರ ನಿಂತಿಲ್ಲ. ಇದೀಗ ಇಬ್ಬರೂ ಹೊಸ ವರ್ಷದ ಆಚರಣೆಗೆ ಮಾಲ್ಡೀವ್ಸ್ ಗೆ ಹಾರಿದ್ದಾರೆ ಎನ್ನಲಾಗುತ್ತಿದೆ. ಈ ಕಾರಣದಿಂದಾಗಿ ಅವರಿಬ್ಬರ ನಡುವಣ ಸಂಬಂಧದ ಬಗ್ಗೆ ಮತಷ್ಟು ಸುದ್ದಿ ಹರಿದಾಡಲು ಶುರುವಾಗಿದೆ.

ಇನ್ನೂ ಹೊಸ ವರ್ಷದ ಆಚರಣೆಯ ಸಂಬಂಧ ಅನೇಕ ಸಿನೆಮಾ ಸೆಲೆಬ್ರೆಟಿಗಳು ತಮ್ಮ ಅಭಿಮಾನಿಗಳಿಗೆ ಸೋಷಿಯಲ್ ಮಿಡಿಯಾ ಮೂಲಕ ಶುಭಾಶಯಗಳನ್ನು ಕೋರುತ್ತಿದ್ದಾರೆ. ಈ ಹಾದಿಯಲ್ಲೇ ರೌಡಿ ಹಿರೋ ಖ್ಯಾತಿಯ ವಿಜಯ್ ದೇವರಕೊಂಡ ಸಹ ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ನ್ಯೂ ಇಯರ್‍, ನ್ಯೂ ಮಂತ್, ನ್ಯೂ ಡೇ ಆಡಿಯನ್ಸ್ ಎಂದು ಎಲ್ಲರಿಗೂ ಹೊಸ ವರ್ಷದ ಶುಭಾಶಯ ಎಂದು ಪೋಸ್ಟ್ ಮಾಡಿದ್ದಾರೆ. ಅದರಂತೆ ನಟಿ ರಶ್ಮಿಕಾ ಸಹ ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ. ಹಲೋ 2023 ಎಂದು ಒಂದು ಪೊಟೋ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಏನಿದೆ ಅನುಮಾನ ಹುಟ್ಟುವಂತಹುದು ಎಂದುಕೊಳ್ಳಬಹುದು. ವಿಜಯ್ ದೇವರಕೊಂಡ ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ರಶ್ಮಿಕಾ ಸಹ ಪೋಸ್ಟ್ ಮಾಡಿದ್ದಾರೆ. ಈ ಕಾರಣದಿಂದ ಅವರಿಬ್ಬರೂ ಒಟ್ಟಿಗೆ ಇದ್ದಾರೆಯೇ ಎಂಬ ಅನುಮಾನಗಳನ್ನು ನೆಟ್ಟಿಗರು ವ್ಯಕ್ತಪಡಿಸುತ್ತಿದ್ದಾರೆ.

ಇನ್ನೂ ಇಬ್ಬರೂ ತಾವಿರುವ ಸ್ಥಳದ ಬಗ್ಗೆ ಮಾಹಿತಿ ಹಂಚಿಕೊಳ್ಳದ ಕಾರಣದಿಂದ ಹಾಗೂ ಯಾವುದೇ ರೀತಿಯಲ್ಲಿ ಆಚರಣೆಯ ಪೊಟೋಗಳು ಇಲ್ಲದ ಕಾರಣದ ಅಭಿಮಾನಿಗಳ ಅನುಮಾನ ಮತಷ್ಟು ಹೆಚ್ಚಾಗುತ್ತಿದೆ. ಇನ್ನೂ ವಿಜಯ್ ಹಂಚಿಕೊಂಡ ಪೊಟೋ ನೋಡಿದರೇ ಅದು ಸಮುದ್ರ ತೀರದಲ್ಲಿನ ಸ್ವಿಮ್ಮಿಂಗ್ ಪೂಲ್ ಎಂದು ಅರ್ಥವಾಗುತ್ತಿದೆ. ರಶ್ಮಿಕಾ ಸಹ ಒಂದು ರೆಸಾರ್ಟ್ ಬಳಿ ಕಾಣಿಸಿಕೊಂಡಿದ್ದಾರೆ. ಈ ಕಾರಣದಿಂದ ಇಬ್ಬರೂ ಒಂದೇ ಕಡೆ ಇದ್ದಾರೆ. ಅವರು ಇರುವಂತಹ ಪೊಟೋಗಳನ್ನು ಗಮನಿಸಿದರೇ ಅವರು ಮಾಲ್ಡೀವ್ಸ್ ನಲ್ಲಿ ಇರಬಹುದು ಎಂದು ಸಿನಿವಲಯದಲ್ಲಿ ಗುಸು ಗುಸು ಮಾತುಗಳು ಕೇಳಿಬರುತ್ತಿದೆ. ಈ ಬಗ್ಗೆ ರಶ್ಮಿಕಾ ಅಥವಾ ವಿಜಯ್ ದೇವರಕೊಂಡ ಸ್ಪಷ್ಟನೆ ನೀಡಬೇಕಿದೆ.

Most Popular

To Top