Film News

ಮಹೇಶ್ ಬಾಬು ಸಿನೆಮಾಗಾಗಿ ಬಿಗ್ ಪ್ಲಾನ್ ಮಾಡಿದ ರಾಜಮೌಳಿ, ಹಾಲಿವುಡ್ ಕಲಾವಿದರನ್ನು ಕರೆಸುತ್ತಾರಂತೆ?

ಸಿನೆಮಾಗಳಲ್ಲಿ ವಿಭಿನ್ನತೆಯನ್ನು ಪ್ರಯೋಗ ಮಾಡುವುದರಲ್ಲಿ ಪ್ಯಾನ್ ಇಂಡಿಯಾ ನಿರ್ದೇಶಕ ರಾಜಮೌಳಿ ಸದಾ ಮುಂದಿರುತ್ತಾರೆ. ಈಗಾಗಲೇ RRR ಸಿನೆಮಾದ ಮೂಲಕ ವಿಶ್ವದಲ್ಲೇ ದೊಡ್ಡ ಮಟ್ಟದ ಖ್ಯಾತಿಯನ್ನು ಪಡೆದುಕೊಂಡರು. ಈ ಸಿನೆಮಾದ ಬಳಿಕ ರಾಜಮೌಳಿ ತಮ್ಮ ಮುಂದಿನ ಸಿನೆಮಾವನ್ನು ಮಹೇಶ್ ಬಾಬು ರವರ ಜೊತೆ ತೆರೆಗೆ ತರಲಿದ್ದಾರೆ. ಇದೀಗ ಈ ಸಿನೆಮಾದಲ್ಲಿ ಹಾಲಿವುಡ್ ಕಲಾವಿದರು ನಟಿಸಲಿದ್ದಾರೆ ಎಂಬ ಸುದ್ದಿಯೊಂದು ಟಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ.

ಮೊದಲ ಬಾರಿಗೆ ಮಹೇಶ್ ಬಾಬು ಹಾಗೂ ರಾಜಮೌಳಿ ಕಾಂಬಿನೇಷನ್ ನಲ್ಲಿ ಸಿನೆಮಾ ತೆರೆಗೆ ಬರಲಿದೆ. ಈ ಸಿನೆಮಾಗಾಗಿ ಸ್ಕ್ರಿಪ್ಟ್ ಸಹ ಸಿದ್ದವಾಗಿದೆ. ರಾಜಮೌಳಿಯವರ ತಂದೆ ವಿಜಯೇಂಧ್ರ ಪ್ರಸಾದ್ ಆಕ್ಷನ್ ಅಡ್ವೆಂಚರ್‍ ಕಥೆಯೊಂದನ್ನು ಸಿದ್ದ ಮಾಡಿದ್ದಾರೆ. ಇಡೀ ಪ್ರಪಂಚವನ್ನು ಸುತ್ತಾಡುವಂತಹ ಸಾಹಸ ಮಾಡುವಂತಹ ಕಥೆ ಈ ಸಿನೆಮಾ ಆಗಿರಲಿದೆ ಎಂದು ಈ ಹಿಂದೆಯೇ ರಾಜಮೌಳಿ ಹೇಳಿದ್ದರು. ಇನ್ನೂ ಈ ಸಿನೆಮಾ RRR ಸಿನೆಮಾಗೂ ಮೀರಿದ ಬಜೆಟ್ ನಲ್ಲಿ ಮೂಡಿಬರಲಿದೆ ಎನ್ನಲಾಗಿದೆ. ಸುಮಾರು ಸಾವಿರ ಕೋಟಿ ವೆಚ್ಚದಲ್ಲಿ ಈ ಸಿನೆಮಾ ತೆರೆಗೆ ಬರಲಿದ್ದು, ಸಿನೆಮಾ ಪ್ರೀ ಪ್ರೊಡಕ್ಷನ್ ಕೆಲಸಗಳೂ ಸಹ ಶೂರುವಾಗಿದೆಯಂತೆ. ಸದ್ಯದ ಮಾಹಿತಿ ಪ್ರಕಾರ ಇನ್ನೇನು ನಾಲ್ಕು ತಿಂಗಳಲ್ಲಿ ಈ ಸಿನೆಮಾದ ರೆಗ್ಯೂಲರ್‍ ಶೂಟಿಂಗ್ ಸಹ ಶುರುವಾಗಲಿದೆ ಎನ್ನಲಾಗಿದೆ.

ಇನ್ನೂ ನಿರ್ದೇಶಕ ರಾಜಮೌಳಿ RRR ಸಿನೆಮಾದ ಮೂಲಕ ವಿಶ್ವ ಮಟ್ಟದಲ್ಲಿ ಇಮೇಜ್ ಸ್ವಂತ ಮಾಡಿಕೊಂಡಿದ್ದಾರೆ. ಅಂತರಾಷ್ಟ್ರೀಯ ಮಟ್ಟದ ಅನೇಕ ಅವಾರ್ಡ್‌ಗಳನ್ನು ಸಹ ಪಡೆದುಕೊಂಡಿದ್ದಾರೆ. ಇದೀಗ ಮಹೇಶ್ ಬಾಬು ಜೊತೆಗೆ ಸಹ ಅಂತರಾಷ್ಟ್ರೀಯ ಮಟ್ಟದಲ್ಲಿ ಇಮೇಜ್ ಸಂಪಾದಿಸುವಂತಹ ಸಿನೆಮಾ ತೆಗೆಯಲು ಪ್ಲಾನ್ ಮಾಡಿದ್ದಾರೆ. ಇನ್ನೂ ಈ ಸಿನೆಮಾದ ಬಗ್ಗೆ ಸುದ್ದಿಯೊಂದು ಸೊಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಇನ್ನೂ ಈ ಸಿನೆಮಾದಲ್ಲಿ ಹಾಲಿವುಡ್ ಟೆಕ್ನಿಷಿಯನ್ ಗಳೂ ಸಹ ಕೆಲಸ ಮಾಡಲಿದ್ದಾರಂತೆ. ಜೊತೆಗೆ ಕೆಲವೊಂದು ದೃಶ್ಯಗಳು ಹಾಗೂ ಪಾತ್ರಗಳಿಗಾಗಿ ಹಾಲಿವುಡ್ ಕಲಾವಿದರನ್ನೂ ಸಹ ಸಂಪರ್ಕ ಮಾಡುತ್ತಿದ್ದಾರಂತೆ. ಇನ್ನೂ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಇಲ್ಲ. ಆದರೆ ಸುದ್ದಿ ಮಾತ್ರ ಟಾಲಿವುಡ್ ಅಂಗಳದಲ್ಲಿ ಹಾಟ್ ಟಾಪಿಕ್ ಆಗಿದೆ.

ಇನ್ನೂ ಈ ಸುದ್ದಿ ನಿಜವೇ ಆದರೇ ರಾಜಮೌಳಿಯವರ ಮತ್ತೊಂದು ಸಿನೆಮಾ ವಿಶ್ವ ಮಟ್ಟದಲ್ಲಿ ಖ್ಯಾತಿ ಪಡೆದುಕೊಳ್ಳಲಿದೆ ಎಂದು ಹೇಳಬಹುದಾಗಿದೆ. ಸದ್ಯ ಮಹೇಶ್ ಬಾಬು ತ್ರಿವಿಕ್ರಮ್ ಶ್ರೀನಿವಾಸ್ ಜೊತೆಗೆ SSMB28 ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಸದ್ಯ ಈ ಸಿನೆಮಾದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಈ ಸಿನೆಮಾ ಶೂಟಿಂಗ್ ಮುಗಿದ ಮೇಲೆ ರಾಜಮೌಳಿಯವರ ಸಿನೆಮಾದ ಶೂಟೀಂಗ್ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ.

Most Popular

To Top