Film News

ಆ ಪೊಟೋ ಮೂಲಕ ಡಿವೋರ್ಸ್ ವದಂತಿಗೆ ತೆರೆ ಎಳೆದ ಐಶ್ವರ್ಯ-ಅಭಿಷೇಕ್, ವೈರಲ್ ಆದ ಪೊಟೋ…..!

ಸೋಷಿಯಲ್ ಮಿಡಿಯಾ ಬಳಕೆ ಹೆಚ್ಚಾದಂತೆ ಕೆಲವೊಂದು ರೂಮರ್‍ ಗಳು ಕಡಿಮೆ ಸಮಯದಲ್ಲೇ ಸಿಕ್ಕಾಪಟ್ಟೆ ವೈರಲ್ ಆಗಿಬಿಡುತ್ತವೆ. ಅದರಲ್ಲೂ ಸಿನೆಮಾ ಸೆಲೆಬ್ರೆಟಿಗಳಿಗೆ ಸಂಬಂಧಿಸಿದ ಸುದ್ದಿಯೇನಾದರೂ ಬಂದರೇ ಸಾಕು ಬಿರುಗಾಳಿಯಂತೆ ಹಬ್ಬಿಬಿಡುತ್ತದೆ. ಈ ಸಾಲಿಗೆ ಬಾಲಿವುಡ್ ಸ್ಟಾರ್‍ ಜೋಡಿ ಐಶ್ವರ್ಯ ಹಾಗೂ ಅಭಿಷೇಕ್ ಸಹ ಸೇರುತ್ತಾರೆ. ಬಾಲಿವುಡ್ ಸ್ಟಾರ್‍ ಕಪುಲ್ ಅಂಡ್ ಮೋಸ್ಟ್ ಬ್ಯೂಟಿಪುಲ್ ಕಪುಲ್ ಎಂದೇ ಕರೆಯಲಾಗುವ ಅಭಿಷೇಖ್ ಬಚ್ಚನ್ ಹಾಗೂ ಐಶ್ವರ್ಯ ರೈ ರವರು ವಿಚ್ಚೇದನ ಪಡೆದುಕೊಳ್ಳಲಿದ್ದಾರೆ ಎಂಬ ರೂಮರ್‍ ಭಾರಿ ಸದ್ದು ಮಾಡುತ್ತಿತ್ತು. ಇದೀಗ ಒಂದು ಪೊಟೋ ಮೂಲಕ ಈ ರೂಮರ್‍ ಗೆ ತೆರೆ ಬಿದಿದ್ದೆ ಎನ್ನಲಾಗಿದೆ.

ಬಾಲಿವುಡ್ ನ ಬೆಸ್ಟ್ ಜೋಡಿ ಎಂದೇ ಕರೆಯಲಾಗುವ ಐಶ್ವರ್ಯ ಹಾಗೂ ಅಭಿಷೇಕ್ ಸುಮಾರು 20 ವರ್ಷಗಳಿಂದ ಸಂತೋಷವಾಗಿ ವೈವಾಹಿಕ ಜೀವನ ಸಾಗಿಸುತ್ತಿದ್ದಾರೆ. ಈ ಜೋಡಿಗೆ ಆರಾಧ್ಯ ಎಂಬ ಮುದ್ದಾದ ಮಗಳೂ ಸಹ ಇದ್ದಾಳೆ. ಸುಮಾರು ದಿನಗಳಿಂದ ಈ ಜೋಡಿ ವಿಚ್ಚೇದನ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಬಳಿಕ ಈ ಸುದ್ದಿ ತಣ್ಣಗಾಗಿತ್ತು. ಇದೀಗ ಮತ್ತೊಮ್ಮೆ ಈ ಜೋಡಿಯ ವಿಚ್ಚೇದನ ರೂಮರ್‍ ವೈರಲ್ ಆಗುತ್ತಿದೆ. ಈ ಜೋಡಿ ವಿಚ್ಚೇದನ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿತ್ತು. ಈ ಸುದ್ದಿ ವೈರಲ್‌ ಆಗಿದ್ದರೂ ಅವರು ಯಾವುದೇ ರೀತಿಯಲ್ಲಿ ರಿಯಾಕ್ಟ್ ಆಗಿರಲಿಲ್ಲ. ಇದೀಗ ಈ ರೂಮರ್‍ ಗೆ ಕೇವಲ ಒಂದು ಪೊಟೋ ಮೂಲಕ ತೆರೆ ಹಾಕಿದ್ದಾರೆ.

ಬಾಲಿವುಡ್ ಸ್ಟಾರ್‍ ನಟ ಅಭಿಷೇಕ್ ಬಚ್ಚನ್ ರವರು ಫೆ.5 ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅಭಿಷೇಕ್ ಬಚ್ಚನ್ ರವರ ಹುಟ್ಟುಹಬ್ಬಕ್ಕೆ ಅವರ ಸಂಬಧಿಕರು ಸೇರಿದಂತೆ ಅಭಿಮಾನಿಗಳು ಸೋಷಿಯಲ್ ಮಿಡಿಯಾದಲ್ಲಿ ಶುಭಾಷಯಗಳನ್ನು ಕೋರಿದ್ದಾರೆ. ಆದರೆ ಐಶ್ವರ್ಯ ರೈ ಕಡೆಯಿಂದ ಶುಭಾಷಯ ಬಂದಿರಲಿಲ್ಲ. ಈ ಕಾರಣದಿಂದ ಮತ್ತೊಮ್ಮೆ ಡಿವೋರ್ಸ್ ಬಗ್ಗೆ ಅನುಮಾನ ಹೆಚ್ಚಾಗಿತ್ತು. ಆದರೆ ಸಂಜೆ ವೇಳೆಗೆ ಆಕೆ ಸುಂದರವಾದ ಪೊಟೋವನ್ನು ಹಂಚಿಕೊಳ್ಳುವ ಮೂಲಕ ಗಂಡನಿಗೆ ಶುಭಾಷಯಗಳನ್ನು ಕೋರಿದ್ದಾರೆ. ಪತಿಯ ಹುಟ್ಟುಹಬ್ಬಕ್ಕೆ ಪ್ರೀತಿಯಿಂದ ವಿಶ್ ಮಾಡಿದ್ದಾರೆ. ಜೊತೆಗೆ ಫ್ಯಾಮಿಲಿ ಪೊಟೋವನ್ನು ಸಹ ಹಂಚಿಕೊಂಡಿದ್ದಾರೆ. ಜನ್ಮದಿನದ ಶುಭಾಷಯಗಳು, ಹೆಚ್ಚು ಸಂತೋಷ, ಪ್ರೀತಿ, ಶಾಂತಿ ಹಾಗೂ ಉತ್ತಮ ಆರೋಗ್ಯವನ್ನು ದೇವರು ನಿಮಗೆ ನೀಡಲು ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಫ್ಯಾಮಿಲಿ ಪೊಟೋ ಜೊತೆಗೆ ಅಭಿಷೇಕ್ ಬಚ್ಚನ್ ಬಾಲ್ಯದ ಪೊಟೋ ಸಹ ಐಶ್ವರ್ಯ ಹಂಚಿಕೊಂಡಿದ್ದಾರೆ. ಈ ಒಂದು ಪೊಟೋ ಮೂಲಕ ತಮ್ಮ ವಿಚ್ಚೇದನದ ರೂಮರ್‍ ಗೆ ಚೆಕ್ ಇಟ್ಟಂತಾಗಿದೆ ಎಂದು ಹೇಳಲಾಗುತ್ತಿದೆ. ಸಿನೆಮಾಗಳ ವಿಚಾರಕ್ಕೆ ಬಂದರೇ ಐಶ್ವರ್ಯ ರೈ ಸಿನೆಮಾಗಳಲ್ಲಿ ಅಷ್ಟೊಂದು ನಟಿಸುತ್ತಿಲ್ಲ. ಆಗಾಗ ಒಂದೊಂದು ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಅಭಿಷೇಕ್ ಬಚ್ಚನ್ ಸಿನೆಮಾಗಳ ಜೊತೆಗೆ ವೆಬ್ ಸಿರೀಸ್ ಗಳಲ್ಲಿ ನಟಿಸುತ್ತಿದ್ದಾರೆ.

Most Popular

To Top