Film News

ಇಂಟರ್ ನೆಟ್ ಶೇಕ್ ಆಗುವಂತೆ ಬೋಲ್ಡ್ ಪೋಸ್ ಕೊಟ್ಟ ಕೃತಿ ಸನನ್, ವೈರಲ್ ಆದ ಪೊಟೋಸ್….!

ಬಾಲಿವುಡ್ ಸಿನಿರಂಗದಲ್ಲಿ ಗ್ಲಾಮರ್‍ ಶೋ ಕೊಂಚ ಓವರ್‍ ಆಗಿಯೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಬಾಲಿವುಡ್ ನಲ್ಲಿ ಅನೇಕ ನಟಿಯರು ವಯಸ್ಸಾದರೂ ಸಹ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಾ ಸಾಗುತ್ತಿದ್ದಾರೆ. ಇದೇ ಟ್ರೆಂಡ್ ಸಿನಿರಂಗದ ಯಂಗ್ ಬ್ಯೂಟಿಯರೂ ಸಹ ಫಾಲೋ ಮಾಡುತ್ತಿದ್ದಾರೆ. ಇದೀಗ ಬಾಲಿವುಡ್ ಯಂಗ್ ಬ್ಯೂಟಿ ಕೃತಿ ಸನನ್ ಸಹ ಸೋಷಿಯಲ್ ಮಿಡಿಯಾದಲ್ಲಿ ಸದಾ ನೆವರ್‍ ಬಿಪೋರ್‍ ಎಂಬಂತೆ ಹಾಟ್ ಅಂಡ್ ಬೋಲ್ಡ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿರುತ್ತಾರೆ. ಇದೀಗ ಇಂಟರ್‍ ನೆಟ್ ಶೇಕ್ ಆಗುವಂತಹ ಪೊಟೋಗಳನ್ನು ಹಂಚಿಕೊಂಡಿದ್ದಾರೆ.

ಬಾಲಿವುಡ್ ನ ಸ್ಟಾರ್‍ ನಟಿ ಕೃತಿ ಸನನ್ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ನೇನೊಕ್ಕಡೇ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಕಡಿಮೆ ಸಮಯದಲ್ಲೆ ಸ್ಟಾರ್‍ ನಟಿಯಾಗಿ ಕ್ರೇಜ್ ಪಡೆದುಕೊಂಡರು. ತೆಲುಗಿನಲ್ಲಿ ಸಕ್ಸಸ್ ಕಾಣದ ಕೃತಿಗೆ ಬಾಲಿವುಡ್ ನಲ್ಲಿ ಸಾಲು ಸಾಲು ಸಕ್ಸಸ್ ಬಂದವು. ಇದೀಗ ಆಕೆ ಬಾಲಿವುಡ್ ನಲ್ಲಿ ಕ್ರೇಜಿ ಹಿರೋಯಿನ್ ಗಳ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ. ಸದ್ಯ ಬಾಲಿವುಡ್ ನಲ್ಲಿ ಸ್ಟಾರ್‍ ನಟಿಯರ ಪಟ್ಟಿಯಲ್ಲಿದ್ದಾರೆ. ಕಳೆದ ವರ್ಷ ನಟಿ ಕೃತಿ ಸನನ್ ಬಾಹುಬಲಿ ಪ್ರಭಾಸ್ ಜೊತೆಗೆ ಆದಿಪುರುಷ್ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾದ ಮೇಲೆ ತುಂಬಾನೆ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿತ್ತು. ಆದರೆ ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು. ಜೊತೆಗೆ ಅನೇಕ ವಿವಾದಗಳಿಗೂ ಗುರಿಯಾಗಿತ್ತು. ಈ ಸಿನೆಮಾದಲ್ಲಿ ಕೃತಿ ಸೀತಾ ದೇವಿಯ ಪಾತ್ರದಲ್ಲಿ ನಟಿಸಿದ್ದರು.

ಸದ್ಯ ಕೃತಿ ಸನನ್ ಕ್ರೂ ಎಂಬ ಲೇಡಿ ಮಲ್ಟಿಸ್ಟಾರರ್‍ ಸಿನೆಮಾದಲ್ಲಿ ನಟಿಸಿದ್ದಾರೆ. ಈ ಸಿನೆಮಾದಲ್ಲಿ ಕೃತಿ ಸನನ್ ಜೊತೆಗೆ ಟಬು, ಕರೀನಾ ಕಫೂರ್‍ ಸಹ ನಟಿಸಿದ್ದಾರೆ. ಈ ಸಿನೆಮಾ ಮಾ.29 ರಂದು ಅದ್ದೂರಿಯಾಗಿ ತೆರೆಕಂಡಿದ್ದು, ಪಾಸಿಟೀವ್ ಟಾಕ್ ಸ್ವಂತ ಮಾಡಿಕೊಂಡಿದೆ. ಸೀನೀಯರ್‍ ನಟಿಯರಾದ ಟಬು ಹಾಗೂ ಕರೀನಾ ಕಪೂರ್‍ ಸಹ ಈ ಸಿನೆಮಾದಲ್ಲಿ ನಟಿಸಿದ ಹಿನ್ನೆಲೆಯಲ್ಲಿ ಮತಷ್ಟು ಗ್ಲಾಮರ್‍ ಈ ಸಿನೆಮಾದಲ್ಲಿ ಸೇರಿದೆ ಎನ್ನಲಾಗುತ್ತಿದೆ. ಜೊತೆಗೆ ಈ ಸಿನೆಮಾದ ಕಥೆ ಸಹ ತುಂಬಾ ಚೆನ್ನಾಗಿದೆ ಎಂದು ಒಳ್ಳೆಯ ರೆಸ್ಪಾನ್ಸ್ ಬರುತ್ತಿದೆ. ಇನ್ನೂ ಈ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳೂ ಸಹ ಭರದಿಂದ ಸಾಗುತ್ತಿದ್ದು, ಪ್ರಮೋಷನ್ ನಿಮಿತ್ತ ಕೃತಿ ಸನನ್ ಗ್ಲಾಮರಸ್ ಆಗಿ ಪೋಸ್ ಕೊಟ್ಟಿದ್ದಾರೆ.

ನಟಿ ಕೃತಿ ಸನನ್ ತಮ್ಮ ಕ್ರೂ ಸಿನೆಮಾದ ಪ್ರಚಾರಕ್ಕಾಗಿ ಪಿಂಕ್ ಡ್ರೆಸ್ ನಲ್ಲಿ ನೆವರ್‍ ಬಿಪೋರ್‍ ಎಂಬಂತೆ ಸಖತ್ ಹಾಟ್ ಆಗಿ ಪೋಸ್ ಕೊಟ್ಟಿದ್ದಾರೆ. ಬ್ರಾ ಮಾದರಿಯಲ್ಲಿರುವ ಟಾಪ್ ಧರಿಸಿ ಎದೆಯ ಸೌಂದರ್ಯದ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. ಜೊತೆಗೆ ಮಾದಕ ನೋಟ ಬೀರುತ್ತಾ ನೆಟ್ಟಿಗರನ್ನು ಮಸ್ಮರೈಜ್ ಮಾಡಿದ್ದಾರೆ. ಸದ್ಯ ಆಕೆಯ ಈ ಪೊಟೋಗಳು ಇಂಟರ್‍ ನೆಟ್ ನಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

Most Popular

To Top