ಪತಿಗೆ ವಿಚ್ಚೇದನ ನೀಡಲಿದ್ದಾರಂತೆ ಕಿರುತೆರೆ ನಟಿ ಮಹಾಲಕ್ಷ್ಮೀ ವೈರಲ್ ಆದ ಸುದ್ದಿ, ಅಷ್ಟಕ್ಕೂ ನಡೆದಿದ್ದು ಏನು, ವೈರಲ್ ಆದ ಸುದ್ದಿ….!

ಸೌತ್ ಇಂಡಸ್ಟ್ರಿಯಲ್ಲಿ ಇತ್ತೀಚಿಗೆ ತುಂಬಾನೆ ಸದ್ದು ಮಾಡಿದ ಮದುವೆ ಎಂದರೇ ಅದು ಮಹಾಲಕ್ಷ್ಮೀ ರವೀಂದರ್‍ ಮದುವೆ ಎಂದು ಹೇಳಬಹುದು. ಸ್ಟಾರ್‍ ಸೆಲೆಬ್ರೆಟಿಗಳ ಮದುವೆಗಿಂತಲೂ ಈ ಜೋಡಿಯ ಮದುವೆ ಎಲ್ಲಾ ಕಡೆ ಸಖತ್ ಸೌಂಡ್ ಮಾಡಿತ್ತು.…

ಸೌತ್ ಇಂಡಸ್ಟ್ರಿಯಲ್ಲಿ ಇತ್ತೀಚಿಗೆ ತುಂಬಾನೆ ಸದ್ದು ಮಾಡಿದ ಮದುವೆ ಎಂದರೇ ಅದು ಮಹಾಲಕ್ಷ್ಮೀ ರವೀಂದರ್‍ ಮದುವೆ ಎಂದು ಹೇಳಬಹುದು. ಸ್ಟಾರ್‍ ಸೆಲೆಬ್ರೆಟಿಗಳ ಮದುವೆಗಿಂತಲೂ ಈ ಜೋಡಿಯ ಮದುವೆ ಎಲ್ಲಾ ಕಡೆ ಸಖತ್ ಸೌಂಡ್ ಮಾಡಿತ್ತು. ತಮಿಳು ಸಿನಿರಂಗದ ಖ್ಯಾತ ನಿರ್ಮಾಪಕ ರವಿಂದರ್‍ ಹಾಗೂ ಕಿರುತೆರೆ ನಟಿ ಮಹಾಲಕ್ಷ್ಮೀ ಇತ್ತೀಚಿಗಷ್ಟೆ ಮದುವೆಯಾದರು. ಇಬ್ಬರಿಗೂ ಇದು ಎರಡನೇ ಮದುವೆಯಾಗಿದ್ದು, ಮದುವೆಯಾದಾಗಿನಿಂದ ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ. ಆದರೆ ಅವರಿಬ್ಬರು ವಿಚ್ಚೇದನಕ್ಕೆ ಮುಂದಾಗಿದ್ದಾರೆ ಎಂಬ ಸುದ್ದಿಯೊಂದು ಕೇಳಿಬಂದಿದ್ದು, ಒಂದು ಪೊಟೋ ಮೂಲಕ ಆ ಸುದ್ದಿಗೆ ಕ್ಲಾರಿಟಿ ಕೊಟ್ಟಿದ್ದಾರೆ ಮಹಾಲಕ್ಷ್ಮೀ..

ನಿರ್ಮಾಪಕ ರವಿಂದರ್‍ ಹಾಗೂ ಮಹಾಲಕ್ಷ್ಮೀ ತಮ್ಮ ಮೊದಲ ಪತಿ ಹಾಗೂ ಪತ್ನಿಗೆ ವಿಚ್ಚೇದನ ನೀಡಿ ಕೆಲವು ದಿನಗಳ ಕಾಲ ಇಬ್ಬರೂ ಪ್ರೀತಿಸಿ ಅದ್ದೂರಿಯಾಗಿ ಸಪ್ತಪದಿ ತುಳಿದರು. ಅವರಿಬ್ಬರ ಮದುವೆ ವಿಚಾರ ಸೋಷಿಯಲ್ ಮಿಡಿಯಾದಲ್ಲಿ ಕಾಣಿಸಿದ್ದೇ ತಡ ಪ್ರತಿನಿತ್ಯ ಅವರನ್ನು ಟ್ರೋಲ್ ಮಾಡುತ್ತಲೇ ಇದ್ದರು. ಮೊದಲಿಗೆ ಮಹಾಲಕ್ಷ್ಮೀ ಸಹ ತಮ್ಮನ್ನ ಟ್ರೋಲ್ ಮಾಡಬೇಡಿ ಎಂದು ಕೇಳಿಕೊಂಡಿದ್ದರು. ಆದರೂ ಸಹ ಟ್ರೋಲ್ ಗಳು ನಿಲ್ಲದ ಕಾರಣ ಯಾವ ಟ್ರೋಲ್ ಗಳನ್ನು ಸಹ ಕಿವಿಗೆ ಹಾಕಿಕೊಳ್ಳದೇ ತಮ್ಮ ವೈವಾಹಿಕ ಜೀವನವನ್ನು ಸಂತೋಷದಿಂದ ಕಳೆಯುತ್ತಿದ್ದಾರೆ. ಆದರೆ ಕೆಲವು ದಿನಗಳಿಂದ ಅವರ ಪೊಟೋಗಳನ್ನು ಸೊಷಿಯಲ್ ಮಿಡಿಯಾದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಈ ಕಾರಣದಿಂದ ಅವರಿಬ್ಬರ ನಡುವೆ ವಿಬೇದಗಳು ಉಂಟಾಗಿದ್ದು, ಬೇರೆಯಾಗಲಿದ್ದಾರೆ ಎಂಬ ರೂಮರ್‍ ಹುಟ್ಟಿಕೊಂಡಿದೆ.

ಇನ್ನೂ ನಟಿ ಮಹಾಲಕ್ಷ್ಮೀ ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿಯೇ ಇರುತ್ತಾರೆ. ಪತಿಯೊಂದಿಗೆ ಇರುವಂತಹ ರೊಮ್ಯಾಂಟಿಕ್ ಪೊಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಅವರಿಬ್ಬರು ಬೇರೆಯಾಗಿದ್ದಾರೆ ಎಂಬ ಸುದ್ದಿಯೊಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಸದ್ದು ಮಾಡಿತ್ತು. ಆದರೆ ಈ ರೂಮರ್‍ ಗಳಿಗೆ ಒಂದೇ ಪೊಟೋ ಮೂಲಕ ಮಹಾಲಕ್ಷ್ಮೀ ಕ್ಲಾರಿಟಿ ಕೊಟ್ಟಿದ್ದಾರೆ. ಮಹಾಲಕ್ಷ್ಮೀ ತನ್ನ ಪತಿಯೊಂದಿಗೆ ಇರುವಂತಹ ಪೊಟೊ ಒಂದನ್ನು ಹಂಚಿಕೊಂಡು ರೊಮ್ಯಾಂಟಿಕ್ ಕ್ಯಾಪ್ಷನ್ ಒಂದನ್ನು ಹಾಕುವ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ. ಆ ಮೂಲಕ ತಮ್ಮ ಮೇಲೆ ಬಂದಂತಹ ರೂಮರ್‍ ಗಳಿಗೆ ಚೆಕ್ ಇಟ್ಟಿದ್ದಾರೆ.

ಇನ್ನೂ ಮಹಾಲಕ್ಷ್ಮೀ ಪೊಟೋ ಜೊತೆಗೆ ರೊಮ್ಯಾಂಟಿಕ್ ಸಂದೇಶವೊಂದನ್ನು ರವಾನಿಸಿದ್ದಾರೆ. ನೀನು ನನ್ನ ಭುಜದ ಮೇಲೆ ಕೈ ಹಾಕಿದಾಗ ಈ ಪ್ರಪಂಚದಲ್ಲಿ ಏನಾದರೂ ಮಾಡಬಹುದು ಎಂಬ ಧೈರ್ಯ ನನ್ನಲ್ಲಿ ಇರುತ್ತದೆ. ನನ್ನ ಮನಸಿನ ತುಂಬಾ ನೀನೆ ಇದ್ದೀಯಾ ಅಮ್ಮು, ಐ ಲವ್ ಯೂ ಎಂದು ಸಂದೇಶ ಹಾಕಿದ್ದಾರೆ. ಅದಕ್ಕೆ ರವೀಂದರ್‍ ಸಹ ಲವ್ ಯೂ ಎಂದು ರೊಮ್ಯಾಂಟಿಕ್ ರಿಪ್ಲೆ ಕೊಟ್ಟಿದ್ದಾರೆ. ಇದೀಗ ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.