Film News

ಅತಿಯಾ ಶೆಟ್ಟಿ ಮದುವೆಯ ಲೆಹಂಗಾ ಡಿಸೈನ್ ಮಾಡಲು ಅಷ್ಟು ದಿನಗಳ ಕಾಲ ಶ್ರಮವಂತೆ…!

ಟೀಂ ಇಂಡಿಯಾ ಆಟಗಾರ ಕೆ.ಎಲ್. ರಾಹುಲ್ ಹಾಗೂ ಬಾಲಿವುಡ್ ಸ್ಟಾರ್‍ ನಟ ಸುನೀಲ್ ಶೆಟ್ಟಿ ಪುತ್ರಿ ಆತಿಯಾ ಶೆಟ್ಟಿ ಮದುವೆ ಜ.23 ರಂದು ಅದ್ದೂರಿಯಾಗಿ ನೆರವೇರಿದೆ. ಸುನೀಲ್ ಶೆಟ್ಟಿಯವರ ಫಾರ್ಮ್ ಹೌಸ್ ಖಂಡಾಲದಲ್ಲಿ ಅತ್ಯಂತ ವೈಭವಪೂರಿತವಾಗಿ ನೆರವೇರಿದೆ. ಇನ್ನೂ ಸುಮಾರು ವರ್ಷಗಳ ಕಾಲ ಈ ಜೋಡಿ ಪ್ರೇಮ ಪಯಣ ಸಾಗಿಸಿ ಇದೀಗ ಸಪ್ತಪದಿ ತುಳಿದಿದ್ದಾರೆ. ಇನ್ನೂ ಈ ಜೋಡಿಯ ಮದುವೆಗೆ ಅನೇಕ ಸೆಲೆಬ್ರೆಟಿಗಳು ಹಾಗೂ ಕ್ರಿಕೆಟಿಗರೂ ಸಹ ಭಾಗಿಯಾಗಿ ನವ ದಂಪಂತಿಗೆ ಶುಭ ಕೋರಿದ್ದಾರೆ.

ಇನ್ನೂ ರಾಹುಲ್ ಹಾಗೂ ಆತಿಯಾ ಸುಮಾರು ವರ್ಷಗಳ ಕಾಲ ಪ್ರೇಮ ಪಯಣ ಸಾಗಿಸಿದ್ದರು. ಬಳಿಕ ಅವರಿಬ್ಬರ ಮದುವೆ ಇಬ್ಬರೂ ಕುಟುಂಬಸ್ಥರ ಒಪ್ಪಿಗೆಯ ಮೇರೆಗೆ ನಡೆಯಿತು. ಈ ಜೋಡಿಯ ಮದುವೆ ಅದ್ದೂರಿಯಾಗಿ ನೆರವೇರಿದೆ. ಇಬ್ಬರೂ ಮದುವೆಯಲ್ಲಿ ಸಂಪ್ರದಾಯಬದ್ದವಾದ ಡ್ರೆಸ್ ನಲ್ಲಿ ಮಿಂಚಿದ್ದಾರೆ. ಇನ್ನೂ ಮದುವೆಯಾದ ಬಳಿಕ ಆತಿಯಾ ಸಹ ಮದುವೆಯ ಕೆಲವೊಂದು ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು. ಆ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಸಹ ಆಗಿತ್ತು. ಇದೀಗ ಆತಿಯಾ ಶೆಟ್ಟಿ ಧರಿಸಿದ್ದ ಲೆಹಂಗಾ ಬಗ್ಗೆ ಸುದ್ದಿಯೊಂದು ವೈರಲ್ ಆಗುತ್ತಿದೆ. ಆ ಲೆಂಹಗಾ ತಯಾರಿಸಲು ಸುಮಾರು 416 ದಿನಗಳು ಬೇಕಾಯಿತ್ತಂತೆ. ಈ ಬಗ್ಗೆ ಖ್ಯಾತ ಡಿಸೈನರ್‍ ಅನಾಮಿಕ ಕೆಲವೊಂದು ಆಸಕ್ತಿಕರವಾದ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಇನ್ನೂ ಇತ್ತೀಚಿಗೆ ಫ್ಯಾಷನ್ ಡಿಸೈನರ್‍ ಅನಾಮಿಕಾ ಖನ್ನಾ ಸಂದರ್ಶನವೊಂದರಲ್ಲಿ ಆತಿಯಾ ಲೆಹಂಗಾ ಬಗ್ಗೆ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆತಿಯಾ ಯುವರಾಣಿಯಂತೆ ಕಾಣಿಸಬೇಕೆಂದು ಡಿಸೈನರ್‍ ಗಳು ಸುಮಾರು 416 ದಿನಗಳ ಕಾಲ ತುಂಬಾನೆ ಕಷ್ಟಪಟ್ಟು ಡಿಸೈನ್ ಮಾಡಿದ್ದಾರೆ. ಈ ಲೆಹಂಗಾ ಸಂಪೂರ್ಣವಾಗಿ ಕೈಯಿಂದಲೇ ಡಿಸೈನ್ ಮಾಡಲಾಗಿದೆ. ಆಕೆಯ ಮೇಲಿನ ಅಭಿಮಾನದೊಂದಿಗೆ ಇಷ್ಟೊಂದು ಕಷ್ಟಪಟ್ಟು ಲೆಹಂಗಾ ಡಿಸೈನ್ ಮಾಡಿದ್ದಾರೆ. ಈ ಲೆಹಂಗಾ ಡಿಸೈನ್ ಮಾಡಲು ನಮ್ಮ ಡಿಸೈನರ್‍ ಗಳು ತುಂಬಾನೆ ಕಷ್ಟಪಟ್ಟಿದ್ದಾರೆ ಎಂದು ಹೇಳಿದ್ದಾರೆ. ಇನ್ನೂ ಈ ವಿಚಾರ ಹೊರಬರುತ್ತಿದ್ದಂತೆ ಅನೇಕರು ಶಾಕ್ ಸಹ ಆಗಿದ್ದಾರೆ.

ಇನ್ನೂ ರಾಹುಲ್ ಹಾಗೂ ಆತಿಯಾ ಶೆಟ್ಟಿ ಮದುವೆಗೆ ದುಬಾರಿ ಗಿಫ್ಟ್ ಗಳು ಬಂದಿದೆ ಎಂಬ ವಿಚಾರ ಸಹ ಇದೀಗ ವೈರಲ್ ಆಗುತ್ತಿದೆ.  ಆತಿಯಾ ತಂದೆ ಸುನೀಲ್ ಶೆಟ್ಟಿ ಮುಂಬೈನಲ್ಲಿ 50 ಕೋಟಿ ಬೆಲೆಯ ದುಬಾರಿ ಅಪಾರ್ಟ್‌ಮೆಂಟ್, ವಿರಾಟ್ ಕೊಹ್ಲಿ 2.17 ಕೋಟಿ ಬೆಲೆಯ ಬಿಎಂಡಬ್ಲ್ಯೂ ಕಾರು, ಸಲ್ಮಾನ್ ಖಾನ್ 1.64 ಕೋಟಿ ಬೆಲೆಯ ಆಡಿ ಕಾರು, ಅರ್ಜುನ್ ಕಪೂರ್‍ 1.5 ಕೋಟಿ ಬೆಲೆಯ ಡೈಮಂಡ್ ಬ್ಯಾಸ್‌ ಲೇಟ್, ಎಂ.ಎಸ್.ಧೋನಿ 80 ಲಕ್ಷ ಬೆಲೆಯ ಕವಾಸಕಿ ನಿಂಜಾ ಬೈಕ್ ಹೀಗೆ ಅನೇಕರು ದುಬಾರಿ ಬೆಲೆಯ ಕೊಡುಗೆಗಳನ್ನು ನೀಡಿದ್ದಾರೆ. ಈ ವಿಚಾರ ಸಹ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

Most Popular

To Top