Film News

ಮೊಮ್ಮಗಳ ವಯಸ್ಸಿನ ಹುಡುಗಿಯನ್ನು ಮದುವೆಯಾಗುತ್ತಾರಾ ಅಮೀರ್ ಖಾನ್, ವೈರಲ್ ಆದ ವಿಮರ್ಶೆಗಳು…..!

ಬಾಲಿವುಡ್ ನ ಖ್ಯಾತ ನಟ ಅಮೀರ್‍ ಖಾನ್ ಮಿಸ್ಟರ್‍ ಪರ್ಫೆಕ್ಟ್ ನಟನಾಗಿ ಮುನ್ನುಗ್ಗುತ್ತಿದ್ದಾರೆ. ತನ್ನದೇ ಆದ ಕ್ರೇಜ್ ಸಂಪಾದಿಸಿಕೊಂಡು ಸ್ಟಾರ್‍ ನಟನಾಗಿ ಸೂಪರ್‍ ಡೂಪರ್‍ ಹಿಟ್ ಸಿನೆಮಾಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದ್ದಾರೆ. ಕಮರ್ಷಿಯಲ್ ಸಿನೆಮಾಗಳಿಂದ ದೂರವುಳಿದ ಈತ ಕಂಟೆಂಟ್ ಇರುವಂತಹ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ಇನ್ನೂ ಇತ್ತೀಚಿಗೆ ಅಮೀರ್‍ ಖಾನ್ ತಮ್ಮ ವೈಯುಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವೊಂದು ವಿಚಾರಗಳಿಗಾಗಿ ದೊಡ್ಡ ಸುದ್ದಿಯಾಗುತ್ತಿದ್ದಾರೆ. ಆತ ಮದುವೆಯ ವಿಚಾರಗಳಿಗಾಗಿ ದೊಡ್ಡ ಮಟ್ಟದ ವಿಮರ್ಶೆಗಳಿಗೆ ಗುರಿಯಾಗುತ್ತಿದ್ದಾರೆ.

ನಟ ಅಮೀರ್‍ ಖಾನ್ ರವರ ಪತಿ ರಿನಾ ದತ್ತಾಗೆ ಹದಿನೈದು ವರ್ಷಗಳ ಹಿಂದೆಯಷ್ಟೆ ವಿಚ್ಚೇದನ ನೀಡಿದ್ದರು. ಬಳಿಕ ಕಿರಣ್ ರಾವ್ ಎಂಬಾಕೆಯನ್ನು ಮದುವೆಯಾದರು. ಆಕೆಗೂ ಸಹ ಇತ್ತೀಚಿಗಷ್ಟೆ ವಿಚ್ಚೇದನ ನೀಡಿದ್ದಾಗಿ ಪ್ರಕಟಿಸಿದರು. ಈ ಸುದ್ದಿ ಇಡೀ ದೇಶದಾದ್ಯಂತ ದೊಡ್ಡ ಮಟ್ಟದಲ್ಲೇ ಸುದ್ದಿಯಾಗಿತ್ತು. ಇದೀಗ ಅಮೀರ್‍ ಖಾನ್ ಮೂರನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೊಂದು ಕೇಳಿಬರುತ್ತಿದೆ. ದಂಗಲ್ ಸಿನೆಮಾದಲ್ಲಿ ಅಮೀರ್‍ ಖಾನ್ ಪುತ್ರಿಯಾಗಿ ನಟಿಸಿದ್ದಂತಹ ಫಾತಿಮಾ ಸನಾ ಶೇಕ್ ರನ್ನು ಮದುವೆಯಾಗುತ್ತಿರುವುದಾಗಿ ಕೆಲವೊಂದು ಸುದ್ದಿಗಳು ಕೇಳಿಬರುತ್ತಿವೆ. ಈ ಸುದ್ದಿಯನ್ನು ಟ್ವೀಟ್ ಮಾಡಿದ್ದು ಬೇರೆ ಯಾರೂ ಅಲ್ಲ ಬಾಲಿವುಡ್ ವಿಮರ್ಶಕ ಕೆ.ಆರ್‍.ಕೆ. ಸಿನಿರಂಗದ ದೊಡ್ಡ ದೊಡ್ಡ ಸೆಲೆಬ್ರೆಟಿಗಳ ಬಗ್ಗೆ ಕೆಲವೊಂದು ಆರೋಪಗಳನ್ನು ಮಾಡುವ ಮೂಲಕ ಸುದ್ದಿಯಾಗುತ್ತಿರುತ್ತಾರೆ.

ಬಾಲಿವುಡ್ ಸೀನಿಯರ್‍ ನಟ ಅಮೀರ್‍ ಖಾನ್ ಹಾಗೂ ಯಂಗ್ ನಟಿ ಫಾತಿಮಾ ನಡುವೆ ಅಫೈರ್‍ ನಡೆಯುತ್ತಿದೆ. ಈ ಕಾರಣದಿಂದಲೇ ಆತ ಕಿರಣ್ ರಾವ್ ನಿಂದ ಬೇರೆಯಾದರು. 29 ವರ್ಷದ ಫಾತಿಮಾ 56 ವರ್ಷದ ಅಮೀರ್‍ ಖಾನ್ ಜೊತೆಗೆ ಎರಡು ಸಿನೆಮಾಗಳನ್ನು ಮಾಡಿದ್ದು, ಅದೇ ಸಮಯದಲ್ಲಿ ಅವರಿಬ್ಬರ ನಡುವೆ ಪ್ರೇಮಾಂಕುರವಾಗಿದೆ. ಅವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ ರೂಮರ್‍ ಗಳು ಸಹ ಅಂದು ಬಾಲಿವುಡ್ ಅಂಗಳದಲ್ಲಿ ಕೇಳಿಬಂದಿತ್ತು. ಆ ಸಮಯದಲ್ಲಿ ಅಮೀರ್‍ ಖಾನ್ ಸಹ ಅದನ್ನು ಅಷ್ಟೊಂದು ಕಿವಿಗೆ ಹಾಕಿಕೊಂಡಿರಲಿಲ್ಲ. ಆದರೆ ಫಾತಿಮಾ ಮಾತ್ರ ತನ್ನ ಬಗ್ಗೆ ಅಂತಹ ತಪ್ಪು ಸುದ್ದಿಯನ್ನು ಹರಿಬಿಡುವುದು ಸರಿಯಲ್ಲ ಎಂದು ಸೀರಿಯಸ್ ಆಗಿಯೇ ವಾರ್ನ್ ಮಾಡಿದ್ದರು. ಅದು ಏನೆ ಇರಲಿ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಅಮೀರ್‍ ಖಾನ್ ಬಗ್ಗೆ ಭಾರಿ ವಿಮರ್ಶೆಗಳು ಎದುರಾಗುತ್ತಲೆ ಇದೆ.

ಇನ್ನೂ ಬಾಲನಟಿಯಾಗಿ ಅನೇಕ ಹಿಂದಿ ಸಿನೆಮಾಗಳಲ್ಲಿ ನಟಿಸಿದ್ದ ಫಾತಿಮಾ ಸನಾ ಹೈದರಾಬಾದ್ ನಲ್ಲಿ ಜನಿಸಿದರು. ಅಮೀರ್‍ ಖಾನ್ ಜೊತೆಗೆ ದಂಗಲ್ ಸಿನೆಮಾದಲ್ಲಿ ಬಳಿಕ ಥಗ್ಸ್ ಆಫ್ ಹಿಂದೂಸ್ಥಾನ್ ಸಿನೆಮಾದಲ್ಲಿ ಜೋಡಿಯಾಗಿ ನಟಿಸಿದ್ದರು. ಇನ್ನೂ ಮುಂಬೈನಲ್ಲಿ ಫಾತಿಮಾ ಅಮೀರ್‍ ಖಾನ್ ಮನೆಗೆ ಹೋಗುವುದು, ಅಂಬಾನಿ ಮನೆಯಲ್ಲಿ ನಡೆದ ಕಾರ್ಯದಲ್ಲೂ ಅವರಿಬ್ಬರು ಜೋಡಿಯಾಗಿ ಕಾಣಿಸಿಕೊಂಡಿದ್ದು ಈ ರೂಮರ್‍ ಗಳು ಮತಷ್ಟು ಹೆಚ್ಚಾಗಲು ಕಾರಣವಾಗಿದೆ ಎನ್ನಲಾಗುತ್ತಿದೆ.

Most Popular

To Top