ಮುಟ್ಟಿನ ನೋವಿಗೆ ಹೆದರಿ ಆತ್ಮಹತ್ಯೆಗೆ ಶರಣಾದ 14 ವರ್ಷದ ಬಾಲಕಿ….!

Follow Us :

ಮೊದಲ ಮುಟ್ಟಿನ ನೋವಿಗೆ ಹೆದರಿದಿ 14 ವರ್ಷದ ಬಾಲಕಿಯೊಬ್ಬಳು ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಲೆ. ಮುಂಬೈನ ಮಲಾಡ್ ನಲ್ಲಿ ಈ ಘಟನೆ ನಡೆದಿದ್ದು, ಋತುಚಕ್ರದ ಕುರಿತು ಬಾಲಕಿಗೆ ಯಾವುದೇ ರೀತಿಯ ಮಾಹಿತಿ ಇಲ್ಲದ ಕಾರಣ ಆಕೆ ಸಾವಿಗೆ ಶರಣಾಗಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ ಎನ್ನಲಾಗಿದೆ.

ಮುಂಬೈನ ಮಲಾಡ್ ನಲ್ಲಿ 14 ವರ್ಷದ ಬಾಲಕಿಯೊಬ್ಬಳು ಮೊದಲ ಬಾರಿ ಮುಟ್ಟಾಗಿದ್ದಾಳೆ. ಮೊದಲ ಬಾರಿಗೆ ಋತುಸ್ರಾವವಾದಾಗ ನೋವಿನ ಬಗ್ಗೆ ಕುಟುಂಬದ ಸದಸ್ಯರಿಗೆ ತಿಳಿಸಿದ್ದಾಳೆ. ನೋವಿನ ಜೊತೆಗೆ ಮಾನಸಿಕ ಒತ್ತಡಕ್ಕೂ ಬಾಲಕಿ ಗುರಿಯಾಗಿದ್ದಾಳೆ. ಇನ್ನೂ ನೋವನ್ನು ತಡೆಯಲಾರದ ಬಾಲಕಿ ಮನೆಯ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿ ನೇಣು ಬಿಗಿದುಕೊಂಡ ಸುದ್ದಿ ತಿಳಿಯುತ್ತಿದ್ದಂತೆ ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಮಗು ಅಷ್ಟೊತ್ತಿಗೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.

ಇನ್ನೂ ಬಾಲಕಿಯ ಮೃತದೇಹಕ್ಕೆ ಮರಣೋತ್ತರ ಪರೀಕ್ಷೆ ಸಹ ನಡೆಸಲಾಗಿದ್ದು, ಯಾವುದೇ ದುಷ್ಕೃತ್ಯಗಳು ಕಂಡುಬಂದಿಲ್ಲ. ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಇನ್ನೂ ಬಾಲಕಿಯ ಕುಟುಂಬಸ್ಥರು, ಬಾಲಕೀಯ ಸ್ನೇಹಿತರ ಹೇಳಿಕೆಗಳನ್ನು ಸಂಗ್ರಹಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.