ಲವರ್ ಬರ್ತ್ ಡೇ ಪಾರ್ಟಿಯಲ್ಲಿ ಮೈಮರೆತು ಕುಣಿದ ಮಲೈಕಾ, ಸಖತ್ ವೈರಲ್ ಆದ ವಿಡಿಯೋ…….!

Follow Us :

ಬಾಲಿವುಡ್ ಸಿನಿರಂಗದ ಬೋಲ್ಡ್ ಸೀನಿಯರ್‍ ನಟಿಯರಲ್ಲಿ ಮಲೈಕಾ ಅರೋರಾ ಮೊದಲ ಸ್ಥಾನದಲ್ಲಿರುತ್ತಾರೆ. ಹಾಫ್ ಸೆಂಚುರಿಗೆ ಹತ್ತಿರವಾಗಿದ್ದರೂ ಸಹ ಆಕೆ ಹಾಟ್ ಪೊಟೋಶೂಟ್ಸ್ ಮೂಲಕ ಹದಿಹರೆಯದ ಯುವತಿರಯನ್ನೂ ಸಹ ನಾಚಿಸುವಂತೆ ಮಾಡುತ್ತಿದ್ದಾರೆ. ಐಟಂ ಹಾಡುಗಳ ಮೂಲಕ ಸಿನಿರಂಗವನ್ನು ಶೇಕ್ ಮಾಡಿದಂತಹ ಮಲೈಕಾಗೆ ವಯಸ್ಸು ಕೇವಲ ನಂಬರ್‍ ಮಾತ್ರ ಸೌಂದರ್ಯಕ್ಕಲ್ಲ ಎಂಬ ಭಾವನೆ ಮೂಡುವಂತೆ ಮಾಡುತ್ತಿರುತ್ತಾರೆ. ಇದೀಕ ಆಕೆ ತನ್ನ ಲವರ್‍ ಹುಟ್ಟುಹಬ್ಬದ ಪಾರ್ಟಿಯಲ್ಲಿ ಮೈಮರೆತು ಸಿಕ್ಕಾಪಟ್ಟೆ ಕುಣಿದಿದ್ದು, ಆ ವಿಡಿಯೋ ಸೊಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಬಾಲಿವುಡ್ ಹಾಟ್ ಬಾಂಬ್ ಮಲೈಕಾ ವಯಸ್ಸು ಸದ್ಯ 49 ಶೀಘ್ರದಲ್ಲೇ ಆಕೆ ವಯಸ್ಸಿನಲ್ಲಿ ಹಾಫ್ ಸೆಂಚುರಿ ಹೊಡೆಯಲಿದ್ದಾರೆ. ಆಕೆ ತನ್ನ ಸೌಂದರ್ಯಕ್ಕೆ ತುಂಬಾ ಪ್ರಾಶಸ್ತ್ಯ ಕೊಡುತ್ತಾರೆ. ಸದಾ ಜಿಮ್, ಯೋಗಾ ಮಾಡುತ್ತಾ ಗ್ಲಾಮರ್‍ ಕಾಪಾಡಿಕೊಳ್ಳಲು ತುಂಬಾನೆ ಕಸರತ್ತುಗಳನ್ನು ಮಾಡುತ್ತಾರೆ. ಇನ್ನೂ ಆಕೆ ಸೋಷಿಯಲ್ ಮಿಡಿಯಾದಲ್ಲಂತೂ ಸದಾ ಬೋಲ್ಡ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ಜೊತೆಗೆ ಆಕೆ ತನ್ನ ವೈಯುಕ್ತಿಕ ವಿಚಾರಗಳ ಕಾರಣದಿಂದಲೂ ಸಹ ಸುದ್ದಿಯಾಗುತ್ತಿರುತ್ತಾರೆ. ಆಕೆ ತನಗಿಂತ 12 ವರ್ಷ ಚಿಕ್ಕವನಾದ ಅರ್ಜುನ್ ಕಪೂರ್‍ ಜೊತೆಗೆ ಡೇಟಿಂಗ್ ನಲ್ಲಿದ್ದಾರೆ. ಇಬ್ಬರೂ ಸದ್ಯ ಸಹಜೀವನ ಸಾಗಿಸುತ್ತಿದ್ದಾರೆ. ಮಲೈಕಾ ತನ್ನ ಮೊದಲ ಪತಿ ಅರ್ಬಾಜ್ ಖಾನ್ ಜೊತೆಗೆ ವಿಚ್ಚೇದನ ಪಡೆದುಕೊಂಡ ಬಳಿಕ ಅರ್ಜುನ್ ಕಪೂರ್‍ ಜೊತೆಗೆ ಬಹಿರಂಗವಾಗಿಯೇ ಸುತ್ತಾಡುತ್ತಿದ್ದಾರೆ.

ಇಂದು ಅರ್ಜುನ್ ಕಪೂರ್‍ ಹುಟ್ಟುಹಬ್ಬವಾಗಿದ್ದು 38 ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈ ವೇಳೆ ನಿನ್ನೆ ರಾತ್ರಿ ಅರ್ಜುನ್ ಕಪೂರ್‍ ಗ್ರಾಂಡ್ ಆಗಿ ಹುಟ್ಟುಹಬ್ಬದ ಪಾರ್ಟಿಯನ್ನು ನಡೆಸಲಾಗಿತ್ತು. ಈ ಪಾರ್ಟಿಯಲ್ಲಿ ಅರ್ಜುನ್ ಕಪೂರ್‍ ಕುಟುಂಬ, ಸ್ನೇಹಿತರು ಹಾಗೂ ಕೆಲ ಬಾಲಿವುಡ್ ಸೆಲೆಬ್ರೆಟಿಗಳೂ ಸಹ ಭಾಗಿಯಾಗಿದ್ದರು. ಜೊತೆಗೆ ತನ್ನ ಪ್ರೇಯಸಿ ಮಲೈಕಾ ಸಹ ಹಾಜರಾಗಿದ್ದಾರೆ. ಇಡೀ ಬರ್ತ್ ಡೇ ಪಾರ್ಟಿಗೆ ಮಲೈಕಾ ಹೈಲೈಟ್ ಎಂದು ಹೇಳಲಾಗಿದೆ. ಒಂದು ರೇಂಜ್ ನಲ್ಲಿ ಕುಣಿದಿದ್ದಾರೆ. ಟೈಟ್ ಫಿಟ್ ಬಾಡಿ ಕಾನ್ ಡ್ರೆಸ್ ನಲ್ಲಿ ಮಲೈಕಾ ಈ ಪಾರ್ಟಿಗೆ ಹಾಜರಾಗಿದ್ದಾರೆ. ಪಾರ್ಟಿಯಲ್ಲಿ ಕಿಕ್ಕೇರಿಸಿಕೊಂಡು ಸೂಪರ್‍ ಹಿಟ್ ಸಾಂಗ್ ಚಯ್ಯ ಚಯ್ಯ ಹಾಡಿಗೆ ಭರ್ಜರಿಯಾಗಿ ಕುಣಿದಿದ್ದಾರೆ. ಈ ಸಂಬಂಧ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಇನ್ನೂ ಮಲೈಕಾ ಅರ್ಜುನ್ ಕಪೂರ್‍ ಸದ್ಯ ಸಹಜೀವನ ನಡೆಸುತ್ತಿದ್ದು, ಇಬ್ಬರೂ ಸದಾ ವೆಕೇಷನ್ ಗಳಿಗೆ ಹಾರುತ್ತಾ ಎಂಜಾಯ್ ಮಾಡುತ್ತಿರುತ್ತಾರೆ. ಸದ್ಯ ಸಿನೆಮಾಗಳಿಂದ ದೂರವಿದ್ದ ಈಕೆ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ನೆವರ್‍ ಬಿಪೋರ್‍ ಎಂಬಂತೆ ಹಾಟ್ ಪೊಟೋಶೂಟ್ಸ್ ಮೂಲಕ ಸದಾ ಹಾಟ್ ಟಾಪಿಕ್ ಆಗಿರುತ್ತಾರೆ. ಇದೀಗ ಅರ್ಜುನ್ ಕಪೂರ್‍ ಬರ್ತ್ ಡೇ ಪಾರ್ಟಿಯಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ.