ತಾಯಿಯಂತೆ ಜಲಕನ್ಯೆಯಾಗಿ ಕಾಣಿಸಿಕೊಂಡ ಜಾನ್ವಿ ಕಪೂರ್, ವೈರಲ್ ಆದ ಪೊಟೋಸ್….!

ದೇಶದ ಸಿನಿರಂಗದಲ್ಲಿ ಅತಿಲೋಕ ಸುಂದರಿಯೆಂದೇ ಖ್ಯಾತಿ ಪಡೆದುಕೊಂಡ ದಿವಂಗತ ಶ್ರೀದೇವಿ ದೊಡ್ಡ ಮಟ್ಟದ ಅಭಿಮಾನಿಗಳನ್ನು ಪಡೆದುಕೊಂಡಿದ್ದರು. ಆಕೆ ತೆಲುಗಿನಲ್ಲಿ ಸಾಹಸ ವೀರುಡು ಸಾಗರ ಕನ್ಯೆ ಎಂಬ ಸಿನೆಮಾದಲ್ಲಿ ಜಲಕನ್ಯೆಯಾಗಿ ನಟಿಸಿದ್ದರು. ಇದೀಗ ಆಕೆಯ ಪುತ್ರಿ…

ದೇಶದ ಸಿನಿರಂಗದಲ್ಲಿ ಅತಿಲೋಕ ಸುಂದರಿಯೆಂದೇ ಖ್ಯಾತಿ ಪಡೆದುಕೊಂಡ ದಿವಂಗತ ಶ್ರೀದೇವಿ ದೊಡ್ಡ ಮಟ್ಟದ ಅಭಿಮಾನಿಗಳನ್ನು ಪಡೆದುಕೊಂಡಿದ್ದರು. ಆಕೆ ತೆಲುಗಿನಲ್ಲಿ ಸಾಹಸ ವೀರುಡು ಸಾಗರ ಕನ್ಯೆ ಎಂಬ ಸಿನೆಮಾದಲ್ಲಿ ಜಲಕನ್ಯೆಯಾಗಿ ನಟಿಸಿದ್ದರು. ಇದೀಗ ಆಕೆಯ ಪುತ್ರಿ ಜಾನ್ವಿ ಕಪೂರ್‍ ಸಹ ಜಲಕನ್ಯೆಯಂತೆ ವಿಭಿನ್ನ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಯಂಗ್ ಬ್ಯೂಟಿ ಜಾನ್ವಿ ಕಪೂರ್‍ ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ಇದೀಗ ಜಲಕನ್ಯೆಯಂತೆ ಪೋಸ್ ಕೊಟ್ಟಿದ್ದು, ಪೊಟೋಗಳು ವೈರಲ್ ಆಗುತ್ತಿವೆ.

ಬಾಲಿವುಡ್ ಯಂಗ್ ಬ್ಯೂಟಿ ಜಾನ್ವಿ ಕಪೂರ್‍ ಸದ್ಯ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೂನಿಯರ್‍ ಎನ್.ಟಿ.ಆರ್‍ ರವರ ದೇವರ ಸಿನೆಮಾದ ಮೂಲಕ ಸೌತ್ ಸಿನಿರಂಗಕ್ಕೆ ಎಂಟ್ರಿ ಕೊಡಲಿದ್ದಾರೆ.  ಕೊರಟಾಲ ಶಿವ ಹಾಗೂ ಜೂನಿಯರ್‍ ಎನ್.ಟಿ.ಆರ್‍ ರವರ ಕಾಂಬಿನೇಷನ್ ನಲ್ಲಿ ಸೆಟ್ಟೇರಿರುವ ಈ ಸಿನೆಮಾದಲ್ಲಿ ಜಾನ್ವಿ ಕಪೂರ್‍ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನೆಮಾದ ಮೇಲೆ ಜಾನ್ವಿ ಕಪೂರ್‍ ಸಹ ಭಾರಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಸೌತ್ ನಲ್ಲಿ ಸಿನೆಮಾಗಳಲ್ಲಿ ಕಾಣಿಸಿಕೊಳ್ಳುವುದಕ್ಕೂ ಮುಂಚೆಯೇ ಆಕೆ ಸೌತ್ ನಲ್ಲಿ ಭಾರಿ ಫ್ಯಾನ್ ಫಾಲೋಯಿಂಗ್ ಪಡೆದುಕೊಂಡಿದ್ದರು. ಈ ಹಿಂದೆ ಸೀನಿಯರ್‍ ಎನ್.ಟಿ.ಆರ್‍ ಹಾಗೂ ಶ್ರೀದೇವಿ ಅನೇಕ ಸಿನೆಮಾಗಳ ಮೂಲಕ ಸೌತ್ ಪ್ರೇಕ್ಷಕರನ್ನು ರಂಜಿಸಿದ್ದರು. ಇದೀಗ ಜಾನ್ವಿ ಕಪೂರ್‍ ಹಾಗೂ ಜೂನಿಯರ್‍ ಎನ್.ಟಿ.ಆರ್‍ ಸಹ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಸಿನೆಮಾದ ಮೇಲೆ ಭಾರಿ ನಿರೀಕ್ಷೆ ಸಹ ಮೂಡಿದೆ.

ಇನ್ನೂ ಜಾನ್ವಿ ಕಪೂರ್‍ ಸಿನೆಮಾಗಳಿಗಿಂತ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಕ್ರೇಜ್ ಪಡೆದುಕೊಂಡಿದ್ದಾರೆ ಎಂದರೇ ತಪ್ಪಾಗಲಾರದು. ಸೋಷಿಯಲ್ ಮಿಡಿಯಾದಲ್ಲಿ ಆಕೆ ಪೊಟೋಗಳಿಗಾಗಿ ಅಭಿಮಾನಿಗಳು ಕಾಯುತ್ತಿರುತ್ತಾರೆ. ಇದೀಗ ಜಾನ್ವಿ ಕಪೂರ್‍ ಜಲಕನ್ಯೆಯಂತೆ ಹಾಟ್ ಪೋಸ್ ಕೊಟ್ಟಿದ್ದಾರೆ. ವಿಭಿನ್ನವಾದ ಕಾಸ್ಟ್ಯೂಮ್ಸ್ ಮೂಲಕ ಸೋಂಟ ಹಾಗೂ ಎದೆಯ ಸೌಂದರ್ಯ ಪ್ರದರ್ಶನ ಮಾಡಿದ್ದಾರೆ. ಇನ್ನೂ ಆಕೆಯ ಹಾಟ್ ಪೊಟೋಗಳಿಗೆ ಫಿದಾ ಆದ ಅನೇಕರು ನಿದ್ದೆಗೆಡಿಸಿಕೊಂಡಿದ್ದಾರೆ. ವಿಭಿನ್ನ ಲುಕ್ಸ್ ನಲ್ಲಿರುವ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಪ್ರಮೋಷನ್ ಒಂದರ ನಿಮಿತ್ತ ಜಾನ್ವಿ ಕಪೂರ್‍ ಈ ಜಲಕನ್ಯೆಯ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನೂ ಜಾನ್ವಿ ಕಪೂರ್‍ ಮೊದಲ ಬಾರಿಗೆ ಸೌತ್ ನಲ್ಲಿ ದೇವರ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾ ಪ್ಯಾನ್ ಇಂಡಿಯಾ ಸಿನೆಮಾ ಆದ ಹಿನ್ನೆಲೆಯಲ್ಲಿ ಸಿನೆಮಾ ಬಿಡುಗಡೆ ತಡವಾಗಲಿದೆ. ಇನ್ನೂ ಸಿನೆಮಾದ ಶೂಟಿಂಗ್ ಸಹ ಭರದಿಂದ ಸಾಗುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೆ ಸಿನೆಮಾದ ಟೈಟಲ್ ಪೋಸ್ಟರ್‍ ಸಹ ಬಿಡುಗಡೆಯಾಗಿತ್ತು. ಈ ಪೋಸ್ಟರ್‍ ರಿಲೀಸ್ ಆದ ಬಳಿಕ ಸಿನೆಮಾದ ಮೇಲಿನ ನಿರೀಕ್ಷೆ ಡಬಲ್ ಆಗಿದೆ.