5 ವರ್ಷಗಳ ಬಳಿಕ ಶ್ರೀದೇವಿ ಸಾವಿನ ಬಗ್ಗೆ ಬೋನಿ ಕಪೂರ್ ಬಿಚ್ಚಿಟ್ಟ ರಹಸ್ಯ, ಬೋನಿ ಕಪೂರ್ ಹೇಳಿದ್ದಾದರೂ ಏನು?

ಸೌತ್ ಅಂಡ್ ನಾರ್ತ್ ಸಿನಿರಂಗದಲ್ಲಿ ಅತಿಲೋಕ ಸುಂದರಿ ಎಂದೇ ಖ್ಯಾತಿ ಪಡೆದುಕೊಂಡ ಸ್ಟಾರ್‍ ನಟಿ ದಿವಂಗತ ಶ್ರೀದೇವಿ ಇಡೀ ದೇಶದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದರು. ಕಳೆದ ಫೆ.28, 2018 ರಂದು ಶ್ರೀದೇವಿ ಇಹಲೋಕ…

ಸೌತ್ ಅಂಡ್ ನಾರ್ತ್ ಸಿನಿರಂಗದಲ್ಲಿ ಅತಿಲೋಕ ಸುಂದರಿ ಎಂದೇ ಖ್ಯಾತಿ ಪಡೆದುಕೊಂಡ ಸ್ಟಾರ್‍ ನಟಿ ದಿವಂಗತ ಶ್ರೀದೇವಿ ಇಡೀ ದೇಶದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದರು. ಕಳೆದ ಫೆ.28, 2018 ರಂದು ಶ್ರೀದೇವಿ ಇಹಲೋಕ ತ್ಯೆಜಿಸಿದರು. ಈ ಸುದ್ದಿ ಕೇಳಿದ ಅವರ ಅಭಿಮಾನಿಗಳು ಶಾಕ್ ಆಗಿದ್ದರು. ದುಬೈನಲ್ಲಿ ಇಹಲೋಕ ತ್ಯೆಜಿಸಿದ ಶ್ರೀದೇವಿಯವರ ಮರಣದ ಬಗ್ಗೆ ಅನೇಕ ಅನುಮಾನಗಳು ಇಂದಿಗೂ ಸಹ ಇದೆ. ಇದೀಗ ಶ್ರೀದೇವಿ ಪತಿ ಬೋನಿ ಕಪೂರ್‍ ಕೆಲವೊಂದು ವಿಚಾರಗಳನ್ನು ರಿವೀಲ್ ಮಾಡಿದ್ದಾರೆ.

ನಟಿ ಶ್ರೀದೇವಿ ಇಹಲೋಕ ತ್ಯೆಜಿಸಿ ಐದು ವರ್ಷ ಕಳೆದರೂ ಸಹ ಜನರ ಮನದಲ್ಲಿ ಆಕೆಯ ಸ್ಥಾನ ಇನ್ನೂ ಹಾಗೆಯೇ ಉಳಿದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀದೇವಿ ಕುಟುಂಬಸ್ಥರೂ ಸಹ ಯಾವುದೇ ಹೇಳಿಕೆಯನ್ನು ನೀಡಿರಲಿಲ್ಲ. ಇದೀಗ ಐದು ವರ್ಷಗಳ ಬಳಿಕ ಬೋನಿ ಕಪೂರ್‍ ಆಕೆ ಸತ್ತ ರಾತ್ರಿಯಲ್ಲಿ ನಡೆದಿದ್ದೇನು ಎಂಬುದರ ಬಗ್ಗೆ ಮಾತನಾಡಿದ್ದಾರೆ. ಶ್ರೀದೇವಿ ಹೇಗೆ ಸತ್ತರು, ಸಾವಿನ ರಹಸ್ಯದ ಬಗ್ಗೆ ತಿಳಿಯಲು ಅಭಿಮಾನಿಗಳು ಸಹ ಕಾಯುತ್ತಿದ್ದರು. ಇದೀಗ ಶ್ರೀದೇವಿ ಪತಿ ಬೋನಿ ಕಪೂರ್‍ ಶ್ರೀದೇವಿ ಸಾವು ಸಹಜವಾಗಿ ಆಗಿಲ್ಲ ಎಂದು ಹೇಳಿದ್ದಾರೆ. ಐದು ವರ್ಷಗಳ ಬಳಿಕ ಶ್ರೀದೇವಿ ಸಾವಿನ ಬಗ್ಗೆ ಮೌನ ಮುರಿದಿದ್ದಾರೆ.

ಬಾಲಿವುಡ್ ಖ್ಯಾತ ನಿರ್ಮಾಪಕ ಬೋನಿ ಕಪೂರ್‍ ಮೊದಲ ಬಾರಿಗೆ ಶ್ರೀದೇವಿ ಸಾವಿನ ಬಗ್ಗೆ ಮಾತನಾಡಿದ್ದಾರೆ. ಖಾಸಗಿ ಮಾದ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಕೆಲವೊಂದು ಹೇಳಿಕೆಗಳು ನೀಡಿದ್ದಾರೆ ಎನ್ನಲಾಗಿದೆ. ಶ್ರೀದೇವಿಯವರದ್ದು ಸಹಜ ಸಾವಲ್ಲ, ಅದು ಆಕಸ್ಮಿಕ ಸಾವಾಗಿತ್ತು. ಆಕೆಯ ಸಾವಿನ ಬಗ್ಗೆ ನನ್ನನ್ನು ನಿರಂತರವಾಗಿ ವಿಚಾರಣೆ ಮಾಡಿದರು. ನಾನು ಎರಡು ದಿನಗಳ ಕಾಲ ಮಾತನಾಡದೇ ಇರಬೇಕೆಂದು ತೀರ್ಮಾಣ ತೆಗೆದುಕೊಂಡಿದ್ದೆ. ಆದರೆ ಮಾದ್ಯಮಗಳ ಒತ್ತಡದಿಂದ ಮಾತನಾಡಬೇಕಾಯ್ತು. ನಾನು ಸುಳ್ಳು ಪತ್ತೆ ಪರೀಕ್ಷೆ ಸೇರಿದಂತೆ ಎಲ್ಲಾ ಪರೀಕ್ಷೆಗಳಿಗೂ ಸಹ ಒಳಗಾಗಿದ್ದೆ. ಕೊನೆಗೆ ಶ್ರೀದೇವಿಯದ್ದು ಆಕಸ್ಮಿಕ ಸಾವು ಎಂದು ವರದಿ ಬಂತು ಎಂದು ಹೇಳಿದ್ದಾರೆ.  ಇನ್ನೂ ಶ್ರೀದೇವಿ ಸಾಯುವ ಸಮಯದಲ್ಲೂ ಡಯಟ್ ನಲ್ಲಿದ್ದರು. ಫಾಸ್ಟಿಂಗ್ ಮಾಡುತ್ತಿದ್ದರು. ಸೌಂದರ್ಯಕ್ಕಾಗಿ ಡಯಟ್ ಮಾಡಿದ್ರು. ನಮ್ಮ ಮದುವೆಯಾದಾಗಿನಿಂದ ಆಕೆಗೆ ಬ್ಲ್ಯಾಕ್ ಔಟ್ ಸಮಸ್ಯೆಯಿತ್ತು. ಲೋ ಬಿಪಿ ಸಮಸ್ಯೆಯಿಂದಲೂ ಸಹ ಬಳಲುತ್ತಿದ್ದರು ಎಂದು ವೈದ್ಯರು ಹೇಳುತ್ತಿದ್ದರು.

ಈ ಹಿಂದೆ ಶೂಟಿಂಗ್ ವೇಳೆಯಲ್ಲೂ ಸಹ ಬಾತ್ ರೂಂನಲ್ಲಿ ಮೂರ್ಚೆಹೋಗಿ ಬಿದಿದ್ದರು. ಈ ಬಗ್ಗೆ ನಟ ನಾಗಾರ್ಜುನ್ ಸಹ ನನ್ನೊಂದಿಗೆ ವಿಚಾರ ಹಂಚಿಕೊಂಡಿದ್ದರು. ಈ ರೀತಿಯಲ್ಲಿ ಸುಮಾರು 5 ವರ್ಷಗಳಾದ ಬಳಿಕ ಬೋನಿ ಕಪೂರ್‍ ಶ್ರೀದೇವಿ ಮರಣದ ಬಗ್ಗೆ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ.