ನರೇಶ್ ಬಗ್ಗೆ ಇಂಟ್ರಸ್ಟಿಂಗ್ ಕಾಮೆಂಟ್ ಮಾಡಿದ ಪವಿತ್ರಾ, ಆತ ನನ್ನ ಪಾರ್ಟನರ್ ಮಾತ್ರವಲ್ಲ, ನನ್ನ ಸಪೋರ್ಟ್ ಸಿಸ್ಟಂ ಎಂದ ನಟ….!

ಕಳೆದೆರಡು ವರ್ಷಗಳಿಂದ ತೆಲುಗು ಸಿನಿರಂಗದ ಸೀನಿಯರ್‍ ನಟ ನರೇಶ್ ಹಾಗೂ ಪವಿತ್ರಾ ಲೋಕೇಶ್ ರವರ ಬಗ್ಗೆ ಅನೇಕ ಸುದ್ದಿಗಳು ಕೇಳಿಬರುತ್ತಲೇ ಇದೆ. ಅವರಿಬ್ಬರು ಸಹಜೀವನ ನಡೆಸುತ್ತಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಸದಾ ಹರಿದಾಡುತ್ತಲೇ ಇದೆ. ಇನ್ನೂ ಅವರ ಬಗ್ಗೆ ಏನೆ ಸುದ್ದಿ ಬಂದರೂ ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತದೆ. ಇದೀಗ ಅವರಿಬ್ಬರು ಪ್ರಮುಖ ಪಾತ್ರದಲ್ಲಿ ಮಳ್ಳಿ ಪೆಳ್ಳಿ ಎಂಬ ಸಿನೆಮಾದಲ್ಲಿ ನಟಿಸಿದ್ದು, ಈ ಸಿನೆಮಾದ ಪ್ರಮೋಷನ್ ನಲ್ಲಿ ಅವರ ವೈಯುಕ್ತಿಕ ವಿಚಾರಗಳ ಬಗ್ಗೆ ದೊಡ್ಡ ಮಟ್ಟದಲ್ಲೇ ಚರ್ಚೆ ನಡೆಯುತ್ತಿದೆ. ಅವರ ಸುದ್ದಿ ಇದೀಗ ಸೋಷಿಯಲ್ ಮಿಡಿಯಾ ಮಾತ್ರವಲ್ಲದೇ ಸಿನಿವಲಯದಲ್ಲೂ ಸಹ ಹಾಟ್ ಟಾಪಿಕ್ ಆಗಿದೆ.

ತೆಲುಗು ಸಿನಿರಂಗದ ಸೀನಿಯರ್‍ ನಟ ನರೇಶ್ ಹಾಗೂ ಕ್ಯಾರೆಕ್ಟರ್‍ ಆರ್ಟಿಸ್ಟ್ ಪವಿತ್ರಾ ಲೋಕೇಶ್ ಸುಮಾರು ದಿನಗಳಿಂದ ಸಹಜೀವನ ನಡೆಸುತ್ತಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಲೇ ಇದೆ. ಅವರಿಬ್ಬರ ರದ್ದಾಂತ ತುಂಬಾನೆ ಜೋರಾಗಿ ನಡೆದಿತ್ತು. ಸುದ್ದಿವಾಹಿನಿಗಳಲ್ಲಿ ಸೋಷಿಯಲ್ ಮಿಡಿಯಾದಲ್ಲಿ ಅವರದ್ದೆ ಸುದ್ದಿ ಕೇಳಿಬರುತ್ತಿತ್ತು. ಇದೀಗ ಅವರಿಬ್ಬರೂ ಮಳ್ಳಿ ಪೆಳ್ಳಿ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳೂ ಸಹ ಜೋರಾಗಿಯೆ ಆಯೋಜನೆ ಮಾಡಲಾಗುತ್ತಿದೆ. ಇನ್ನೂ ಪ್ರಚಾರ ಕಾರ್ಯಕ್ರಮದಲ್ಲೂ ಸಹ ನರೇಶ್ ಹಾಗೂ ಪವಿತ್ರ ರವರ ವೈಯುಕ್ತಿಕ ವಿಚಾರಗಳು ಚರ್ಚೆಗೆ ಬಂದಿದೆ ಇದೀಗ ಪವಿತ್ರ ಲೋಕೇಶ್ ನರೇಶ್ ಬಗ್ಗೆ ಕೆಲವೊಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಆಕೆಯ ಹೇಳಿಕೆಗಳು ಸಖತ್ ವೈರಲ್ ಆಗುತ್ತಿವೆ.

ಇನ್ನೂ ಪವಿತ್ರಾ ಲೋಕೇಶ್ ಇದೀಗ ನರೇಶ್ ಬಗ್ಗೆ ಮಾತನಾಡಿದ್ದಾರೆ. ಪವಿತ್ರಾ ಮಾತನಾಡುತ್ತಾ ನನಗೆ ನರೇಶ್ ಕೇವಲ ಲೈಫ್ ಪಾರ್ಟನರ್‍ ಮಾತ್ರವಲ್ಲ. ಆತ ನನಗೆ ಸಪೋರ್ಟಿಟಂಗ್ ಸಿಸ್ಟಂ ಕೂಡ ಹೌದು. ಏನೆ ವಿಚಾರವಿರಲಿ ಆತ ನನಗೆ ಸಪೋರ್ಟಿವ್ ಆಗಿರುತ್ತಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ನನ್ನ ಮೇಲೆ ದೊಡ್ಡ ಮಟ್ಟದ ಟ್ರೋಲ್ ಗಳು ಬಂದಾಗ ನನಗೆ ಬೆಂಬಲವಾಗಿ ನಿಂತರು. ಅವರ ಬೆಂಬಲಕ್ಕೆ ನಾನು ಚಿರ ಋಣಿಯಾಗಿರುತ್ತಾನೆ ಎಂದಿದ್ದಾರೆ. ಇನ್ನೂ ಪವಿತ್ರಾ ಲೋಕೇಶ್ ರವರ ಈ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನೂ ಕೆಲವು ದಿನಗಳ ಹಿಂದೆಯಷ್ಟೆ ಪವಿತ್ರಾ ನರೇಶ್ ರವರ ಆಸ್ತಿಗಾಗಿ ಆತನ ಬಳಿ ಇದ್ದಾಳೆ ಎಂಬ ಸುದ್ದಿಯೊಂದು ಕೇಳಿಬಂತು. ಈ ಬಗ್ಗೆ ನರೇಶ್ ಸಹ ರಿಯಾಕ್ಟ್ ಆಗಿದ್ದು, ಈ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ನಮ್ಮದು ಪವಿತ್ರವಾದ ಸಂಬಂಧ ಎಂದು ಹೇಳಿದ್ದರು. ಜೊತೆಗೆ ಅವರ ಮದುವೆಗೆ ಮಹೇಶ್ ಬಾಬುರವರಿಗೂ ಸಹ ಸಹಮತವಿದೆ ಎಂದಿದ್ದರು. ಇದೀಗ ಪವಿತ್ರಾ ಸಹ ನರೇಶ್ ಬಗ್ಗೆ ಮಾತನಾಡಿದ್ದು, ತಮ್ಮ ರಿಲೇಷನ್ ಬಗ್ಗೆ ಮಾತನಾಡಿದ್ದಾರೆ.