Film News

ರಾಕಿ ಭಾಯ್ ಜೊತೆಗೆ ತೆರೆಹಂಚಿಕೊಳ್ಳಲಿದ್ದಾರಂತೆ ಶಾರುಖ್ ಖಾನ್, ಟಾಕ್ಸಿಕ್ ಸಿನೆಮಾಗಾಗಿ ಭಾರಿ ಪ್ಲಾನ್…….!

ಇತ್ತೀಚಿಗೆ ಮಲ್ಟಿ ಸ್ಟಾರರ್‍ ಸಿನೆಮಾಗಳು ಹೆಚ್ಚಾಗಿ ಬರುತ್ತಿವೆ. ಇದೀಗ ಪ್ಯಾನ್ ಇಂಡಿಯಾ ಸ್ಟಾರ್‍ ರಾಕಿಂಗ್ ಸ್ಟಾರ್‍ ಯಶ್ ರವರ ಟಾಕ್ಸಿಕ್ ಸಿನೆಮಾದಲ್ಲಿ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ನಟಿಸಲಿದ್ದಾರೆ ಎಂಬ ಸುದ್ದಿಯೊಂದು ಭಾರಿ ಸದ್ದು ಮಾಡುತ್ತಿದೆ. ಇದಕ್ಕಾಗಿ ಚಿತ್ರತಂಡ ಭಾರಿ ಪ್ಲಾನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಸುದ್ದಿ ಮಾತ್ರ ಹೊರಬಂದಿಲ್ಲ. ಆದರೆ ಸುದ್ದಿ ಮಾತ್ರ ಸಿನಿವಲಯದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಕೆಜಿಎಫ್ ಸಿನೆಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್‍ ಆದ ರಾಕಿಂಗ್ ಸ್ಟಾರ್‍ ಯಶ್ ರವರ ಸಿನೆಮಾಗಾಗಿ ಸುಮಾರು ದಿನಗಳಿಂದ ಅಭಿಮಾನಿಗಳು ಕಾಯುತ್ತಿದ್ದರು. ಕೆಲವು ದಿನಗಳ ಹಿಂದೆಯಷ್ಟೆ ಯಶ್ ರವರ ಟಾಕ್ಸಿಕ್ ಸಿನೆಮಾದ ಅಪ್ಡೇಟ್ ಬಂತು. ಈ ಸಿನೆಮಾವನ್ನು ಮಾಲಿವುಡ್ ಮೂಲದ ಗೀತು ಮೋಹನ್ ದಾಸ್ ನಿರ್ದೇಶನ ಮಾಡುತ್ತಿದ್ದು ಈ ಸಿನೆಮಾದ ಮೇಲೆ ಭಾರಿ ನಿರೀಕ್ಷೆ ಹುಟ್ಟಿದೆ. ಇನ್ನೂ ಈ ಸಿನೆಮಾ ಅನೌನ್ಸ್ ಆದಾಗಿನಿಂದ ಸಿನೆಮಾದ ಬಗ್ಗೆ ಅನೇಕ ರೂಮರ್‍ ಗಳೂ ಸಹ ಕೇಳಿಬರುತ್ತಿವೆ. ಈ ಹಿಂದೆ ಸಿನೆಮಾದ ನಾಯಕಿಯಾಗಿ ಬಾಲಿವುಡ್ ಸ್ಟಾರ್‍ ಕರೀನಾ ಕಪೂರ್‍ ನಟಿಸಲಿದ್ದಾರೆ ಎಂದೂ ಹೇಳಲಾಗಿತ್ತು. ಇದೀಗ ಈ ಸಿನೆಮಾದಲ್ಲಿ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ನಟಿಸಲಿದ್ದಾರೆ ಎಂಬ ಸುದ್ದಿಯೊಂದು ವೈರಲ್ ಆಗುತ್ತಿದೆ.

ಕೆಲವು ದಿನಗಳ ಹಿಂದೆಯಷ್ಟೆ ಯಶ್ ರವರ ಟಾಕ್ಸಿಕ್ ಸಿನೆಮಾದ ಟೈಟಲ್ ಟೀಸರ್‍ ಹೊರಬಂದಿತ್ತು. ಈ ಟೀಸರ್‍ ಭಾರಿ ಸದ್ದು ಮಾಡಿತ್ತು. ಯಶ್ ರನ್ನು ಹೊರತುಪಡಿಸಿ ಬೇರೆ ಕಲಾವಿದರು ಆಯ್ಕೆ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಂದಿಲ್ಲ. ಆದರೆ ಕೆಲವೊಂದು ರೂಮರ್‍ ಗಳು ಮಾತ್ರ ವೈರಲ್ ಆಗುತ್ತಿವೆ. ಸದ್ಯ ಹರಿದಾಡುತ್ತಿರುವ ಸುದ್ದಿಯಂತೆ ಯಶ್ ಜೊತೆಗೆ ಶಾರುಖ್ ಖಾನ್ ನಟಿಸಲಿದ್ದಾರೆ. ಈಗಾಗಲೇ ಶಾರುಖ್ ರವರ ಜೊತೆಗೆ ಚಿತ್ರತಂಡದವರು ಸಹ ಮಾತುಕತೆ ನಡೆಸಿದ್ದಾರೆ. ಅತಿಥಿ ಪಾತ್ರದಲ್ಲಿ ಶಾರುಖ್ ಖಾನ್ ರವರನ್ನು ನಟಿಸುವಂತೆ ತಂಡ ಕೇಳಿದೆಯಂತೆ. ಸದ್ಯ  ಈ ಸುದ್ದಿ ಮಾತ್ರ ಸಿನಿವಲಯದಲ್ಲಿ ಭಾರಿ ಸದ್ದು ಮಾಡುತ್ತಿದೆ. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಮಾತ್ರ ಹೊರಬಂದಿಲ್ಲ. ಈ ಸಿನೆಮಾವನ್ನು ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದ್ದಾರೆ.

Most Popular

To Top