Film News

ಮೆಗಾ ಪ್ರಿನ್ಸ್ ವರುಣ್ ಜೊತೆಗೆ ರೊಮ್ಯಾನ್ಸ್ ಮಾಡಲಿದ್ದಾರೆ ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್….!

ಟಾಲಿವುಡ್ ಮೆಗಾ ಪ್ರಿನ್ಸ್ ವರುಣ್ ತೇಜ್ ಖ್ಯಾತ ನಿರ್ದೇಶಕ ಪ್ರವೀಣ್ ಸತ್ತಾರ್‍ ನಿರ್ದೇಶನದಲ್ಲಿ ಗಾಂಢೀವದಾರಿ ಅರ್ಜುನ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾದ ಶೂಟಿಂಗ್ ಈಗಾಗಲೇ ಶುರುವಾಗಿದೆ. ಈ ಸಿನೆಮಾ ತುಂಬಾನೆ ಆಕ್ಷನ್ ಕಥೆಯನ್ನು ಆಧರಿಸಿ ಸೆಟ್ಟೇರುತ್ತಿದೆ. ಹಾಗಂತ ಅದು ರೊಟೀನ್ ಆಕ್ಷನ್ ಸಿನೆಮಾ ಅಲ್ಲ ಬದಲಿಗೆ ಇದೊಂದು ವಿಭಿನ್ನವಾದ ಆಕ್ಷನ್ ಸಿನೆಮಾ ಆಗಿದೆ. ಈ ಸಿನೆಮಾದಲ್ಲಿ ವರುಣ್ ತೇಜ್ ತುಂಬಾ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಿನೆಮಾದ ಜೊತೆಗೆ ಮತ್ತೊಂದು ಸಿನೆಮಾದಲ್ಲೂ ಸಹ ವರುಣ್ ನಟಿಸುತ್ತಿದ್ದಾರೆ.

ನಟ ವರುಣ್ ತೇಜ್ ಹಾಗೂ ಶಕ್ತಿ ಪ್ರತಾಪ್ ಸಿಂಗ್ ಕಾಂಬಿನೇಷನ್ ನಲ್ಲಿ ಸಿನೆಮಾ ಒಂದನ್ನು ಘೋಷಣೆ ಮಾಡಲಾಗಿತ್ತು. ಇಂಡಿಯನ್  ವಾಯು ಸೇನೆಯ ನೇಪಥ್ಯದಲ್ಲಿ ಈ ಸಿನೆಮಾ ತೆರೆಗೆ ಬರಲಿದೆ. ಈ ಸಿನೆಮಾದ ಒಂದು ಶೆಡ್ಯೂಲ್ಡ್ ಸಹ ಮುಗಿದಿದೆ. ಇನ್ನೂ ಈ ಸಿನೆಮಾವನ್ನು ಸೋನಿ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿದೆ. ಕೆಲವೊಂದು ನಿಜ ಘಟನೆಗಳನ್ನು ಆಧರಿಸಿ ಈ ಸಿನೆಮಾ ತೆರೆಗೆ ಬರಲಿದೆ. ಇನ್ನೂ ಆಗಸದಲ್ಲಿ ಮೈನೆವರೇಳಿಸುವಂತಹ ಕೆಲವೊಂದು ಆಕ್ಷನ್ ದೃಶ್ಯಗಳು ಈ ಸಿನೆಮಾದಲ್ಲಿವೆ ಎನ್ನಲಾಗಿದೆ. ಇದೀಗ ಈ ಸಿನೆಮಾ ತಂಡ ಬ್ರೇಕಿಂಗ್ ಅಪ್ಡೇಟ್ ನೀಡಿದೆ. ಈ ಸಿನೆಮಾದಲ್ಲಿ ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್‍ ಹಿರೋಯಿನ್ ಆಗಿ ನಟಿಸಲಿದ್ದಾರೆ ಎಂಬ ಸುದ್ದಿಯನ್ನು ರಿವೀಲ್ ಮಾಡಿದ್ದಾರೆ.

ನಟಿ ಮಾನುಷಿ ಚಿಲ್ಲರ್‍ ಕಳೆದ 2017 ರಲ್ಲಿ ಮಿಸ್ ವರ್ಲ್ಡ್ ಕಿರೀಟವನ್ನು ಮುಡಿಗೇರಿಸಿಕೊಂಡರು. ಆದರೂ ಸಹ ಈಕೆಗೆ ಒಳ್ಳೆಯ ಆಫರ್‍ ಗಳು ಮಾತ್ರ ಇನ್ನೂ ಬರಲಿಲ್ಲ. ಬಾಲಿವುಡ್ ನಲ್ಲಿ ಅಕ್ಷಯ್ ಕುಮಾರ್‍ ಜೊತೆಗೆ ಪೃಥ್ವಿರಾಜ್ ಚೌಹಾಣ್ ಸಿನೆಮಾದಲ್ಲಿ ನಟಿಸಿದ್ದರು. ಆದರೆ ಈ ಸಿನೆಮಾ ಮಾತ್ರ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು. ಈ ಸಿನೆಮಾದ ಮೇಲೆ ಮಾನುಷಿ ಸಹ ತುಂಬಾನೆ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಆದರೆ ಆಕೆಯ ನಿರೀಕ್ಷೆ ಸಂಪೂರ್ಣವಾಗಿ ಹುಸಿಯಾಗಿತ್ತು. ಬಳಿಕ ಆಕೆಗೆ ಅವಕಾಶಗಳೂ ಸಹ ಅಷ್ಟೊಂದು ಬರಲಿಲ್ಲ ಎಂದೂ ಸಹ ಹೇಳಲಾಗುತ್ತಿದೆ.

ಇದೀಗ ಸೌತ್ ಸಿನೆಮಾಗಳತ್ತ ಮುಖ ಮಾಡಿರುವ ಮಾನುಷಿ ಚಿಲ್ಲರ್‍ ನಟ ವರುಣ್ ತೇಜ್ ರವರ ಸಿನೆಮಾದಲ್ಲಿ ನಟಿಸಲಿದ್ದಾರೆ. ಈ ಸಿನೆಮಾದಲ್ಲಿ ಮಾನುಷಿ ರಾಡಾರ್‍ ಅಧಿಕಾರಿಯಾಗಿ ನಟಿಸುತ್ತಿದ್ದಾರೆ. ಇನ್ನೂ ಚಿತ್ರತಂಡ ಇದೀಗ ಆಕೆಗೆ ವೆಲ್ ಕಂ ಮಾಡುತ್ತಾ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ಸಿನೆಮಾದಲ್ಲಿ ಮಾನುಷಿ ಚಿಲ್ಲರ್‍ ವರುಣ್ ಜೊತೆಗೆ ರೊಮ್ಯಾನ್ಸ್ ಮಾಡಲಿದ್ದು, ಈ ಸಿನೆಮಾದ ಮೇಲೆ ವರುಣ್ ಅಭಿಮಾನಿಗಳೂ ಸಹ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನೆಮಾ ಆದರೂ ಮಾನುಷಿ ಚಿಲ್ಲರ್‍ ಗೆ ಬಿಗ್ ಬ್ರೇಕ್ ನೀಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top