ಸ್ಟಾರ್ ನಟಿ ಕತ್ರಿನಾ ಕೈಫ್ ಗರ್ಭಿಣಿಯಂತೆ, ಮತ್ತೊಮ್ಮೆ ಮುನ್ನೆಲೆಗೆ ಬಂದ ರೂಮರ್….!

Follow Us :

ಸುಮಾರು ವರ್ಷಗಳ ಕಾಲ ಪ್ರೇಮ ಪಯಣ ಸಾಗಿಸಿ ಮದುವೆಯೆಂಬ ಬಂಧನಕ್ಕೆ ಒಳಗಾದ ಜೋಡಿಗಳಲ್ಲಿ ಕತ್ರಿನಾ ಹಾಗೂ ವಿಕ್ಕಿ ಜೋಡಿ ಸಹ ಒಂದಾಗಿದೆ. ಸದ್ಯ ಈ ಜೋಡಿ ಮದುವೆಯಾದ ಬಳಿಕ ಪುಲ್ ಎಂಜಾಯ್ ಮಾಡುತ್ತಿದ್ದಾರೆ. ಸಿನೆಮಾಗಳಲ್ಲಿ ಬಿಡುವು ಸಿಕ್ಕರೇ ಸಾಕು ದೇಶ ವಿದೇಶಗಳಿಗೆ ಟೂರ್‍ ಪ್ಲಾನ್ ಮಾಡುತ್ತಿರುತ್ತಾರೆ. ಇದೀಗ ಕತ್ರಿನಾ ಗರ್ಭಿಣಿಯಾದರು ಎಂಬ ಸುದ್ದಿ ವೈರಲ್ ಆಗುತ್ತಿದ್ದು, ಇದೀಗ ಮತ್ತೊಮ್ಮೆ ಕತ್ರಿನಾ ಕೈಫ್ ಗರ್ಭಿಣಿಯಾಗಿದ್ದಾರೆಂಬ ಸುದ್ದಿಯೊಂದು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.

ಬಾಲಿವುಡ್ ನ ಕ್ಯೂಟ್ ಕಪಲ್ ಎಂದು ಕರೆಯಲಾಗುವ ಕತ್ರಿಕಾ ಕೈಫ್ ಹಾಗೂ ವಿಕ್ಕಿ ಸಿನೆಮಾಗಳ ಜೊತೆ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲೂ ಸಹ ಸಕ್ರಿಯರಾಗಿರುತ್ತಾರೆ. ಕಳೆದ 2021 ರ ಡಿಸೆಂಬರ್‍ ಮಾಹೆಯಲ್ಲಿ ರಾಜಸ್ಥಾನದ ಮಾಧೌಪುರ್‍ ಸಿಕ್ಸ್ ಸೆನ್ಸಸ್ ಕೋಟೆಯಲ್ಲಿ ಅದ್ದೂರಿಯಾಗಿ ನಡೆಯಿತು. ಇದೀಗ ಕತ್ರಿನಾ ಕೈಫ್ ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಈ ಹಿಂದೆ ಸಹ ಅನೇಕ ಬಾರಿ ಇಂತಹುದೇ ರೂಮರ್‍ ಹರಿದಾಡಿತ್ತು. ಇದೀಗ ಮತ್ತೊಮ್ಮೆ ಕತ್ರಿನಾ ಗರ್ಭಿಣಿಯಾಗಿದ್ದಾರೆಂಬ ಸುದ್ದಿ ಮುನ್ನೆಲೆಗೆ ಬಂದಿದೆ. ಅದಕ್ಕೆ ಆಕೆಯ ಲೇಟೆಸ್ಟ್ ಲುಕ್ ಕಾರಣ ಎಂದು ಹೇಳಲಾಗುತ್ತಿದೆ. ಸಲ್ಮಾನ್ ಖಾನ್ ತಂಗಿ ಅರ್ಷಿತಾ ಖಾನ್ ಮುಂಬೈನಲ್ಲಿ ಅದ್ದೂರಿಯಾಗಿ ರಂಜಾನ್ ಪಾರ್ಟಿಯನ್ನು ಏರ್ಪಡಿಸಿದ್ದರು. ಈ ಪಾರ್ಟಿಗೆ ಕತ್ರಿನಾ ಸಹ ಹಾಜರಾಗಿದ್ದರು. ಈ ವೇಳೆ ಆಕೆ ಅನಾರ್ಕಲಿ ಡಿಸೈನರ್‍ ಡ್ರೆಸ್ ನಲ್ಲಿ ಸುಂದರವಾಗಿ ಕಾಣಿಸಿಕೊಂಡರು.

ಇನ್ನೂ ಕತ್ರಿನಾ ಈ ಡ್ರೆಸ್ ನಲ್ಲಿ ಕೊಂಚ ದಪ್ಪವಾಗಿದ್ದು, ಸುಂದರವಾಗಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅನೇಕರು ಆಕೆ ಗರ್ಭಿಣಿಯಾಗಿರಬಹುದೆಂದು ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಈ ಕಾಮೆಂಟ್ಸ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಸಹ ಆಗುತ್ತಿವೆ. ಇನ್ನೂ ಈ ಬಗ್ಗೆ ಕತ್ರಿನಾ ಕೈಫ್ ರವರೇ ಸ್ಪಷ್ಟನೆ ನೀಡಬೇಕಿದೆ. ಇನ್ನೂ ಇದೇ ರೀತಿಯಲ್ಲಿ ಅನೇಕ ಬಾರಿ ಕತ್ರಿನಾ ಕೈಫ್ ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿಗಳು ಕೇಳಿಬಂದವು. ಬಳಿಕ ಅದೆಲ್ಲವೂ ರೂಮರ್‍ ಗಳು ಮಾತ್ರ ಎಂದು ತಿಳಿದುಬಂತು. ಇದೀಗ ಹರಿದಾಡುತ್ತಿರುವ ಸುದ್ದಿ ಸಹ ಕೇವಲ ರೂಮರ್‍ ಆಗಿದೆಯಾ ಅಥವಾ ನಿಜವೇ ಎಂಬುದನ್ನು ಕತ್ರಿನಾ ಕೈಫ್ ಅಥವಾ ಅವರ ಟೀಂ ಸ್ಪಷ್ಟನೆ ನೀಡಬೇಕು ಇಲ್ಲಾ ಮತಷ್ಟು ದಿನಗಳ ಕಾಯಬೇಕು ಎಂದು ಹೇಳಲಾಗುತ್ತಿದೆ.

ಇನ್ನೂ ಬಾಲಿವುಡ್ ಸಿನಿರಂಗದಲ್ಲಿ ಸುಮಾರು ದಶಕಗಳಿಂದ ಕತ್ರಿನಾ ಸ್ಟಾರ್‍ ನಟಿಯಾಗಿ ಕೆರಿಯರ್‍ ಸಾಗಿಸುತ್ತಿದ್ದಾರೆ. ಮದುವೆಯಾದರೂ ಸಹ ಆಕೆ ಭಾರಿ ಆಫರ್‍ ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ತೆಲುಗಿನಲ್ಲೂ ಸಹ ಕತ್ರಿನಾ ಎರಡು ಸಿನೆಮಾಗಳನ್ನು ಮಾಡಿದ್ದಾರೆ. ತೆಲುಗಿನಲ್ಲಿ ಬಾಲಕೃಷ್ಣ ಜೊತೆಗೆ ಅಲ್ಲರಿಪಿಡುಗು ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾ ಆಕೆಗೆ ನಿರಾಸೆಯನ್ನು ಉಳಿಸಿತು. ಬಳಿಕ ವೆಂಕಟೇಶ್ ಜೊತೆಗೆ ಮಲ್ಲೇಶ್ವರಿ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಈ ಸಿನೆಮಾ ಒಳ್ಳೆಯ ಸಕ್ಸಸ್ ಕೊಟ್ಟಿದೆ. ಆದರೆ ಕತ್ರಿನಾ ಬಾಲಿವುಡ್ ಸಿನೆಮಾಗಳಲ್ಲೇ ಬ್ಯುಸಿಯಾಗಿದ್ದಾರೆ. ಸದ್ಯ ಆಕೆ ಮೆರಿ ಕ್ರಿಸ್ ಮಸ್, ಟೈಗರ್‍-3 ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ.