Film News

ಜೂನಿಯರ್ ಕೊಹ್ಲಿ ಎಂಟ್ರಿ, ಮುದ್ದಾದ ಗಂಡು ಮಗುವಿಗೆ ಜನ್ಮ ಕೊಟ್ಟ ವಿರುಷ್ಕಾ ದಂಪತಿ….!

ಸ್ಟಾರ್‍ ಜೋಡಿಯಾದ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮುದ್ದಾದ ಗಂಡು ಮಗುವಿಗೆ ಅನುಷ್ಕಾ ಜನ್ಮಕೊಟ್ಟಿದ್ದಾರೆ. ಎರಡನೇ ಮಗುವಿಗೆ ವೆಲ್ ಕಂ ಕೊಟ್ಟಿದ್ದು, ಈ ಸುದ್ದಿಯನ್ನು ಸೋಷಿಯಲ್ ಮಿಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಸದ್ಯ ಈ ಸುದ್ದಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಸೇರಿದಂತೆ ಸಿನೆಮಾ ಸೆಲಬ್ರೆಟಿಗಳು ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ.

ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಎರಡನೇ ಮಗುವಿಗೆ ಜನ್ಮ ಕೊಟ್ಟಿದ್ದಾರೆ. ಫೆ.15 ರಂದು ಮುದ್ದಾದ ಗಂಡು ಮಗುವಿಗೆ ಅನುಷ್ಕಾ ಜನ್ಮ ಕೊಟ್ಟಿದ್ದಾರೆ. ಈ ಸುದ್ದಿಯನ್ನು ವಿರುಷ್ಕಾ ದಂಪತಿ ತಮ್ಮ ಸೋಷಿಯಲ್ ಮಿಡಿಯಾ ಖಾತೆಯ ಮೂಲಕ ಫೆ.20 ರಂದು ಹಂಚಿಕೊಂಡಿದ್ದಾರೆ. ಈ ಸುದ್ದಿಯ ಜೊತೆಗೆ ಅವರು ತಮ್ಮ ಮಗುವಿಗೆ ಹೆಸರನ್ನು ಸಹ ಇಟ್ಟಿದ್ದಾರೆ. ವಿರುಷ್ಕ ಮಗನ ಹೆಸರು ಅಕಾಯ್ (Akaay) ಎಂದು ನಾಮಕರಣ ಸಹ ಮಾಡಿದ್ದಾರೆ. ನಮ್ಮ ಜೀವನದಲ್ಲಿ ಇದೊಂದು ಸುಂದರವಾದ ಈ ಸಮಯದಲ್ಲಿ ನಿಮ್ಮ ಆರ್ಶಿವಾದ, ಶುಭಾಷಯಗಳು ಕೋರುತ್ತಿದ್ದೇವೆ. ಈ ಸಮಯದಲ್ಲಿ ನಮ್ಮ ಗೌಪ್ಯತೆಯನ್ನು ಗೌರವಿಸುತ್ತೀರಾ ಎಂದು ಕೋರುತ್ತಿದ್ದೇವೆ. ಪ್ರೀತಿ ಹಾಗೂ ಕೃತಜ್ಞತೆಯಿಂದ ವಿರಾಟ್ ಹಾಗೂ ಅನುಷ್ಕಾ ಎಂದು ತಮ್ಮ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಇನ್ನೂ ಇತ್ತೀಚಿಗೆ ಕೆಲವು ದಿನಗಳಿಂದ ವಿರಾಟ್ ಹಾಗೂ ಅನುಷ್ಕಾ ತಂದೆ ತಾಯಿಯಾಗುತ್ತಿದ್ದಾರೆ ಎಂಬ ಸುದ್ದಿ ಜೋರಾಗಿಯೇ ಹರಿದಾಡುತ್ತಿತ್ತು. ಇದೀಗ ಈ ಸುದ್ದಿ ಖಚಿತವಾಗಿದೆ. ಕಳೆದ 2017ರಲ್ಲಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಮದುವೆಯಾಗಿತ್ತು. 2021 ರಲ್ಲಿ ಈ ಜೋಡಿ ಮೊದಲ ಮಗುವನ್ನು ಪಡೆದುಕೊಂಡಿತ್ತು. ಮೊದಲ ಹೆಣ್ಣು ಮಗುವಿಗೆ ವಾಮಿಕ ಎಂದು ನಾಮಕರಣ ಮಾಡಿದ್ದರು. ಇದೀಗ ಎರಡನೇ ಮಗುವಿಗೆ ಜನ್ಮ ಕೊಟ್ಟಿದ್ದು, ಮಗನಿಗೆ ಅಕಾಯ್ ಎಂದು ಹೆಸರಿಟ್ಟಿದ್ದಾರೆ. ಈ ಸುದ್ದಿಯನ್ನು ಕೇಳಿದ ಅವರ ಫಾಲೋವರ್ಸ್, ಅಭಿಮಾನಿಗಳು ಸೇರಿದಂತೆ ಅನೇಕರು ಶುಭಾಷಯಗಳನ್ನು ಕೋರುತ್ತಿದ್ದಾರೆ.

Most Popular

To Top