ಇತ್ತೀಚಿಗೆ ಸಿನಿರಂಗದಲ್ಲಿ ಒಟಿಟಿ ಕಂಟೆಂಟ್ ವುಳ್ಳ ಸಿರೀಸ್ ಗಳು ತುಂಬಾನೆ ಬರುತ್ತಿವೆ. ಅದರಲ್ಲೂ ಕೆಲವೊಂದು ಅಸಭ್ಯಕರವಾದ ಹಾಗೂ ಬೋಲ್ಡ್ ಸಿರೀಸ್ ಗಳು ಹೆಚ್ಚಾಗಿ ಬರುತ್ತಿದೆ. ಅನೇಕರು ಒಟಿಟಿಗಳಲ್ಲಿ ಅಡಲ್ಟ್ ಕಟೆಂಟ್ ಇರುವಂತಹ ಸಿರೀಸ್ ಗಳನ್ನು ಬ್ಯಾನ್ ಮಾಡಬೇಕೆಂಬ ಕೂಗು ಸಹ ಕೇಳಿಬರುತ್ತಿದೆ. ಇದೀಗ ಈ ಸಾಲಿಗೆ ಹಾಟ್ ಸೀನಿಯರ್ ಬ್ಯೂಟಿ ಅಮಿಷಾ ಪಟೇಲ್ ಸಹ ರಿಯಾಕ್ಟ್ ಆಗಿದ್ದಾರೆ. ಒಟಿಟಿ ಗಳಲ್ಲಿ ಪ್ರಸಾರವಾಗುವ ಅಡಲ್ಟ್ ಸಿರೀಸ್ ಗಳಿಂದ ಮಕ್ಕಳು ತಪ್ಪು ದಾರಿ ಹಿಡಿಯುತ್ತಿದ್ದಾರೆ ಎಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.
ಸುಮಾರು ವರ್ಷಗಳ ಹಿಂದೆ ಬಾಲಿವುಡ್ ಸೇರಿದಂತೆ ದಕ್ಷಿಣ ಭಾರತದಲ್ಲಿ ತುಂಬಾನೆ ಕ್ರೇಜ್ ಹೊಂದಿರುವ ನಟಿಯರಲ್ಲಿ ಅಮಿಷಾ ಪಟೇಲ್ ಸಹ ಒಬ್ಬರಾಗಿದ್ದಾರೆ. ಶೀಘ್ರದಲ್ಲೆ ಆಕೆ ಆಫ್ ಸೆಂಚುರಿಗೆ ಹತ್ತಿರದಲ್ಲೇ ಇದ್ದಾರೆ. ಆದರೂ ಸಹ ಆಕೆಯ ಹಾಟ್ ನೆಸ್ ಯಂಗ್ ಬ್ಯೂಟಿಯರನ್ನೂ ಸಹ ಹಿಂದೆ ಹಾಕುತ್ತಿದೆ. ನಟಿ ಅಮಿಷಾ ಪಟೇಲ್ ಕಹೋನಾ ಪ್ಯಾರ್ ಹೈ ಎಂಬ ಹಿಂದಿ ಸಿನೆಮಾದ ಮೂಲಕ ಎಂಟ್ರಿ ಕೊಟ್ಟರು. ಮೊದಲನೇ ಸಿನೆಮಾದ ಮೂಲಕ ದೊಡ್ಡ ಮಟ್ಟದ ಕ್ರೇಜ್ ಸಂಪಾದಿಸಿಕೊಂಡ ಈ ಬ್ಯೂಟಿ ಬಳಿಕ ಕೂಡಲೇ ತೆಲುಗು ಸಿನೆಮಾದಲ್ಲಿ ಕಾಣಿಸಿಕೊಂಡರು. ಪವರ್ ಸ್ಟಾರ್ ಪವನ್ ಕಲ್ಯಾಣ್ ಜೊತೆಗೆ ಬದ್ರಿ ಸಿನೆಮಾದಲ್ಲಿ ಕಾಣಿಸಿಕೊಂಡರು. ಈ ಸಿನೆಮಾದ ಮೂಲಕ ತೆಲುಗು ಪ್ರೇಕ್ಷಕರನ್ನೂ ಸಹ ರಂಜಿಸಿದ್ದರು. ಬಳಿಕ ಆಕೆ ಬಾಲಿವುಡ್ ಸಿನೆಮಾಗಳಲ್ಲೇ ಹೆಚ್ಚು ನಟಿಸಿದರು.
ಇನ್ನೂ ಅಮಿಷಾ ಇದೀಗ ಗದರ್-2 ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಈ ಸಿನೆಮಾದ ಬಿಡುಗಡೆಗೆ ಕಾಲ ಸನ್ನಿಹವಾಗಿದ್ದು, ಅಮಿಷಾ ಪಟೇಲ್ ಪ್ರಮೋಷನ್ ಗಳಲ್ಲಿ ಸಹ ಪುಲ್ ಬ್ಯುಸಿಯಾಗಿದ್ದಾರೆ. ಈ ಸಿನೆಮಾದ ಪ್ರಮೋಷನ್ ನಿಮಿತ್ತ ಅಮಿಷಾ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಆಕೆ ಒಟಿಟಿಗಳ ಬಗ್ಗೆ ಸಂಚಲನಾತ್ಮಕ ಹೇಳಿಕೆ ನೀಡಿದ್ದಾರೆ. ಸದ್ಯ ಒಟಿಟಿಗಳಲ್ಲಿ ಕ್ಲೀನ್ ಕಟೆಂಟ್ ಗಳಿಗಿಂತ ಸ್ವಲಿಂಗ ಸಂಪರ್ಕ, ಗೇ ಲೆಸ್ಬಿಯನ್ ಮೊದಲಾದ ಅಡಲ್ಟ್ ಕಂಟೆಂಟ್ ತುಂಬಾನೆ ಇದೆ. ಇದರಿಂದ ಮಕ್ಕಳು ತಪ್ಪು ದಾರಿ ಹಿಡಿಯುವಂತಾಗಿದೆ. ಅವು ಮಕ್ಕಳಿಂದ ದೂರ ಇರಬೇಕು, ಆದರೆ ಅವು ಮಕ್ಕಳಿಗೆ ತುಂಬಾ ಹತ್ತಿರದಲ್ಲೇ ಇದೆ. ಇನ್ನೂ ಮಕ್ಕಳನ್ನು ಇದರಿಂದ ದೂರ ಇಡಬೇಕು. ಕುಟುಂಬ ಕುಳಿತು ನೋಡುವ ಕಾಲ ಇದಲ್ಲ ಎಂದು ಹೇಳಿದ್ದಾರೆ. ಇನ್ನೂ ಅಮಿಷಾ ಹೇಳಿಕೆಗಳು ಇದೀಗ ಸಂಚಲನ ಸೃಷ್ಟಿಸಿದೆ. ಕೆಲವರು ಆಕೆ ಹೇಳಿಕೆಗಳನ್ನು ಬೆಂಬಲಿಸಿದರೇ, ಮತ್ತೆ ಕೆಲವರು ಆಕೆಯ ಹೇಳಿಕೆಗಳನ್ನು ತಳ್ಳಿಹಾಕಿದ್ದಾರೆ.
ಒಟ್ಟಿನಲ್ಲಿ ಒಟಿಟಿಗಳ ಬಗ್ಗೆ ಅಮಿಷಾ ನೀಡಿದ ಹೇಳಿಕೆಗಳು ಸಿನಿರಂಗದಲ್ಲಿ ಚರ್ಚೆಗೆ ಕಾರಣವಾಗಿದೆ. ಸದ್ಯ ಅಮಿಷಾ ಗದರ್-2 ಸಿನೆಮಾದ ಮೂಲಕ ಕಾಣಿಸಿಕೊಳ್ಳಲಿದ್ದಾರೆ. ಈ ಸಿನೆಮಾ ಇದೇ ಆ.11 ರಂದು ಬಿಡುಗಡೆಯಾಗಲಿದೆ. ಇನ್ನೂ ಈ ಸಿನೆಮಾದ ಮೇಲೆ ಚಿತ್ರತಂಡ ಮಾತ್ರವಲ್ಲದೇ ಬಾಲಿವುಡ್ ಸಹ ಭಾರಿ ನಿರೀಕ್ಷೆಯನ್ನು ಇಟ್ಟುಕೊಂಡಿದೆ. ಈ ಸಿನೆಮಾದಲ್ಲಿ ಅಮಿಷಾ ಸನ್ನಿ ಡಿಯೋಲ್ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ.
