Film News

ಸಂಚಲನಾತ್ಮಕ ಹೇಳಿಕೆ ಕೊಟ್ಟ ಸೊನಂ, ಅಲ್ಲಿ ಕೈ ಹಾಕಿ ವಲ್ಗರ್ ಆಗಿ ವರ್ತಿಸಿದ ಎಂದ ಸೋನಂ ಕಪೂರ್….!

ಇಂದಿನ ಕಾಲದಲ್ಲಿ ಸಾಮಾನ್ಯರಿಂದ ಹಿಡಿದ ಸೆಲೆಬ್ರೆಟಿಗಳ ವರೆಗೆ ಸಾರ್ವಜನಿಕ ಪ್ರದೇಶಗಳಲ್ಲಿ ಮಹಿಳೆಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಅದರಲ್ಲೂ ಸಿನೆಮಾ ಸೆಲೆಬ್ರೆಟಿಗಳಿಗೆ ಸೆಕ್ಯುರಿಟಿ ಇದ್ದರೂ ಸಹ ಕೆಲವೊಂದು ಕಹಿ ಘಟನೆಗಳನ್ನು ಅನುಭವಿಸುತ್ತಿರುತ್ತಾರೆ. ಕೆಲವೊಮ್ಮೆ ಸೆಲೆಬ್ರೆಟಿಗಳು ತಮಗಾದಂತಹ ಕೆಟ್ಟ ಅನುಭವಗಳ ಬಗ್ಗೆ ಹೇಳಿಕೊಳ್ಳುತ್ತಿರುತ್ತಾರೆ. ಇದೀಗ ಬಾಲಿವುಡ್ ನಟಿ ಸೋನಂ ಕಪೂರ್‍ ಸಹ ತಮಗಾದ ಕೆಟ್ಟ ಅನುಭವವೊಂದನ್ನು ಹೊರಹಾಕಿದ್ದಾರೆ.

ನಟಿ ಸೋನಂ ಕಪೂರ್‍ ಆನಂದ್ ಅಹುಜಾ ಎಂಬ ಉದ್ಯಮಿಯೊಂದಿಗೆ 2018ರಲ್ಲಿ ಮದುವೆಯಾದರು. ಮದುವೆಯಾದ ಬಳಿಕ ಸಿನೆಮಾಗಳಿಂದ ದೂರವುಳಿದರು. ಆದರೆ ಸಿನೆಮಾಗಳಿಂದ ದೂರವಾದರೂ ಸಹ ಆಕೆ ಸೋಷಿಯಲ್ ಮಿಡಿಯಾ ಮೂಲಕ ತಮ್ಮ ಅಭಿಮಾನಿಗಳಿಗೆ ಹತ್ತಿರವಾಗಿದ್ದರು. ಸೋಷಿಯಲ್ ಮಿಡಿಯಾದ ಮೂಲಕವೇ ತಮ್ಮ ಅಭಿಮಾನಿಗಳೊಂದಿಗೆ ಸಂವಾದ ನಡೆಸುತ್ತಿದ್ದರು. ಅಭಿಮಾನಿಗಳೊಂದಿಗೆ ತಮ್ಮ ವೈಯುಕ್ತಿಕ ಜೀವನದ ಜೊತೆಗೆ ಆಗಾಗ ಪೊಟೋಶೂಟ್ ಮಾಡುತ್ತಾ ರಂಜಿಸುತ್ತಿದ್ದರು. 2007ರಲ್ಲಿ ತೆರೆಕಂಡ ಸವಾರಿಯಾ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ ಮೊದಲನೇ ಸಿನೆಮಾದ ಮೂಲಕವೇ ಸೂಪರ್‍ ಹಿಟ್ ಪಡೆದುಕೊಂಡರು. ಬಳಿಕ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ನಟಿಸಿ ಸ್ಟಾರ್‍ ಡಮ್ ಗಿಟ್ಟಿಸಿಕೊಂಡರು.

ಇತ್ತಿಚಿಗೆ ನಡೆದ ಸಂದರ್ಶನವೊಂದರಲ್ಲಿ ಸೋನಂ ಕಪೂರ್‍ ಕೆಲವೊಂದು ಹೇಳಿಕೆಗಳನ್ನು ನೀಡಿದ್ದಾರೆ. ತಮ್ಮ ಜೀವನದಲ್ಲಿ ಎದುರಾದ ಕಹಿ ಘಟನೆಯೊಂದರ ಬಗ್ಗೆ ಬಾಯ್ಬಿಟ್ಟಿದ್ದಾರೆ. ಸಮಾಜದಲ್ಲಿ ಮಹಿಳೆಯ ಮೇಲೆ ಕಿರುಕುಳಗಳು ನಡೆಯುತ್ತಲೇ ಇರುತ್ತವೆ. ದೇಶದಲ್ಲಿ ಯಾವುದೋ ಒಂದು ಮೂಲೆಯಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿರುತ್ತದೆ. ಎಷ್ಟೇ ತಂತ್ರಜ್ಞಾನ ಬೆಳೆದರೂ, ವಿದ್ಯಾವಂತರಾದರೂ ಸಹ ಆ ವಿಚಾರದಲ್ಲಿ ಅನೇಕರು ಅಜ್ಞಾನಿಗಳೇ ಆಗಿ ಉಳಿದಿದ್ದಾರೆ. ಇನ್ನೂ ಇದನ್ನು ನಿಯಂತ್ರಣ ಮಾಡಲು ಕಠಿಣ ಕಾನೂನುಗಳು ಬಂದರೂ ಸಹ ಅಂತಹ ಕೃತ್ಯಗಳು ಮಾತ್ರ ನಡೆಯುತ್ತಲೇ ಇದೆ. ನನಗೂ ಸಹ ಪಬ್ಲಿಕ್ ನಲ್ಲಿ ಓರ್ವ ವ್ಯಕ್ತಿ ಲೈಂಗಿಕವಾಗಿ ಕಿರುಕುಳ ಕೊಟ್ಟಿದ್ದ ಎಂದು ಸೋನಂ ಹೇಳಿದ್ದಾರೆ.

ನನಗೆ ಹದಿಮೂರು ವರ್ಷ ವಯಸ್ಸಿರುವಾಗ ನಾನು ಸ್ನೇಹಿತರೊಂದಿಗೆ ಸಿನೆಮಾಗೆ ಹೋಗಿದ್ದೆ. ಥಿಯೇಟರ್‍ ನಲ್ಲಿ ವಿರಾಮದ ಸಮಯದಲ್ಲಿ ಸ್ನಾಕ್ಸ್ ಗಾಗಿ ಹೊರಗೆ ಬಂದಿದ್ದೆ. ಒಬ್ಬ ವ್ಯಕ್ತಿ ಅಲ್ಲಿ ಬಂದು ನನ್ನನ್ನು ಗಟ್ಟಿಯಾಗಿ ತಬ್ಬಿಕೊಂಡು ಎದೆಯ ಮೇಲೆ ಕೈ ಹಾಕಿ ಗಟ್ಟಿಯಾಗಿ ಒತ್ತಿದ್ದ. ಸಡನ್ ಆಗಿ ಆ ರೀತಿ ಆಗಿದ್ದಕ್ಕೆ ನಾನು ನಡುಗಿಬಿಟ್ಟೆ. ಏನು ಆಗುತ್ತಿದೆಯೋ ತಿಳಿಯದೇ ಜೋರಾಗಿ ಅತ್ತು ಬಿಟ್ಟಿದ್ದೆ. ಈ ರೀತಿ ನನಗೆ ಮಾತ್ರವಲ್ಲ ಅನೇಕ ಮಹಿಳೆಯರಿಗೆ ಇದೇ ರೀತಿ ಯಾಗಿರುತ್ತದೆ. ಅದನ್ನು ತಡೆಯಲು ಮತಷ್ಟು ಕಠಿಣ ಕಾನೂನು ಬರಬೇಕಿದೆ ಎಂದರು.

Most Popular

To Top