Film News

ವಿಮಾನಂ ಸಿನೆಮಾದಲ್ಲಿ ಅನಸೂಯದ್ದು ವೇಶ್ಯೆಯ ಪಾತ್ರ, ಬೋಲ್ಡ್ ಸಾಂಗ್ ಸಖತ್ ವೈರಲ್….!

ಜಬರ್ದಸ್ತ್ ಶೋ ಮೂಲಕ ಫೇಂ ಪಡೆದುಕೊಂಡ ಆಂಕರ್‍ ಕಂ ನಟಿ ಅನಸೂಯ ಇದೀಗ ಸಿನೆಮಾಗಳಲ್ಲೇ ಬ್ಯುಸಿಯಾಗಿದ್ದಾರೆ. ಸುಮಾರು ವರ್ಷಗಳಿಂದ ಆಕೆ ಕಿರುತೆರೆಯಿಂದ ದೂರವೇ ಉಳಿದಿದ್ದಾರೆ. ಸಿನೆಮಾಗಳಲ್ಲಿ ಮಾತ್ರ ಪುಲ್ ಆಕ್ಟೀವ್ ಆಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಬ್ಯುಸಿಯಾಗಿದ್ದಾರೆ. ಇದೀಗ ಆಕೆ ವಿಮಾನಂ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದಲ್ಲಿ ಆಕೆ ವೇಶ್ಯೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೀಗ ಈ ಸಿನೆಮಾದ ಹಾಡೊಂದು ಬಿಡುಗಡೆಯಾಗಿದ್ದು, ಸಖತ್ ಸದ್ದು ಮಾಡುತ್ತಿದೆ.

ನಟ ಕಂ ನಿರ್ದೇಶಕ ಸಮುದ್ರಖನಿ ವಿಮಾನಂ ಸಿನೆಮಾದಲ್ಲಿ ಪ್ರಮುಖ ಹಾಗೂ ಎಮೋಷನಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಮುದ್ರಖನಿ ಕ್ಯಾರೆಕ್ಟರ್‍ ಆರ್ಟಿಸ್ಟ್ ಆಗಿ, ವಿಲನ್ ಆಗಿ ದೊಡ್ಡ ದೊಡ್ಡ ಸ್ಟಾರ್‍ ಗಳ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ ವಿಮಾನಂ ಎಂಬ ಸಿನೆಮಾದಲ್ಲೂ ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾ ಜಿ ಸ್ಟುಡಿಯೋಸ್, ಕಿರಣ್ ಕೊರಪಾಟಿ ಕ್ರಿಯೇಟಿವ್ಸ್ ಬ್ಯಾನರ್‍ ನಡಿ ನಿಮಾರ್ಣ ಆಗುತ್ತಿದ್ದು, ಶಿವಪ್ರಸಾದ್ ಯಾನಲ ಎಂಬುವವರು ನಿರ್ದೇಶನ ಮಾಡಿದ್ದಾರೆ. ಈ ಸಿನೆಮಾದಲ್ಲಿ ಅನಸೂಯ ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆಕೆ ಸುಮತಿ ಎಂಬ ವೇಶ್ಯೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಅನಸೂಯ ಹುಟ್ಟುಹಬ್ಬದ ಅಂಗವಾಗಿ ಆಕೆಯ ಫಸ್ಟ್ ಲುಕ್ ಪೋಸ್ಟರ್‍ ಸಹ ಬಿಡುಗಡೆ ಮಾಡಲಾಗಿತ್ತು. ಇದೀಗ ಲಿರಿಕಲ್ ವಿಡಿಯೋ ಸಾಂಗ್ ಒಂದನ್ನು ಬಿಡುಗಡೆ ಮಾಡಿದ್ದು ಸಖತ್ ಸದ್ದು ಮಾಡುತ್ತಿದೆ.

ವಿಮಾನಂ ಸಿನೆಮಾದಲ್ಲಿನ ಈ ಸುಮತಿ ಎಂಬ ಲಿರಿಕಲ್ ವಿಡಿಯೋ ಹಾಡನ್ನು ರಿಲೀಸ್ ಮಾಡಿದ್ದಾರೆ. ಈ ಹಾಡಿನಲ್ಲಿ ಅನಸೂಯ ತುಂಬಾನೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಸೊಂಟ ಎದೆಯ ಸೌಂದರ್ಯವನ್ನು ತುಂಬಾ ಕ್ಲೋಜ್ ಆಗಿ ಶೋ ಮಾಡಿದ್ದಾರೆ. ಆಕೆಯ ಹಿಂದೆ ಬೀಳುತ್ತಿರುವಂತೆ ರಾಹುಲ್ ರಾಮಕೃಷ್ಣ ಕಾಣಿಸಿಕೊಳ್ಳುತ್ತಾರೆ. ಇನ್ನೂ ಆಕೆಯ ಸೌಂದರ್ಯದ ಬಗ್ಗೆ ಹೊಗಳುತ್ತಾ ಈ ಹಾಡು ಬರೆದಿದ್ದು ತುಂಬಾನೆ ಸದ್ದು ಮಾಡುತ್ತಿದೆ. ಈ ಹಾಡನ್ನು ನೋಡಿದಾಗ ಅನಸೂಯ ವೇಶ್ಯೆಯ ಪಾತ್ರದಲ್ಲಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಈ ಸುಮತಿ ಎಂಬ ಹಾಡು ಯೂಟ್ಯೂಬ್ ನಲ್ಲಿ ವೈರಲ್ ಆಗಿದೆ. ಇನ್ನೂ ಅನಸೂಯ ಪಾತ್ರಕ್ಕೂ ರಾಹುಲ್ ರಾಮಕೃಷ್ಣ ಗೂ ಏನು ಲಿಂಕ್ ಎಂಬುದು ಎಲ್ಲರಲ್ಲೂ ಆಸಕ್ತಿಯನ್ನು ಹುಟ್ಟಿಹಾಕಿದೆ. ಈ ಸಿನೆಮಾ ಇದೇ ಜೂ.9 ರಂದು ಬಿಡುಗಡೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಇನ್ನೂ ಅನಸೂಯ ಕಿರುತೆರೆಯಿಂದ ಸಂಪೂರ್ಣವಾಗಿ ದೂರವಾಗಿದ್ದಾರೆ ಎಂದೇ ಹೇಳಬಹುದು. ಆಕೆ ತನ್ನ ಸಂಪೂರ್ಣ ಗಮನವನ್ನು ಸಿನೆಮಾಗಳ ಮೆಲೇಯೆ ಇಟ್ಟಿದ್ದಾರೆ. ದೊಡ್ಡ ದೊಡ್ಡ ಸ್ಟಾರ್‍ ಗಳ ಸಿನೆಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದಾರೆ. ಇನ್ನೂ ಆಕೆ ಪುಷ್ಪಾ-2 ಸಿನೆಮಾದಲ್ಲೂ ಸಹ ನಟಿಸುತ್ತಿದ್ದು, ಈ ಸಿನೆಮಾದ ಮೇಲೆ ಆಕೆ ಭಾರಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ ಎನ್ನಲಾಗುತ್ತಿದೆ.

Most Popular

To Top