Film News

ಸ್ಟಾರ್ ಬ್ಯೂಟಿ ದೀಪಿಕಾ ಪಡುಕೋಣೆ ಕಿಲ್ಲಿಂಗ್ ಲುಕ್ಸ್, ಕಣ್ಣುಗಳ ಮೂಲಕವೇ ಯುವಕರ ಹೃದಯ ಕದ್ದ ನಟಿ…..!

ಮದುವೆಯಾದರೂ ಸಹ ಭಾರಿ ಸಂಭಾವನೆಯ ಜೊತೆಗೆ ಸಿನೆಮಾಗಳಲ್ಲಿ ಅವಕಾಶಗಳನ್ನು ಪಡೆದುಕೊಳ್ಳುತ್ತಿರುವ ನಟಿಯರ ಸಾಲಿಗೆ ಸ್ಟಾರ್‍ ನಟಿ ದೀಪಿಕಾ ಪಡುಕೋಣೆ ಸಹ ಸೇರುತ್ತಾರೆ. ಮದುವೆಯಾದ ಬಳಿಕವೂ ಆಕೆಗೆ ಅನೇಕ ಸಿನೆಮಾಗಳಲ್ಲಿ ನಟಿಸುವ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ.  ಅದರಲ್ಲೂ ಅನೇಕ ಸಿನೆಮಾಗಳಲ್ಲಿ ಆಕೆ ತುಂಬಾ ರೊಮ್ಯಾಂಟಿಕ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಆಕೆ ಪ್ರಭಾಸ್ ಜೊತೆಗೆ ಆಕೆ ಪ್ರಾಜೆಕ್ಟ್ ಕೆ ಎಂಬ ಪ್ಯಾನ್ ವರ್ಲ್ಡ್ ಸಿನೆಮಾದಲ್ಲಿ ನಟಿಸುತ್ತಿದ್ದು, ಈ ಸಿನೆಮಾದ ಶೂಟಿಂಗ್ ಸಹ ಭರದಿಂದ ಸಾಗುತ್ತಿದೆ. ಬಾಲಿವುಡ್ ಕ್ವೀನ್ ದೀಪಿಕಾ ಪಡುಕೋಣೆ ಕ್ರೇಜ್ ಇದೀಗ ವಿಶ್ವದಾದ್ಯಂತ ವ್ಯಾಪಿಸಿದೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಹಾಟ್ ಪೊಟೋಶೂಟ್ಸ್ ಮೂಲಕ ಭಾರಿ ಕ್ರೇಜ್ ಪಡೆದುಕೊಂಡಿದ್ದಾರೆ.

ನಟಿ ದೀಪಿಕಾ ಪಡುಕೋಣೆ ಇತ್ತಿಚಿಗಷ್ಟೆ ತೆರೆಕಂಡ ಪಠಾನ್ ಸಿನೆಮಾದಲ್ಲಿ ಶಾರುಖ್ ಖಾನ್ ಜೊತೆಗೆ ನಟಿಸಿದ್ದರು. ಈ ಸಿನೆಮಾ ಭಾರಿ ಸಕ್ಸಸ್ ತಂದುಕೊಟ್ಟಿತ್ತು. ಬರೊಬ್ಬರಿ 500 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಸಿನೆಮಾದಲ್ಲಿ ಆಕೆ ತುಂಬಾನೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಈ ಸಿನೆಮಾದಲ್ಲಿನ ಬೇಷರಮ್ ಹಾಡಿನಲ್ಲಿ ಆಕೆ ಬಿಕಿನಿಯಲ್ಲಿ ಬೋಲ್ಡ್ ಆಗಿ ನೃತ್ಯ ಮಾಡಿದ್ದರು. ಈ ಹಾಡಿನ ಬಗ್ಗೆ ದೊಡ್ಡ ವಿವಾದ ಸಹ ಸೃಷ್ಟಿಯಾಗಿತ್ತು. ಆಕೆ ಕೇಸರಿ ಬಣ್ಣದ ಬಿಕಿನಿ ಧರಿಸಿದ್ದು, ಇದು ಹಿಂದೂಗಳನ್ನು ಕೆರಳಿಸಿದೆ ಎಂದು ಅನೇಕರು ಈ ಹಾಡಿನ ವಿರುದ್ದ ಕಿಡಿ ಕಾರಿದರು. ಸಿನೆಮಾ ಬ್ಯಾನ್ ಮಾಡಬೇಕೆಂಬ ಕೂಗು ಸಹ ಕೇಳಿಬಂತು. ವಿವಾದಗಳ ನಡುವೆಯೇ ಈ ಸಿನೆಮಾ ಭಾರಿ ಸಕ್ಸಸ್ ಕಂಡಿದೆ. ಇನ್ನೂ ಆಕೆ ಸದಾ ಒಂದಲ್ಲ ಒಂದು ಕಾರಣದಿಂದ ಸುದ್ದಿಯಾಗುತ್ತಲೇ ಇರುತ್ತಾರೆ. ಅನೇಕ ಸಂದರ್ಶನಗಳಲ್ಲಿ ಭಾಗಿಯಾಗುತ್ತಾ ಅಲ್ಲಿ ಕೆಲವೊಂದು ವಿವಾದಗಳನ್ನು ಹುಟ್ಟಿಹಾಕುತ್ತಿರುತ್ತಾರೆ.

ಇನ್ನೂ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುವ ದೀಪಿಕಾ ಆಗಾಗ ಕೆಲವೊಂದು ಹಾಟ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಲೇ ಇರುತ್ತಾರೆ. ಆಕೆ ಹಂಚಿಕೊಳ್ಳುವಂತಹ ಪೊಟೋಗಳು ಸಹ ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿರುತ್ತವೆ. ಈ ಹಾದಿಯಲ್ಲೇ ಆಕೆ ಕೆಲವೊಂದು ಪೋಟಗಳನ್ನು ಹಂಚಿಕೊಂಡಿದ್ದು, ಪೊಟೋಗಳು ಸಖತ್ ವೈರಲ್ ಆಗಿದೆ. ನಾಗಿನಿಯಂತೆ ಆಕೆಯ ಮಾದಕ ಲುಕ್ಸ್ ಕೊಟ್ಟಿದ್ದಾರೆ. ಮಾದಕ ನೋಟದ ಜೊತೆಗೆ ಕ್ಯೂಟ್ ಸ್ಮೈಲ್ ಸಹ ಕೊಟ್ಟಿದ್ದಾರೆ. ಇನ್ನೂ ಆಕೆಯ ಈ ಪೊಟೋಗಳ ಮೂಲಕ  ದೀಪಿಕಾ ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ. ಇನ್ನೂ ಆಕೆಯ ಅಭಿಮಾನಿಗಳು ಹಾಗೂ ನೆಟ್ಟಿಗರೂ ಸಹ ಹಾಟ್ ಕಾಮೆಂಟ್ ಗಳ ಜೊತೆಗೆ ಲೈಕ್ ಗಳನ್ನು ಸಹ ಹರಿಬಿಡುತ್ತಿದ್ದಾರೆ.

ಇನ್ನೂ ನಟಿ ದೀಪಿಕಾ ಪಡುಕೋಣೆ ಪ್ರಾಜೆಕ್ಟ್ ಕೆ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದಲ್ಲಿ ಪ್ರಭಾಸ್ ಗೆ ಜೋಡಿಯಾಗಿ ದೀಪಿಕಾ ಕಾಣಿಸಿಕೊಳ್ಳಲಿದ್ದಾರೆ. ಶೂಟಿಂಗ್ ಸಮಯದಲ್ಲಿ ದೀಪಿಕಾ ಅನಾರೋಗ್ಯಕ್ಕೆ ಗುರಿಯಾದ ಹಿನ್ನೆಲೆಯಲ್ಲಿ ಶೂಟಿಂಗ್ ಸಹ ನಿಲ್ಲಿಸಲಾಗಿತ್ತು. ಈ ಸಿನೆಮಾ ಮುಂದಿನ ಸಂಕ್ರಾಂತಿ ಹಬ್ಬದಂದು ಅದ್ದೂರಿಯಾಗಿ ತೆರೆಕಾಣಲಿದೆ. ಇನ್ನೂ ರಣಬೀರ್‍ ಸಿಂಗ್ ಜೊತೆಗೆ ದೀಪಿಕಾ ಮದುವೆಯಾಗಿ ನಾಲ್ಕು ವರ್ಷಗಳು ಕಳೆಯುತ್ತಾ ಬಂದಿದ್ದು, ಇಬ್ಬರೂ ತಮ್ಮ ತಮ್ಮ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Most Popular

To Top