ನನ್ನ ಮಗಳಿಗೆ ಮದುವೆ ಮಾಡೊಲ್ಲ ಎಂದ ನಿದೇರ್ಶಕ, ನಿರ್ದೇಶಕ ತೇಜ ಕಾಮೆಂಟ್ಸ್ ವೈರಲ್…..!

ತೆಲುಗು ಸಿನಿರಂಗದಲ್ಲಿ ಡೇರಿಂಗ್ ಅಂಡ್ ಡ್ಯಾಷಿಂಗ್ ನಿರ್ದೇಶಕರಲ್ಲಿ ಡೈರೆಕ್ಟರ್‍ ತೇಜ ಸಹ ಒಬ್ಬರಾಗಿದ್ದಾರೆ. ಏನೇ ವಿಚಾರವಿದ್ದರೂ ಸಹ ನೇರ ಹಾಗೂ ನಿಷ್ಟೂರವಾಗಿ ಹೇಳುವಂತಹ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಅವರ ಯೋಚನೆಗಳೂ ಸಹ ವಿಭಿನ್ನವಾಗಿಯೇ ಇರುತ್ತವೆ. ಜೊತೆಗೆ ಕೆಲವೊಂದು ಕಾರ್ಯಕ್ರಮಗಳಲ್ಲಿ ಸಂದರ್ಶನಗಳಲ್ಲಿ ಅವರು ಶಾಕಿಂಗ್ ಕಾಮೆಂಟ್ ಗಳನ್ನು ಮಾಡುತ್ತಿರುತ್ತಾರೆ. ಇದೀಗ ಅವರು ತಮ್ಮ ಮಗಳಿಗೆ ಮದುವೆ ಮಾಡೋಲ್ಲ ಎಂದು ಕಾಮೆಂಟ್ ಮಾಡಿದ್ದು, ಕಾಮೆಂಟ್ ಗಳು ವೈರಲ್ ಆಗಿದೆ.

ತೇಜ ನಿರ್ದೇಶನದಲ್ಲಿ ಅಹಿಂಸ ಎಂಬ ಸಿನೆಮಾ ಇದೇ ಜೂ.2 ರಂದು ರಿಲೀಸ್ ಆಗಲಿದೆ. ಈ ಸಿನೆಮಾದಲ್ಲಿ ರಾಣಾ ದಗ್ಗುಬಾಟಿ ಸಹೋದರ ಅಭಿರಾಮ್ ಹಿರೋ ಆಗಿ ನಟಿಸಿದ್ದಾರೆ. ಈ ಸಿನೆಮಾದ ಪ್ರಮೋಷನ್ ಸಹ ಜೋರಾಗಿಯೇ ಸಾಗುತ್ತಿದೆ. ಈ ಪ್ರಮೋಷನ್ ನಲ್ಲೇ ತೇಜ ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಈ ವೇಳೆ ತಮ್ಮ ಮಗನ ಬಗ್ಗೆ ಪ್ರಶ್ನೆ ಎದುರಾಗಿದೆ. ತೇಜ ಮಗ ಹಿರೋ ಆಗಲಿದ್ದಾರೆಯೇ ಎಂಬ ಪ್ರಶ್ನೆ ಎದುರಾಗಿದ್ದು, ಅದಕ್ಕೆ ತೇಜ ಉತ್ತರ ನೀಡಿದ್ದಾರೆ. ಸದ್ಯ ತೇಜ ಪುತ್ರ ನಿರ್ದೇಶನದ ಕೋರ್ಸ್ ಪೂರ್ಣಗೊಳಿಸಿದ್ದು ಶೀಘ್ರದಲ್ಲೇ ನಿರ್ದೇಶಕನಾಗಿ ಪರಿಚಯವಾಗಲಿದ್ದಾರೆ ಎಂದು ಹೇಳಿದ್ದಾರೆ. ಇದೇ ಸಮಯದಲ್ಲಿ ಮಗಳ ಬಗ್ಗೆ ಸಹ ಬೋಲ್ಡ್ ಕಾಮೆಂಟ್ ಗಳನ್ನು ಮಾಡಿದ್ದಾರೆ.

ಸದ್ಯ ನನ್ನ ಮಗಳು ವಿದೇಶಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆಕೆಗೆ ನಾನು ಮದುವೆ ಮಾಡುವುದಿಲ್ಲ. ನಿನಗೆ ಇಷ್ಟ ಬಂದವನನ್ನು ರಿಜಿಸ್ಟರ್‍ ಮ್ಯಾರೇಜ್ ಮಾಡಿಕೋ ಎಂದು ಹೇಳಿದ್ದೇನೆ. ಬಳಿಕ ಎಲ್ಲರಿಗೂ ಊಟ ಹಾಕಿಸೋಣ ಎಂದಿದ್ದೇನೆ. ಮದುವೆಯಾದ ಬಳಿಕ ಪತಿ ಇಷ್ಟವಾಗಿಲ್ಲ ಅಂದರೇ ವಿಚ್ಚೇದನ ಪಡೆದುಕೊ ಎಂದೂ ಸಹ ಹೇಳಿದ್ದೇನೆ. ನಾವು ಸಂತೋಷದಿಂದ ಬದುಕುವುದು ಮುಖ್ಯ. ಜನರು ಏನು ಅಂದುಕೊಂಡರೇ ನಮಗೆನು ಎಂಬುದಾಗಿ ನನ್ನ ಮಕ್ಕಳಿಗೆ ಹೇಳಿದ್ದೇನೆ ಎಂದು ತೇಜ ಹೇಳಿದ್ದಾರೆ. ಇನ್ನೂ ಮಗಳ ಬಗ್ಗೆ ಈ ರೀತಿಯಲ್ಲಿ ಆಲೋಚನೆ ಮಾಡಿದವರು ಬೇರೆ ಯಾರೂ ಇರೊಲ್ಲ ಎಂದುಕೊಳ್ಳಬಹುದು.

ಇನ್ನೂ ಈ ಹಿಂದೆ ತೇಜ ನಟ ಉದಯ್ ಕಿರಣ್ ರವರ ಮರಣದ ಬಗ್ಗೆ ಸಹ ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದರು. ಉದಯ ಕಿರಣ್ ಆತ್ಮಹತ್ಯೆ ಏಕೆ ಮಾಡಿಕೊಂಡರು ಎಂಬ ಬಗ್ಗೆ ಎಲ್ಲರಿಗೂ ತಿಳಿದಿದೆ ಆದರೆ ಅದನ್ನು ನನ್ನಿಂದ ಹೊರತರಬೇಕೆಂದು ಕಾಯುತ್ತಿದ್ದಾರೆ ಎಂದು ಹೇಳಿದ್ದರು. ಇನ್ನೂ ತೇಜಗೆ ಒಳ್ಳೆಯ ಹಿಟ್ ಸಿನೆಮಾ ಸಿಕ್ಕಿ ಸುಮಾರು ವರ್ಷಗಳು ಕಳೆದಿದೆ. ಇದೀಗ ತೇಜ ರವರ ಅಹಿಂಸಾ ಸಿನೆಮಾ ಯಾವ ರೀತಿಯ ಸಕ್ಸಸ್ ಕಾಣುತ್ತೆ ಎಂಬುದನ್ನು ಕಾದು ನೋಡಬೇಕಿದೆ.