Film News

ನನ್ನ ಮೇಲೂ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದ ಬಾಲಿವುಡ್ ನಟ, ಅದರಿಂದ ಹೊರಬರಲು ತುಂಬಾ ಕಷ್ಟಪಟ್ಟಿದ್ದರಂತೆ…!

ಸಿನಿರಂಗದಲ್ಲಿ ಕಾಸ್ಟಿಂಗ್ ಕೌಚ್ ಹೆಸರಿನಲ್ಲಿ ಅನೇಕ ನಟಿಯರ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆದಿದೆ. ಈ ಬಗ್ಗೆ ಅನೇಕ ನಟಿಯರು  ಹೇಳಿಕೊಂಡಿದ್ದಾರೆ. ಅದರಲ್ಲೂ ಮಿಟೂ ಅಭಿಯಾನದ ಬಳಿಕ ಇಂತಹ ಘಟನೆಗಳು ಹೆಚ್ಚು ಹೆಚ್ಚು ಪ್ರಚಲಿತಕ್ಕೆ ಬಂದವು. ಇಂತಹ ಲೈಂಗಿಕ ದೌರ್ಜನ್ಯಗಳು ಕೇವಲ ಮಹಿಳೆಯರಿಗೆ ಮಾತ್ರವಲ್ಲ ಪುರುಷರಿಗೂ ಸಹ ಎದುರಾಗಿರುತ್ತವೆ. ಇದೀಗ ತಾನು ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗಿದ್ದಾಗಿ ಬಾಲಿವುಡ್ ಹಿರಿಯ ನಟ ಪಿಯೂಷ್ ಮಿಶ್ರಾ ಹೇಳಿದ್ದಾರೆ.

ಬಾಲಿವುಡ್ ಹಿರಿಯ ನಟ, ರಚನೆಕಾರ ಕಂ ಗಾಯಕ ಪಿಯೂಷ್ ಮಿಶ್ರಾ ತುಮ್ಹಾರಿ ಔಕಾತ್ ಕ್ಯಾ ಹೈ ಪಿಯೂಷ್ ಮಿಶ್ರಾ ಎಂಬ ಆತ್ಮ ಚರಿತ್ರೆಯನ್ನು ಬರೆದಿದ್ದು, ಇದರಲ್ಲಿ ತನ್ನ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯದ ಬಗ್ಗೆ ದಾಖಲಿಸಿದ್ದಾರೆ. ನಟ ಪಿಯೂಷ್ ಮಿಶ್ರಾ ರವರು 7ನೇ ತರಗತಿಯಲ್ಲಿದ್ದಾಗ ಅವರ ಮಹಿಳಾ ಸಂಬಂಧಿಕರೊಬ್ಬರು ಲೈಂಗಿಕವಾಗಿ ಹಿಂಸೆ ನೀಡಿದ್ದರಂತೆ. ಇದರಿಂದ ಅವರಿಗೆ ತುಂಬಾ ಮಾನಸಿಕ ಹಿಂಸೆಯಾಗಿತ್ತಂತೆ. ಆದರೆ ಆಕೆಯ ಮೇಲೆ ಸೇಡು ತೀರಿಸಿಕೊಲ್ಳಬೇಕು ಎಂದೂ ಸಹ ಅವರಿಗೆ ಅನ್ನಿಸಿಲ್ಲವಂತೆ. ಇನ್ನೂ ಇದನ್ನು ಮಾದ್ಯಮಗಳ ಮುಂದೆ ಸಹ ಹೇಳಿದ್ದಾರೆ. ಸಾಮಾನ್ಯವಾಗಿ ಶೃಂಗಾರ ಎಂಬುದು ಆರೋಗ್ಯಕರವಾಗಿರಬೇಕು. ಆದರೆ ಅದು ಅಭ್ಯಂತರವಾಗಿ ಅಥವಾ ಇಷ್ಟವಿಲ್ಲ ಎಂದಿದ್ದರೇ ಅದರಿಂದ ಹೊರಬರಲು ತುಂಬಾ ಕಷ್ಟ ಪಡಬೇಕು. ಆ ರೀತಿಯಾದರೆ ಜೀವನ ಪೂರ್ತಿ ಅದು ನೋವು ಕೊಡುತ್ತದೆ ಎಂದು ಹೇಳಿದ್ದಾರೆ.

ಅಷ್ಟೇಅಲ್ಲದೇ ನನಗೆ ಇದೇ ರೀತಿ ಚಿಕ್ಕ ವಯಸ್ಸಿನಲ್ಲಿ ನಡೆದಿತ್ತು. ಅಷ್ಟೇಅಲ್ಲದೇ ಕೆಲವು ಹೆಸರುಗಳನ್ನೂ ಸಹ ಗುಟ್ಟಾಗಿಡಬೇಕು ಎಂದುಕೊಂಡಿದ್ದೇನೆ. ಅವರಲ್ಲಿ ಕೆಲವು ಮಹಿಳೆಯರು ಹಾಗೂ ಪುರುಷರೂ ಸಹ ಸಿನಿರಂಗದಲ್ಲಿ ಚೆನ್ನಾಗಿ ನೆಲೆ ಕಂಡುಕೊಂಡಿದ್ದಾರೆ. ನಾನು ಅವರ ಮೇಲೆ ಸೇಡು ತೀರಿಸಿಕೊಳ್ಳಲು ಸಹ ಮುಂದಾಗುವುದಿಲ್ಲ ಎಂದು ಪಿಯೂಷ್ ಹೇಳಿದ್ದಾರೆ. ಸದ್ಯ ಪಿಯೂಷ್ ನೀಡಿದ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಇನ್ನೂ ಪಿಯೂಷ್ ಮದ್ಯಮ ವರ್ಗದಿಂದ ಬಂದು ಸ್ಟಾರ್‍ ನಟನಾಗಿ ಸಿನೆಮಾಗಳಲ್ಲಿ ಕ್ರೇಜ್ ಪಡೆದುಕೊಂಡಿದ್ದಾರೆ.  ರಂಗಭೂಮಿಯಿಂದ ಸಿನೆಮಾಗಳತ್ತ ಮುಖ ಮಾಡಿದ ಅವರು, ಗ್ಯಾಂಗ್ಸ್ ಆಫ್ ವಸ್ಸೇಪುರ್‍, ರಿವಾಲ್ವಾರ್‍ ರಾಣಿ, ಪಿಂಕ್, ಸಂಜು, ತಮಾಷಾ ಸೇರಿದಂತೆ ಅನೇಕ ಸಿನೆಮಾಗಳಲ್ಲಿ ಪಿಯೂಷ್ ಮಿಶ್ರಾ ನಟಿಸಿದ್ದಾರೆ. ಜೊತೆಗೆ ಕೆಲವೊಂದು ಸಿನೆಮಾಗಳಲ್ಲಿ ಸಂಗೀತ ಸಹ ಸಂಯೋಜನೆ ಮಾಡಿದ್ದಾರೆ.

Most Popular

To Top