ನನ್ನ ಮಗನಿಗೆ ಅದೇ ಸಿನೆಮಾ ತೋರಿಸುತ್ತೇನೆ ಎಂದ ಚಂದಮಾಮ ಕಾಜಲ್ ಅಗರ್ವಾಲ್…!

Follow Us :

ಸೌತ್ ಸಿನಿರಂಗದ ಸ್ಟಾರ್‍ ನಟಿ ಕಾಜಲ್ ಅಗರ್ವಾಲ್ ಸದ್ಯ ಬ್ಯಾಕ್ ಟು ಬ್ಯಾಕ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದು, ಮಗುವಿನೊಂದಿಗೆ ಸಂತಸದಿಂದ ಕಾಲ ಕಳೆಯುತ್ತಿದ್ದಾರೆ. ಸೌತ್ ನಲ್ಲಿ ಹೆಚ್ಚಾಗಿ ತೆಲುಗು ಸಿನೆಮಾಗಳಲ್ಲಿ ನಟಿಸಿದ ಕಾಜಲ್ ನಟನೆಗೆ ಪ್ರಾಧನ್ಯತೆಯಿರುವ ಪಾತ್ರಗಳಲ್ಲೆ ಹೆಚ್ಚಾಗಿ ಕಾಣಿಸಿಕೊಂಡರು. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ಕಾಜಲ್ ತನ್ನ ಮಗನ ಪೊಟೋಗಳನ್ನು ಆಗಾಗ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ತನ್ನ ಮಗಳಿಗೆ ಕಾಜಲ್ ಆ ಸಿನೆಮಾ ಮಾತ್ರ ತೋರಿಸುವುದಾಗಿ ಹೇಳಿದ್ದಾರೆ.

ನಟಿ ಕಾಜಲ್ ಅಗರ್ವಾಲ್ ಇದೀಗ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಮದುವೆ, ಮಗು ಕಾರಣದಿಂದ ಸಿನೆಮಾಗಳಿಂದ ದೂರವುಳಿದ ಕಾಜಲ್ ಇದೀಗ ಸಿನೆಮಾಗಳಲ್ಲಿ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ಕಳೆದ 2020 ರಲ್ಲಿ ತನ್ನ ಸ್ನೇಹಿತ ಗೌತಮ್ ಕಿಚ್ಲು ಎಂಬಾತನನ್ನು ಮದುವೆಯಾದರು. ಇನ್ನೂ ಕಾಜಲ್ ಪತ್ನಿಯಾಗಿ, ತಾಯಿಯಾಗಿ ವೈವಾಹಿಕ ಜೀವನವನ್ನು ಹಾಗೂ ಸಿನೆಮಾಗಳನ್ನು ಸಹ ಬ್ಯಾಲೆನ್ಸ್ ಮಾಡುತ್ತಿದ್ದಾರೆ. ತನ್ನ ಮಗನಿಗೆ ನೀಲ್ ಕಿಚ್ಲು ಎಂದು ಹೆಸರನ್ನಿಟ್ಟಿದ್ದಾರೆ. ಇನ್ನೂ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿರುವ ಕಾಜಲ್ ಸದ್ಯ ಇಂಡಿಯನ್-2, ನಂದಮೂರಿ ಬಾಲಕೃಷ್ಣ ಜೊತೆಗೆ NBK108 ಸಿನೆಮಾದ ಜೊತೆಗೆ ಆಕೆಯ ಕೈಯಲ್ಲಿ ಮತಷ್ಟು ಸಿನೆಮಾಗಳಿವೆ. ಇದೀಗ ಆಕೆ ತನ್ನ ಮಗನ ಬಗ್ಗೆ ಕೆಲವೊಂದು ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಮಗನ ಬಗ್ಗೆ ಕೆಲವೊಂದು ವಿಚಾರಗಳನ್ನು ಹಂಚಿಕೊಂಡ ಕಾಜಲ್ ಮಗನಿಗೆ ಎಂಟು ವರ್ಷ ತುಂಬುವ ವರೆಗೂ ಸಿನೆಮಾಗಳಿಂದ ದೂರ ಇರಿಸಲು ನಿರ್ಣಯ ತೆಗೆದುಕೊಂಡಿದ್ದಾರಂತೆ. ಜೊತೆಗೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಸಹ ನೀಡದೇ ಇರಲು ತೀರ್ಮಾನಿಸಿದ್ದಾರಂತೆ. ಇನ್ನೂ ನೀಲ್ ಸಿನೆಮಾ ನೋಡುವ ವೇಳೆಗೆ ಆತನಿಗೆ ಮೊದಲು ತುಪಾಕಿ ಸಿನೆಮಾ ತೋರಿಸುತ್ತಾರಂತೆ. ಈ ಸಿನೆಮಾದಲ್ಲಿ ಕಾಜಲ್ ಹಾಗೂ ವಿಜಯ್ ನಟಿಸಿದ್ದಾರೆ. ಇನ್ನೂ ಈ ಸಿನೆಮಾವನ್ನೇ ಏಕೆ ತೊರಿಸಲು ತೀರ್ಮಾನಿಸಿದ್ದಾರೆ ಎಂಬ ವಿಚಾರ ಮಾತ್ರ ಕಾಜಲ್ ತಿಳಿಸಿಲ್ಲ. ಆದರೆ ಈ ಸಿನೆಮಾ ದೇಶಭಕ್ತಿಯಿಂದ ಕೂಡಿದ ಹಿನ್ನೆಲೆಯಲ್ಲಿ ಈ ಸಿನೆಮಾ ತೋರಿಸಲಿದ್ದಾರೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ.

ಸದ್ಯ ಕಾಜಲ್ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದು, ಶಂಕರ್‍ ಹಾಗೂ ಕಮಲ್ ಹಾಸನ್ ಕಾಂಬಿನೇಷನ್ ನಲ್ಲಿ ತೆರೆಕಾಣಲಿರುವ ಇಂಡಿಯನ್-2 ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಅದೇ ರೀತಿ ನಂದಮೂರಿ ಬಾಲಕೃಷ್ಣ ಹಾಗೂ ಅನೀಲ್ ರಾವಿಪೂಡಿ ಕಾಂಬಿನೇಷನ್ ನಲ್ಲಿ ತೆರೆಕಾಣಲಿರುವ NBK108 ಸಿನೆಮಾದಲ್ಲೂ ಸಹ ಕಾಜಲ್ ಅಗರ್ವಾಲ್ ನಟಿಸುತ್ತಿದ್ದು, ಈ ಸಿನೆಮಾಗಾಗಿ ಆಕೆ ಭಾರಿ ಮೊತ್ತದ ಸಂಭಾವನೆ ಸಹ ಪಡೆದುಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.