ನಾನು ಆ ನಟನೊಂದಿಗೆ ಮಾತ್ರ ಮನಸ್ಸು ಬಿಚ್ಚಿ ಮಾತನಾಡುತ್ತೇನೆ ಎಂದ ದೀಪಿಕಾ, ರಣವೀರ್ ಕಥೆ ಏನು ಎಂದ ನೆಟ್ಟಿಗರು….!

ಬಾಲಿವುಡ್ ಸ್ಟಾರ್‍ ನಟಿ ದೀಪಿಕಾ ಪಡುಕೋಣೆ ಮದುವೆಯಾದ ಬಳಿಕವೂ ಸಹ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. ಅದರಲ್ಲೂ ಸಿನೆಮಾಗಳಲ್ಲಿ ಬೋಲ್ಡ್ ಆಗಿಯೇ ನಟಿಸುತ್ತಿದ್ದಾರೆ. ಇದೀಗ ದೀಪಿಕಾ ಸಿನೆಮಾ ವಿಚಾರಗಳ ಜೊತೆಗೆ ಕೆಲವೊಂದು ವೈಯುಕ್ತಿಕ ವಿಚಾರಗಳ ಬಗ್ಗೆ ಸಹ ಮಾತನಾಡಿದ್ದಾರೆ. ಅದರಲ್ಲೂ ಆಕೆ ಮನಸ್ಸು ಬಿಚ್ಚಿ ಮಾತನಾಡುವುದು ಆ ನಟನೊಂದಿಗೆ ಎಂದು ಹೇಳಿದ್ದು, ಈ ಹೇಳಿಕೆಗೆ ವಿವಿಧ ರೀತಿಯ ಕಾಮೆಂಟ್ ಗಳು ಹರಿದಾಡುತ್ತಿವೆ.

ಬಾಲಿವುಡ್ ಸ್ಟಾರ್‍ ಬ್ಯೂಟಿ ದೀಪಿಕಾ ಪಡುಕೋಣೆ, ಸಂಪಾದನೆ, ಸಿನಿಮಾ ಪ್ರಯಾಣ, ಉಳಿತಾಯ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಈ ಕುರಿತು ಮಾತನಾಡುತ್ತಾ ನಾನು ಸದ್ಯ ನಟಿಯಾಗಿರಬಹುದು ಆದರೆ ನಾನು ಮೂಲತಃ ಕ್ರೀಡಾಪಟು. ಆದ್ದರಿಂದ ಜೀವನವನ್ನು ಸಹ ಒಂದು ಆಟದ ಮಾದರಿಯಲ್ಲಿ ಕಾಣುತ್ತೇನೆ. ಈ ಪ್ರಪಂಚವನ್ನು ಕ್ರೀಡಾಂಗಣವೆಂದು ಭಾವಿಸುತ್ತೇನೆ. ಸೋಲನ್ನು ಸಹ ಗೌರವದಿಂದ ಸ್ವೀಕರಿಸುತ್ತೇನೆ. ಆಟದ ಮೈದಾನ ಜೀವನಕ್ಕೆ ಸರಿಹೊಂದುವಂತಹ ಪಾಠಗಳನ್ನು ಕಲಿಸುತ್ತದೆ. ಮುಖ್ಯವಾಗಿ ಶಿಸ್ತು ಸಂಯಮ ಬೆಳೆಸುತ್ತದೆ. ಈ ರಂಗದಲ್ಲಿ ನನಗಿಂತ ಚೆನ್ನಾಗಿ ನಟಿಸುವಂತಹವರು ಇರಬಹುದು. ಆದರೆ ಶಿಸ್ತಿನಲ್ಲಿ ನನ್ನಷ್ಟು ಯಾರು ಇಲ್ಲ ಎಂಬ ಆತ್ಮವಿಶ್ವಾಸ ನನ್ನಲ್ಲಿ ತುಂಬಾನೆ ಇದೆ ಎಂದಿದ್ದಾರೆ.

ಇನ್ನೂ ಕುಟುಂಬದಲ್ಲಿ ಸಿನೆಮಾಗಳ ಬಗ್ಗೆ ನಾನು ಚರ್ಚೆ ಮಾಡೋಲ್ಲ. ವೃತ್ತಿ ಜೀವನ, ವೈಯುಕ್ತಿಕ ಜೀವನ ಬೇರೆಯಾಗಿಯೇ ನೋಡುತ್ತೇನೆ. ಸಿನೆಮಾ ಶೂಟಿಂಗ್ ನಲ್ಲಿರುವಾಗ ಕುಟುಂಬದ ವಿಚಾರಗಳ ಬಗ್ಗೆ ಮಾತಾಡೋಲ್ಲ, ಸಿನೆಮಾ ವಿಚಾರಗಳು ಮನೆಯ ಡೈನಿಂಗ್ ಟೇಬಲ್ ವರೆಗೂ ಸಹ ಬರೊಲ್ಲ. ಆದರೆ ಸಿನೆಮಾ ವಿಚಾರಗಳನ್ನು ರಣವೀರ್‍ ಜೊತೆಗೆ ಮಾತ್ರ ಚರ್ಚೆ ಮಾಡುತ್ತೇನೆ. ಒಂದು ವೇಳೆ ಆತ ಸಿನೆಮಾ ರಂಗಕ್ಕೆ ಸೇರಿದವನಾಗದಿದ್ದರೇ ಅದನ್ನೂ ಸಹ ಮಾಡುತ್ತಿರಲಿಲ್ಲ. ಇನ್ನೂ ನಾನು ಬಾಲಿವುಡ್ ನಲ್ಲಿ ಮನಸ್ಸು ಬಿಚ್ಚಿ ಮಾತನಾಡುವುದು ನಟ ಶಾರುಖ್ ಖಾನ್ ರವರ ಜೊತೆಗೆ ಮಾತ್ರ ಎಂದಿದ್ದಾರೆ. ಇನ್ನೂ ದೀಪಿಕಾ ಪಡುಕೋಣೆ ಈ ಕಾಮೆಂಟ್ ಕೇಳಿದ ನೆಟ್ಟಿಗರು ಪಾಪ ರಣವೀರ್‍ ಕಥೆ ಏನು ಎಂದು ಕೌಂಟರ್‍ ಹಾಕುತ್ತಿದ್ದಾರೆ.

ಅಷ್ಟೇಅಲ್ಲದೇ ಡ್ರೆಸ್ಸಿಂಗ್ ಕುರಿತು ಸಹ ಅಭಿಪ್ರಾಯ ತಿಳಿಸಿದ್ದಾರೆ. ಸೌಂದರ್ಯವಾಗಿ ಅಲಂಕಾರ ಮಾಡಿಕೊಳ್ಳುವುದು ನನ್ನಿಷ್ಟ, ಅದು ನನ್ನ ಮನಸ್ಸಿನ ಇಷ್ಟ. ಸೋಷಿಯಲ್ ಮಿಡಿಯಾದಲ್ಲಿ ಎದುರಾಗುವಂತಹ ಟ್ರೋಲ್ ಗಳನ್ನು ನಾನು ಕಿವಿಗೆ ಸಹ ಹಾಕಿಕೊಳ್ಳಲ್ಲ. ಯಾರೋ ಏನೋ ಹೇಳಿದ್ದಾರೆಂದು ತಲೆಗೆಡಿಸಿಕೊಳ್ಳಲ್ಲ ಎಂದಿದ್ದಾರೆ. ಇನ್ನೂ ದೀಪಿಕಾ ಪಠಾನ್ ಸಿನೆಮಾದಲ್ಲಿ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾ ಭಾರಿ ಕಲೆಕ್ಷನ್ ಪಡೆದುಕೊಂಡು ಭಾರಿ ಸಕ್ಸಸ್ ಸಹ ಕಂಡಿದೆ.