Film News

ನಾನು ಹಾಕಿಕೊಳ್ಳುವ ಡ್ರೆಸ್ ಗಳ ಬಗ್ಗೆ ನನ್ನ ಮಗ ನೇರವಾಗಿಯೇ ಚೆನ್ನಾಗಿಲ್ಲ ಎನ್ನುತ್ತಾನೆ ಎಂದ ಅನಸೂಯ….!

ನಟಿ ಅನಸೂಯ ಭಾರದ್ವಾಜ್ ಸದಾ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ. ಜಬರ್ದಸ್ತ್ ಶೋ ಮೂಲಕ ಭಾರಿ ಫೇಂ ಪಡೆದುಕೊಂಡ ಅನಸೂಯ ಇದೀಗ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿದ್ದು, ಪೊಟೋಶೂಟ್ಸ್ ಹಾಗೂ ಕೆಲವೊಂದು ವಿವಾದಾತ್ಮಕ ಹೇಳಿಕೆಗಳ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಅದರಲ್ಲೂ ಆಕೆ ಧರಿಸುವಂತಹ ಡ್ರೆಸ್ ಗಳ ಮೂಲಕವೂ ಸಹ ಟ್ರೋಲ್ ಗಳಿಗೆ ಗುರಿಯಾಗುತ್ತಿರುತ್ತಾರೆ. ಇದೀಗ ಅನಸೂಯ ಮಗ ಸಹ ಆಕೆ ಧರಿಸುವ ಬಟ್ಟೆಗಳ ಬಗ್ಗೆ ಕಾಮೆಂಟ್ ಮಾಡುತ್ತಾನಂತೆ. ಈ ವಿಚಾರವನ್ನುಆಕೆಯೇ ಹೇಳಿಕೊಂಡಿದ್ದಾರೆ.

ಸ್ಟಾರ್‍ ಬ್ಯೂಟಿ ಅನಸೂಯ ಕಿರುತೆರೆಗೆ ಗುಡ್ ಬೈ ಹೇಳಿ ಸಂಪೂರ್ಣವಾಗಿ ಸಿನೆಮಾಗಳ ಮೇಲೆ ಪೋಕಸ್ ಇಟ್ಟಿದ್ದಾರೆ. ಅನೇಕ ಸಿನೆಮಾಗಳ ಮೂಲಕ ಮತಷ್ಟು ಫೇಂ ಪಡೆದುಕೊಳ್ಳುತ್ತಿದ್ದಾರೆ. ಸ್ಟಾರ್‍ ನಟರ ಸಿನೆಮಾಗಳ ಜೊತೆಗೆ ಕೆಲವೊಂದು ಸಿನೆಮಾಗಳಲ್ಲಿ ಪ್ರಮುಖ ಪಾತ್ರಗಳ ಎಲ್ಲರನ್ನೂ ರಂಜಿಸುತ್ತಾ ಬೇಡಿಕೆಯನ್ನು ಸಹ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅಷ್ಟೇಅಲ್ಲದೇ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುತ್ತಾರೆ. ಮೊದಲಿಗೆ ಆಕೆ ಅಷ್ಟೊಂದು ಗ್ಲಾಮರ್‍ ಪ್ರದರ್ಶನ ಮಾಡುತ್ತಿರಲಿಲ್ಲ. ಆದರೆ ಇದೀಗ ಆಕೆ ಬಾಲಿವುಡ್ ನಟಿಯರಂತೆ ಕೊಂಚ ಓವರ್‍ ಆಗಿಯೇ ಸ್ಕಿನ್ ಶೋ ಮಾಡುತ್ತಿದ್ದಾರೆ. ಇತ್ತೀಚಿಗೆ ಆಕೆ ಬಿಕಿನಿಯಲ್ಲಿ ಸಹ ಕಾಣಿಸಿಕೊಂಡು ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದರು. ಆಕೆ ಹಂಚಿಕೊಳ್ಳುವಂತಹ ಪೊಟೋಶೂಟ್ಸ್ ಗೆ ಅನೇಕರು ಟ್ರೋಲ್‌ ಸಹ ಮಾಡುತ್ತಿರುತ್ತಾರೆ. ಆಕೆ ಟ್ರೋಲ್ ಗಳಿಗೂ ಸಹ ಕೌಂಟರ್‍ ಕೊಡುತ್ತಲೇ ಇರುತ್ತಾರೆ.

ನಟಿ ಅನಸೂಯ ಹಂಚಿಕೊಳ್ಳುವಂತಹ ಪೊಟೋಶೂಟ್ಸ್ ಕಾರಣದಿಂದ ಅನೇಕರು ಆಕೆಯನ್ನು ಟ್ರೋಲ್ ಮಾಡುತ್ತಿರುತ್ತಾರೆ. ಇದೀಗ ಆಕೆ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ತನ್ನ ವಸ್ತ್ರಗಳ ಬಗ್ಗೆ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದಾರೆ. ಆಕೆ ಧರಿಸುವ ಬಟ್ಟೆಗಳ ಬಗ್ಗೆ ತಮ್ಮ ಮಕ್ಕಳ ಅಭಿಪ್ರಾಯ ಏನು ಎಂಬುದರ ಬಗ್ಗೆ ತಿಳಿಸಿದ್ದಾರೆ. ಇನ್ನೂ ಅನಸೂಯ ಮನೆಯಲ್ಲೂ ಸಹ ಶಾರ್ಟ್ ಡ್ರೆಸ್ ಧರಿಸುತ್ತಿರುತ್ತಾರೆ. ಜೊತೆಗೆ ಎಲ್ಲಿಗಾದರೂ ಆಕೆ ಶಾರ್ಟ್ ಡ್ರೆಸ್ ಧರಿಸಿ ಹೋದರೇ  ಆಕೆಯ ದೊಡ್ಡ ಮಗ ಕೂಡಲೇ ಮುಖದ ಮೇಲಯೇ ಡ್ರೆಸ್ ಚೆನ್ನಾಗಿಲ್ಲ ಎಂದು ಹೇಳುತ್ತಾನಂತೆ. ಮಮ್ಮಿ ಏನು ಆ ಡ್ರೆಸ್ ದೊಡ್ಡ ಡ್ರೆಸ್ ಹಾಕಿಕೊಳ್ಳಬಾರದೆ ಎಂದು ಸಲಹೆ ನೀಡುತ್ತಾನಂತೆ. ಆಕೆ ಸಹ ಅದು ನನ್ನ ಇಷ್ಟ. ನಾನು ಇಷ್ಟ ಬಂದಂತೆ ಬಟ್ಟೆಗಳನ್ನು ಹಾಕಿಕೊಳ್ಳುತ್ತೇನೆ ಎಂದು ಮಗನಿಗೆ ಅರ್ಥವಾಗುವ ರೀತಿಯಲ್ಲಿ ಹೇಳುತ್ತಾರಂತೆ.

ಇನ್ನೂ ಅನಸೂಯ ನೀಡಿದ ಈ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ. ಈ ರೀತಿಯಾಗಿ ಅನಸೂಯ ಸದಾ ಒಂದಲ್ಲ ಒಂದು ಕಾರಣದಿಂದ ಸುದ್ದಿಯಲ್ಲೇ ಇರುತ್ತಾರೆ. ನಟಿ ಅನಸೂಯ ಅಗತ್ಯ ಬಿದ್ದರೇ ಬೋಲ್ಡ್ ಪಾತ್ರದಲ್ಲೂ ಸಹ ನಟಿಸಲು ಸಿದ್ದರಿರುತ್ತಾರೆ. ಇನ್ನೂ ಅನಸೂಯ ಕೊನೆಯದಾಗಿ ವಿಮಾನಂ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನೆಮಾದಲ್ಲಿ ಆಕೆ ವೇಶ್ಯೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಆಕೆ ಪುಷ್ಪಾ-2 ಸಿನೆಮಾದಲ್ಲಿ ನಟಿಸುತ್ತಿದ್ದಾರೆ.

Most Popular

To Top